Ad Widget .

ಕಾಸರಗೋಡು: ನೀಲೇಶ್ವರ ದಾಮೋದರ ತಂತ್ರಿ ಇನ್ನಿಲ್ಲ

Ad Widget . Ad Widget .

ಕಾಸರಗೋಡು: ದ.ಕ ಜಿಲ್ಲೆಯ ಹಲವಾರು ದೇವಸ್ಥಾನಗಳ ತಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸಿದ್ಧ ವೈದಿಕ ವಿದ್ವಾಂಸರಾದ ನೀಲೇಶ್ವರ ದಾಮೋದರ ತಂತ್ರಿಗಳವರು ನಿನ್ನೆ ರಾತ್ರಿ ನಿಧನರಾದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.

Ad Widget . Ad Widget .

ಪುತ್ತೂರು ಹಾಗೂ ಸುಳ್ಯ ತಾಲೂಕಿನ ಬಹುತೇಕ ದೇವಸ್ಥಾನಗಳಲ್ಲಿ ತಂತ್ರಿಗಳಾಗಿ ಮಾರ್ಗಸೂಚಿ ನೀಡುತ್ತಿದ್ದ ಅವರು ಸುಳ್ಯ ತಾಲೂಕಿನ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ, ಮರ್ಕಂಜದ ಕಾವೂರು, ರೆಂಜಾಳ, ಮಿನುಂಗೂರು ದೇವಸ್ಥಾನಗಳು, ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನ, ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮೊದಲಾದ ಹಲವಾರು ದೇವಸ್ಥಾನಗಳ ತಂತ್ರಿಗಳಾಗಿ ಅವರು ಸೇವೆ ಸಲ್ಲಿಸುತ್ತಿದ್ದರು.

Leave a Comment

Your email address will not be published. Required fields are marked *