Ad Widget .

ಉಡುಪಿ: ಶಬರಿಮಲೆಗೆ ತೆರಳಿದ್ದ ವೃತಧಾರಿ ಸ್ವಾಮಿಪಾದಕ್ಕೆ..!

ಉಡುಪಿ: ಜಿಲ್ಲೆಯಿಂದ ಶಬರಿಮಲೆ ಸನ್ನಿಧಾನಕ್ಕೆ ತೆರಳಿದ್ದ ಮಾಲಾಧಾರಿಯೋರ್ವರು ಬೆಟ್ಟ ಹತ್ತುವಾಗ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ. ಸುರೇಶ್ ಬಂಗೇರ ( 52) ಹೃದಯಾಘಾತದಿಂದ ಸಾವಿಗೀಡಾದ ಮಾಲಾಧಾರಿ.

Ad Widget . Ad Widget .

ಜಿಲ್ಲೆಯ ಉದ್ಯಾವರದ ಈ ಮಾಲಾಧಾರಿ ಇಲ್ಲಿಯ ಅಯ್ಯಪ್ಪ ಮಂದಿರದಿಂದ 32 ಸ್ವಾಮಿಗಳ ಜೊತೆ ಇರುಮುಡಿ ಕಟ್ಟಿ ನಿನ್ನೆ‌ ರೈಲು ಮಾರ್ಗದ ಮೂಲಕ ಶಬರಿ ತಲುಪಿದ್ದರು.

Ad Widget . Ad Widget .

ಇಂದು ದೇವರ ದರ್ಶನಕ್ಕೆ ಬೆಟ್ಟ ಹತ್ತಿ ಹೊರಟ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ರಿಕ್ಷಾ ಚಾಲಕನಾಗಿ ಜೀವನ ಸಾಗಿಸುತ್ತಿದ್ದ ಮಾಲಾಧಾರಿ ಸುರೇಶ್ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Leave a Comment

Your email address will not be published. Required fields are marked *