ಬೆಳಗಾವಿ: ವಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 3 ಹಸುಗೂಸುಗಳು ನಿಗೂಢ ಸಾವು|

Ad Widget ... ..

ಬೆಳಗಾವಿ: ಜಿಲ್ಲೆಯ ವಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಂತ 3 ಹಸುಗೂಸುಗಳು ನಿಗೂಢವಾಗಿ ಸಾವನ್ನಪ್ಪಿವೆ. ಈ ಮೂಲಕ ರಾಜ್ಯದ ಜನತೆಯೇ ಬೆಚ್ಚಿ ಬೀಳುವಂತೆ ಘಟನೆ ನಡೆದಿದೆ.

Ad Widget

ಬೆಳಗಾವಿಯ ರಾಮದುರ್ಗ ತಾಲೂಕಿನ 13 ತಿಂಗಳ ಪವಿತ್ರಾ ಹುಲಗುರ್, ಒಂದು ವರ್ಷ ಎರಡು ತಿಂಗಳ ಮಧು ಉಮೇಶ್ ಕುರಗಂದಿ ಹಾಗೂ ಒಂದೂವರೆ ವರ್ಷದ ಚೇತನಾ ಪೂಜಾರಿ ಎಂಬ ಹಸುಗೂಸುಗಳು ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಈ ಮೂವರು ಮಕ್ಕಳು ಐಸಿಯುನಲ್ಲಿ ಆಮ್ಲಜನಕದ ಸಪೋರ್ಟ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದ್ರೇ, ಚಿಕಿತ್ಸೆ ಪಡೆದು ಗುಣಮುಖವಾಗಬೇಕಿದ್ದಂತ ಮೂರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಹಸುಗೂಸುಗಳು ಸಾವನ್ನಪ್ಪಿದ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಘಟನೆ ಸಂಬಂಧ ಸೂಕ್ತ ನಿರ್ಧಾರ ಕೈಗೊಂಡು, ಯಾರ ತಪ್ಪಿದೆ. ಮೂರು ಕಂದಮ್ಮಗಳು ಸತ್ತಿದ್ದು ಯಾವ ಕಾರಣದಿಂದ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಿ, ಕ್ರಮ ಕೈಗೊಳ್ಳಲಾಗುತ್ತದೆ ಅಂತ DHO ತಿಳಿಸಿದ್ದಾರೆ.

Leave a Comment

Your email address will not be published. Required fields are marked *