Ad Widget .

ಇಂದು,ನಾಳೆ ವಾರಾಂತ್ಯ ಕರ್ಪ್ಯೂ| ಮಾರ್ಗಸೂಚಿಗಳೇನು? ಇಲ್ಲಿದೆ ಮಾಹಿತಿ|

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹೇರಿರುವ ವೀಕೆಂಡ್ ಕರ್ಪ್ಯೂ (Weekend Curfew ) ನಿನ್ನೆಯ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಆರಂಭಗೊಂಡಿದೆ.

Ad Widget . Ad Widget .

ಇಂದಿನಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಪ್ಯೂ ಜಾರಿಯಲ್ಲಿರಲಿದ್ದು, ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದರೆ ನಿಮ್ಮ ವಾಹನ ಸೀಜ್ ಆಗಲಿದೆ. ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುವವರ ವಿರುದ್ಧ ಪೊಲೀಸರು ಕೇಸ್ ಹಾಕಲಿದ್ದಾರೆ.

Ad Widget . Ad Widget .

ಕರ್ಪ್ಯೂ ಸಮಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಖಾಸಗಿ ಕಂಪನಿಗಳು, ಕೈಗಾರಿಕೆ, ಇ-ಕಾಮರ್ಸ್, ಫುಡ್ ಹೋಂ ಡೆಲಿವರಿ ಉದ್ಯೋಗಿಗಳು, ಟೆಲಿಕಾಂ ಸೇವಾ ಕಂಪನಿ, ಸಾರಿಗೆ ಇಲಾಖೆ ಉದ್ಯೋಗಿಗಳಿಗೆ ಮಾತ್ರ ಓಡಾಟಕ್ಕೆ ಅವಕಾಶ ನೀಡಲಾಗಿದೆ.

ರಾಜ್ಯಾದ್ಯಂತ ವಾರಾಂತ್ಯ ಕರ್ಪ್ಯೂ ಮಾರ್ಗಸೂಚಿ ಕ್ರಮಗಳು

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು ತೆರೆದಿರಲು ಅನುಮತಿ. ತುರ್ತು ಸೇವೆ ಕಚೇರಿಗಳು ತೆರೆದಿರಲು ಅವಕಾಶ
ಎಲ್ಲಾ ಸಾರ್ವಜನಿಕ ಪಾರ್ಕ್ ಗಳು ಬಂದ್
ಐಟಿ ಕಂಪನಿಗಳು ವಾರಾಂತ್ಯ ಕರ್ಪ್ಯೂ ನಡುವೆಯೂ ಕೆಲಸಕ್ಕೆ ಅವಕಾಶ. ನೌಕರರು ಐಡಿ ಕಾರ್ಡ್ ತೋರಿಸಿ ಕಚೇರಿಗೆ ತೆರಳಲು ಅನುಮತಿ
ತುರ್ತು ಸಂದರ್ಭದಲ್ಲಿ ಜನರು ತೆರಳಲು ಅವಕಾಶ
ಆಹಾರ, ತರಕಾರಿ, ಹಣ್ಣು, ಮಾಂಸ, ಮೀನು, ಡೈರಿ, ಹಾಲಿನ ಬೂತ್ ತೆರೆಯಲು ಅನುಮತಿ
ತಳ್ಳುಗಾಡಿಯಲ್ಲಿ ಮಾರಾಟಮಾಡಲು ಅವಕಾಶ
ಹೋಂ ಡಿಲಿವರಿಗೆ ಅವಕಾಶ
ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಕೊಂಡಯ್ಯಲು ಅನುಮತಿ

Leave a Comment

Your email address will not be published. Required fields are marked *