ಸುಬ್ರಹ್ಮಣ್ಯ: ಅಪ್ರಾಪ್ತ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡು ನಿರಂತರ ಆತ್ಯಾಚಾರಗೈದ ಹಾಗೂ ಆ ಕೃತ್ಯವನ್ನೂ ಮೊಬೈಲ್ ನಲ್ಲಿ ಚಿತ್ರಿಕರಿಸಿ ಬ್ಲ್ಯಾಕ್ಮೆಲ್ ಮಾಡಿ ಹಣ ವಸೂಲಿ ಮಾಡಿದ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದಾಖಲಾದ ಪ್ರಕರಣದ ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಆರೋಪಿಯ ಜಾಮೀನನ್ನು ರಾಜ್ಯ ಹೈ ಕೋರ್ಟು ರದ್ದು ಮಾಡಿ ಮಹತ್ವದ ಆದೇಶ ಹೊರಡಿಸಿದೆ.
ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಯೊಂದರ ಪ್ರೌಢಶಾಲಾ ರಾಯಚೂರಿನ ಗುರುರಾಜ್ ಜಾಮೀನು ರದ್ದಾದ ಆರೋಪಿ. ಸದ್ಯ ಈತ ಬಂಧನ ಭೀತಿಯನ್ನು ಎದುರಿಸುತ್ತಿದ್ದಾನೆ.
2021ರ ಅ. 8 ರಂದು ಸುಬ್ರಹ್ಮಣ್ಯ ಠಾಣೆ ಪೊಲೀಸರು ಈತನನ್ನು ಬಂಧಿಸಿದ್ದರು. ಈತನ ವಿರುದ್ದ ಪೋಕ್ಸೋ ಹಾಗೂ ಐಟಿ ಆಕ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ಹಾಗಾಗಿಯೂ ಈತನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಸತ್ರ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಬಂಧನವಾದ 48 ಗಂಟೆಯೊಳಗಡೆ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.
ಇದನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕಿಯ ತಾಯಿ ಹಾಗೂ ಪ್ರಕರಣದ ದೂರುದಾರೆ ಹೈಕೋರ್ಟು ಮೆಟ್ಟೀಲೆರಿದ್ದರು. ಜಾಮೀನು ರದ್ದತಿ ಕೋರಿ ಆಕೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾದೀಶ ಎಚ್. ಕೆ . ಸಂದೇಶ್ ಆರೋಪಿಗೆ ಕೆಳ ಕೋರ್ಟು ನೀಡಿದ ಜಾಮೀನನ್ನು ರದ್ದುಗೊಳಿಸಿ ಜ .14 ರಂದು ಆದೇಶಿಸಿದ್ದಾರೆ. ಹೈಕೋರ್ಟು ವಕೀಲರಾದ ಸಚಿನ್ ಸಂತ್ರಸ್ತೆಯ ತಾಯಿ ಪರ ನ್ಯಾಯಾಲಯದಲ್ಲಿ ವಾದಿಸಿದರು .
ಏನಿದು ಪ್ರಕರಣ ?:ಪ್ರಕರಣ ದಾಖಲಾದ ಸಂದರ್ಭ ಆರೋಪಿ ಗುರುರಾಜ್ ಸುಬ್ರಹ್ಮಣ್ಯದ ಎಸ್ಎಸ್ ಪಿಯು ಪ್ರೌಢಶಾಲೆ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕನಾಗಿ ಉದ್ಯೋಗದಲ್ಲಿದ್ದ. ಸದ್ಯ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ. ಕೃತ್ಯವೂ ನಾಲ್ಕು ವರ್ಷದ ಹಿಂದೆ ಮೊದಲ ಬಾರಿ ನಡೆದಿದ್ದೂ ಆಗ ವಿದ್ಯಾರ್ಥಿನಿಯೂ ಗುರುರಾಜ್ ಉದ್ಯೋಗಿಯಾಗಿರುವ ಶಿಕ್ಷಣ ಸಂಸ್ಥೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಗುರುರಾಜ್ ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ. ಬಾಲಕಿಯನ್ನು ಪುಸಲಾಯಿಸಿ ವಿವಸ್ತೃಗೊಳಿಸಿ ಮೊಬೈಲ್ ಮೂಲಕ ಫೋಟೋ ತೆಗೆಯುತ್ತಿದ್ದ. ಅದನ್ನು ತೋರಿಸಿ ಮನೆಯಿಂದ ಹಣ ತರುವಂತೆ ಬೆದರಿಕೆ ಹಾಕುತ್ತಿದ್ದ. ಆತನಿಗೆ ಪತ್ನಿಯೂ ಸಾಥ್ ನೀಡುತ್ತಿದ್ದಳು ಎಂದು ವಿದ್ಯಾರ್ಥಿನಿಯ ತಾಯಿ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.