Ad Widget .

ಶಬರಿಮಲೆ: ಇಂದು ಜ್ಯೋತಿ ದರ್ಶನ

ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಮಕರ ಸಂಕ್ರಮಣ ಪೂಜೆ ಜ.14ರಂದು ಜರುಗಲಿದೆ. ಮಕರಜ್ಯೋತಿಯ ಪೂರ್ವಭಾವಿಯಾಗಿ ಗುರುವಾರ ಪ್ರಾಸಾದ ಶುದ್ಧಿ ಕ್ರಿಯೆ, ಬಿಂಬಶುದ್ಧಿ ನಡೆಯಿತು.

Ad Widget . Ad Widget .

ತಮಿಳುನಾಡಿನಲ್ಲಿ ಒಮಿಕ್ರಾನ್ ನಿಯಂತ್ರಣ ನಿಯಮ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮಲೆಗೆ ತಮಿಳುನಾಡು ಭಕ್ತರ ಸಂಖ್ಯೆ ಕಡಿಮೆಯಾಗಿದೆ.

Ad Widget . Ad Widget .

ಕರ್ನಾಟಕ, ಆಂಧ್ರ, ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಮಧ್ಯಾಹ್ನ ನಂತರ ಪಂಪೆಯಿಂದ ಸನ್ನಿಧಾನಕ್ಕೆ ಹಾಗೂ ಹದಿನೆಂಟು ಮೆಟ್ಟಿಲೇರಲು ಭಕ್ತರಿಗೆ ನಿಯಂತ್ರಣ ಹೇರಲಾಗಿದೆ.

ಮಧ್ಯಾಹ್ನ ಪೂಜೆಯ ನಂತರ ಗರ್ಭಗುಡಿ ಬಾಗಿಲು ಮುಚ್ಚಿದರೆ, ಪಂದಳ ಅರಮನೆಯಿಂದ ಪವಿತ್ರ ಆಭರಣ ಸನ್ನಿಧಾನಕ್ಕೆ ತಲುಪಿ, ಅಯ್ಯಪ್ಪನ ವಿಗ್ರಹಕ್ಕೆ ತೊಡಿಸಿದ ನಂತರ ದೀಪಾರಾಧನೆಯೊಂದಿಗೆ ಮಕರಜ್ಯೋತಿ ದರ್ಶನವಾಗಲಿದೆ.

ಇಂದು ಸಂಜೆ ಅಯ್ಯಪ್ಪ ಸ್ವಾಮಿಗೆ 7 ಗಂಟೆಗೆ ನಡೆಯುವ ಮಹಾ ಮಂಗಳಾರತಿ ಬಳಿಕ, ಮಕರ ಜ್ಯೋತಿಯು ಶಬರಿಮಲೆಗೆ ವಿರುದ್ಧ ದಿಕ್ಕಿನಲ್ಲಿರುವ ಪೊನ್ನಂಬಲಮೇಡು ಗಿರಿಯಲ್ಲಿ ಮೂರು ಬಾರಿ ದೀಪ್ಯಮಾನವಾಗಿ ಮಿಣುಕಿ, ಗೋಚರಿಸಿ, ಅದೃಶ್ಯವಾಗಲಿದೆ.

Leave a Comment

Your email address will not be published. Required fields are marked *