Ad Widget .

ಪುತ್ತೂರು: ಹೆತ್ತ ತಾಯಿಯನ್ನೇ ಅತ್ಯಾಚಾರಗೈದ ಪಾಪಿ ಮಗ

ಪುತ್ತೂರು: ಹೆತ್ತು ಸಾಕಿ ಸಲಹಿದ ತಾಯಿಯನ್ನೇ ಕಿರಾತಕ ಮಗನೊಬ್ಬ ಅತ್ಯಾಚಾರಗೈದ ಘಟನೆ ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಮಗನ ವಿರುದ್ಧ ಪ್ರಕರಣ ದಾಖಲಾಗಿದೆ.

Ad Widget . Ad Widget .

ಕೆದಂಬಾಡಿ ಕುರಿಕ್ಕಾರದ ಜಯರಾಮ ರೈ ಅತ್ಯಾಚಾರ ಎಸಗಿರುವ ಆರೋಪಿ. 58 ವರ್ಷದ ತನ್ನ ತಾಯಿಯೊಂದಿಗೆ ವಾಸವಾಗಿರುವ ಜಯರಾಮ ಜ.12ರಂದು ಎಂದಿನಂತೆ ರಾತ್ರಿ ಊಟ ಮಾಡಿ ಅವರ ರೂಮ್ ನಲ್ಲಿ ಮಲಗಿದ್ದ. ಮುಂಜಾನೆ 3 ಗಂಟೆಯ ವೇಳೆಗೆ ತಾಯಿ ಮಲಗಿದ್ದ ರೂಮ್ ಗೆ ಹೋಗಿ ಜಯರಾಮ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ತಾಯಿ ಆತನನ್ನು ತಳ್ಳಿ ಬೊಬ್ಬೆ ಹಾಕಿದಾಗ ಆತ ತಾಯಿಯ ಬಾಯಿಯನ್ನು , ಬಟ್ಟೆಯಿಂದ ಒತ್ತಿ ಹಿಡಿದು ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿ ತಾಯಿ ಪ್ರತಿಭಟಿಸಿದರೂ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಈ ವಿಚಾರವನ್ನು ಯಾರಲ್ಲಾದರೂ ತಿಳಿಸಿದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.

Ad Widget . Ad Widget .

ಇದಾದ ಬಳಿಕ ಜ.13ರಂದು ಬೆಳಗ್ಗೆ 07.45ಕ್ಕೆ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಜಯರಾಮ ಬಲವಂತದಿಂದ ಅವರನ್ನು ಮನೆಯ ಹಾಲ್ ಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Comment

Your email address will not be published. Required fields are marked *