Ad Widget .

ಫೆ.1ರಂದು ಕೇಂದ್ರ ಬಜೆಟ್ ಮಂಡನೆ| ಜ.31ರಿಂದ ಸಂಸತ್ ಬಜೆಟ್ ಅಧಿವೇಶನ ಪ್ರಾರಂಭ|

ನವದೆಹಲಿ: ಈ ಬಾರಿಯ ಕೇಂದ್ರ ಹಣಕಾಸು ಬಜೆಟ್ ಮಂಡನೆಗೆ ದಿನಾಂಕ ನಿಗದಿ ಪಡಿಸಲಾಗಿದೆ. ಜನವರಿ 31ರಿಂದ ಸಂಸತ್ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಫೆಬ್ರವರಿ 1ರಂದು ಕೇಂದ್ರ ಬಜೆಟ್ ಸಂಸತ್ ನಲ್ಲಿ ಮಂಡನೆಯಾಗಲಿದೆ.

Ad Widget . Ad Widget .

ಈ ಕುರಿತಂತೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಈ ವರ್ಷದ ಸಂಸತ್ ಬಜೆಟ್ ಅಧಿವೇಶನವು ಜನವರಿ 31ರಂದು ಆರಂಭಗೊಳ್ಳಲಿದೆ. ಬಜೆಟ್ ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದೆ.

Ad Widget . Ad Widget .

ಫೆಬ್ರವರಿ 1ರಂದು ಕೇಂದ್ರ ಬಜೆಟ್ ಸಂಸತ್ ನಲ್ಲಿ ಮಂಡನೆಯಾಗಲಿದೆ. ಆ ಬಳಿಕ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಮಾರ್ಚ್ 14ರಿಂದ ಬಜೆಟ್ ಅಧಿವೇಶನದ 2ನೇ ಭಾಗ ನಡೆದು, ಏಪ್ರಿಲ್ 8ರಂದು ಸಂಸತ್ ಬಜೆಟ್ ಅಧಿವೇಶ ಕೊನೆಗೊಳ್ಳಲಿದೆ ಎಂದು ಹೇಳಿದೆ.

Leave a Comment

Your email address will not be published. Required fields are marked *