Ad Widget .

ಭೀಕರ ಅಪಘಾತ| ರಿಯಾಲಿಟಿ ಶೋ ಪುಟಾಣಿ ತಾರೆ ಸಮನ್ವಿ ವಿಧಿವಶ|

Ad Widget . Ad Widget .

ಬೆಂಗಳೂರು:‌ ಟಿಪ್ಪರ್​ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಕನ್ನಡ ವಾಹಿನಿವೊಂದರಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ‘ನನ್ನಮ್ಮ ಸೂಪರ್​ ಸ್ಟಾರ್​ ಸ್ಪರ್ಧಿ’ ಸಮನ್ವಿ (6) ಸಾವನ್ನಪ್ಪಿದ್ದಾರೆ.

Ad Widget . Ad Widget .

ಗುರುವಾರ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಸಮನ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನೆಯಲ್ಲಿ ಬಾಲಕಿ ತಾಯಿ ಅಮೃತಾ ನಾಯ್ಡು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಬಾಲಕಿ ಮೃತದೇಹವನ್ನು ಕಿಮ್ಸ್​ಗೆ ರವಾನಿಸಲಾಗಿದ್ದು, ಆರೋಪಿ ಟಿಪ್ಪರ್ ಲಾರಿ ಚಾಲಕನನ್ನು ಕೆ.ಎಸ್.ಲೇಔಟ್ ಸಂಚಾರ ಪೊಲೀಸರು ವಶಕ್ಕೆ ಪಡೆದು, ಮೊಕದ್ದಮೆ ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *