Ad Widget .

ಮಂಗಳೂರು: ಕಳ್ಳನನ್ನು ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿ ಹಿಡಿದ ಪೊಲೀಸ್ ಕಾರ್ಯಕ್ಕೆ ಶ್ಲಾಘನೆ|ಪೊಲೀಸ್ ಆಡಿದ ಮಾತಿಗೆ ಜಾಲತಾಣಗಳಲ್ಲಿ ಪರ ವಿರೋಧ ಕಮೆಂಟ್|

Ad Widget . Ad Widget .

ಮಂಗಳೂರು : ನಗರದಲ್ಲಿ ಕಳ್ಳತನ ನಡೆದ 10 ನಿಮಿಷದಲ್ಲಿ ಪ್ರಕರಣದ ಆರೋಪಿಯನ್ನು ಮಂಗಳೂರಿನ ಪೊಲೀಸ್ ಓರ್ವರು ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ.

Ad Widget . Ad Widget .

ಪೊಲೀಸ್ ಅಧಿಕಾರಿಯನ್ನು ವರುಣ್ ಎಂದು ಗುರುತಿಸಲಾಗಿದೆ. ಇವರು ಮೊಬೈಲ್ ಕಳ್ಳತನ ಮಾಡಿ ಓಡಿ ಹೋಗುತ್ತಿದ್ದ ಕಳ್ಳನನ್ನು ರಸ್ತೆಯಲ್ಲಿ ವಾಹನಗಳ ಮಧ್ಯೆಯೇ ಅಟ್ಟಿಸಿಕೊಂಡು ಹೋಗಿ ಹಿಡಿದಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಪೊಲೀಸ್ ಕಾರ್ಯಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

ಈ ನಡುವೆ ಪೊಲೀಸ್ ಅಧಿಕಾರಿ ಆರೋಪಿಯನ್ನು ವಿಚಾರಿಸಿದ ಭಾಷೆ ಬಗ್ಗೆ ಜನರಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *