Ad Widget .

ಪಬ್ಜಿಯಲ್ಲಿ ಉಂಟಾಯ್ತು ಪ್ರೇಮ| ಆನ್ ಲೈನ್ ಗೇಮಿಂಗ್ ಪ್ರೇಮಿಗಳು ಮದುವೆಗೆ ರೆಡಿ|

ನ್ಯೂಸ್ ಡೆಸ್ಕ್: ನಿಷೇಧಿತ ಆನ್‌ಲೈನ್ ಗೇಮ್ ಪಬ್ಜಿ(PubG )ಯನ್ನು ಬಹಳಷ್ಟು ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆಡುತ್ತಿದ್ದರು. PubG ಗೇಮ್‌ ಅತ್ಯಂತ ವ್ಯಸನಕಾರಿಯಾಗಿದ್ದು, ಇದರಿಂದ ಅಪಾಯಕಾರಿ ಘಟನೆಗಳು ಸಂಭವಿಸಿವೆ.

Ad Widget . Ad Widget .

ಆದರೆ ಅಪಾಯಕಾರಿ ಪಬ್ಜಿ ಆಟವು ಎರಡು ವಿಭಿನ್ನ ರಾಜ್ಯಗಳ ಪ್ರೇಮಿಗಳನ್ನು ಒಂದು ಮಾಡಿದೆ. ಹೇಗೆ ಅಂತೀರಾ? ಮುಂದೆ ಓದಿ…

Ad Widget . Ad Widget .

ಪಶ್ಚಿಮ ಬಂಗಾಳದ ಧುಪ್ಗುರಿ ನಿವಾಸಿ ಸೈನೂರ್ ಆಲಂ ನಿಯಮಿತವಾಗಿ ಪಬ್ಜಿ ಆಡುತ್ತಿದ್ದರು. ಆಟ ಆಡುವಾಗ ಕರ್ನಾಟಕದ ಫ್ರಿಜಾ ಎಂಬ ಮಹಿಳೆಯ ಪರಿಚಯವಾಗಿದೆ. ಆಟ ಆಡುವಾಗ ಇಬ್ಬರೂ ಮೊದಲು ಸ್ನೇಹಿತರಾದರು. ನಂತರ ಅವರು ತಮ್ಮ ಭಾವನೆಗಳನ್ನು ವಿನಿಮಯ ಮಾಡಿಕೊಂಡು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿಕೊಂಡಿದ್ದಾರೆ.

ನಾಲ್ಕು ವರ್ಷಗಳ ಕಾಲ ಪ್ರೀತಿಸಿದರೂ ಒಬ್ಬರನೊಬ್ಬರು ಮುಖಾಮುಖಿ ಭೇಟಿಯಾಗಿರಲಿಲ್ಲ. ಆದರೆ ಕಳೆದ ಶನಿವಾರ ಫ್ರಿಜಾ ಬೆಂಗಳೂರಿನಿಂದ ಮೂಲಕ ವಿಮಾನದಲ್ಲಿ ಧುಪ್ಗುರಿಗೆ ಬಂದು, ಸೈನೂರ್ ಮನೆ ಬಾಗಿಲು ತಟ್ಟಿದ್ದಾಳೆ. ʻಕರೆಗಂಟೆಯ ಸದ್ದು ಕೇಳಿ ಸೈನೂರ್ ಬಾಗಿಲು ತೆರೆದಾಗ ಫ್ರಿಜಾ ನನ್ನ ಮುಂದೆ ನಿಂತಿದ್ದನ್ನು ಕಂಡು ಬೆಚ್ಚಿಬಿದ್ದೆʼ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಸೈನೂರ್ ಹೇಳಿದ್ದಾನೆ.

ಸುದ್ದಿ ತಿಳಿದ ಸೈನೂರ ಕುಟುಂಬಸ್ಥರು ಇದರಿಂದ ಕಂಗಾಲಾಗಿದ್ದರು. ಕೇವಲ ಪ್ರೀತಿಯಿಂದಲೇ ಫ್ರಿಜಾ 2554 ಕಿಲೋಮೀಟರ್ ದಾಟಿ ಇಲ್ಲಿಗೆ ಬರಬಹುದೆಂದು ಅವರು ನಂಬಿರಲಿಲ್ಲ. ನಂತರ ಫ್ರಿಜಾ ತನ್ನ ಕುಟುಂಬ ಸದಸ್ಯರಿಗೆ ನಡೆದ ವಾಸ್ತವವನ್ನು ತಿಳಿಸಿ ಇಬ್ಬರು ವಿವಾಹವಾಗಲಿದ್ದಾರೆ.

Leave a Comment

Your email address will not be published. Required fields are marked *