Ad Widget .

ತುಳುನಾಡಿನಲ್ಲಿ ದೈವಗಳ ಕೆಟ್ಟ ರೀತಿಯಲ್ಲಿ ಅವಮಾನ| ಮುಸ್ಲಿಂ ಯುವಕನ ಬೆನ್ನಲ್ಲೇ ಹಿಂದೂ ವ್ಯಕ್ತಿಯಿಂದ ದೈವನಂಬಿಕೆಗೆ ಅವಮಾನ|ಈತನ ಬಂಧನ ಯಾವಾಗ?

“ಪತ್ತ್ ಇಂಜಿ ಪೊನ್ನು… ನಾಲ್ ಇಂಜಿ ಪಜೆ, ನಾಲ್ ಇಂಚಿ….. “
ಮುಸ್ಲಿಂ ಯುವಕನ ಬೆನ್ನಲ್ಲೇ ಹಿಂದೂ ಯುವಕನಿಂದ ದೈವನಂಬಿಕೆಗೆ ಅಪಮಾನ| ಜಾಲತಾಣಗಳಲ್ಲಿ ವಿಡಿಯೋ ವೈರಲ್. ಈತನ ಬಂಧನ ಯಾವಾಗ..?

Ad Widget . Ad Widget .

Ad Widget . Ad Widget .

ಮಂಗಳೂರು: ಮುಸ್ಲಿಂ ಯುವಕನೋರ್ವ ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಹಿಂದೂ ಯುವಕನೋರ್ವ ದೈವಗಳ ಕಟ್ಟು(ಪ್ರಾರ್ಥನೆ) ಹೇಳುವಂತೆ ಕೆಟ್ಟ ರೀತಿಯಲ್ಲಿ ಅವಮಾನ ಮಾಡಿದ ವಿಡಿಯೋಗಳು ಜಾಣತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ವಿಟ್ಲದ ಮುಸ್ಲಿಂ ಯುವಕ ತನ್ನ ಮದುವೆ ದಿನ ಕೊರಗಜ್ಜನ ವೇಷ ಧರಿಸಿ ನೃತ್ಯ ಮಾಡುತ್ತ ಮದುವೆ ಮಂಟಪಕ್ಕೆ ಬಂದಿದ್ದನು. ಈ ಬಗ್ಗೆ ಎರಡು ಸಮೂದಾಯಗಳಲ್ಲಿ ಆತನ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಈಗ ಆತನ ಜೊತೆಗೆ ಇನ್ನಿಬ್ಬರನ್ನು ಪೋಲಿಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಹಿಂದೂ ಯುವಕನೋರ್ವ ಕುಡಿದು ದೈವಗಳಿಗೆ ಅಮಾನಿಸಿದ ವಿಡಿಯೋ ವೈರಲ್ ಆಗುತ್ತಿದೆ.

27 ಸೆಕೆಂಡುಗಳ ವಿಡಿಯೋ ಇದ್ದಾಗಿದ್ದು, ನಾಲ್ವರು ಯುವಕರು ಬಾರ್ & ರೆಸ್ಟೋರೆಂಟ್‌ನಲ್ಲಿ ಅಮಲೇರಿದ ಸ್ಥಿತಿಯಲ್ಲಿ ಕಂಡುಬರುತ್ತಿದೆ. ಅದರಲ್ಲಿ ಓರ್ವ ಯುವಕ ಕೈಯಲ್ಲಿ ಬಿಯರ್ ಬಾಟಲ್ ಹಾಗೂ ಹಾಕಿ ಸ್ಟೀಕ್ ಹಿಡಿದು “ಕುಟುಂಬ ಸಂಸಾರ ಪತ್ತ್ ಇಂಜಿ ಪೊನ್ನು.. ನಾಲ್ ಇಂಜಿ ಪಜೆ ಪೋಯಿನಾತ್ ಪೋವಡ್ ಒರ್ಭ ತಿಂಗಳೊಡ್ ಆನಾ… ಪೊನ್ನಾದ್ ತೆರಿಪತ್ ಕೊರ್ಪೆ, ದೆತೋನ್ ಎನ್ನ ನಾಲ್ ****’ ಎಂಬ ಮಾತನ್ನು ದರ್ಶನ ಹಿಡಿದ ರೀತಿಯಲ್ಲಿ ಹೇಳಿ ಹೇಳಿ ಹಾಕಿ ಸ್ಟೀಕ್‌ನ್ನು ಇನ್ನೋರ್ವ ಯುವಕನಿಗೆ ಕೊಡುತ್ತಿರುವುದು ಕಂಡುಬರುತ್ತಿದೆ. ಈ ವೇಳೆ ಇನ್ನೋರ್ವ ಯುವಕ ಆತನ ಮುಖವನ್ನು ಟಿಸ್ಸು ಪೇಪರ್‌ನಿಂದ ಒರೆಸುತ್ತಿದ್ದಾನೆ. ಜೊತೆಗೆ ಇನ್ನುಳಿದ ಯುವಕರು ಆತನ ಮಾತಿಗೆ ಸಾಥ್ ನೀಡುತ್ತಿರುವುದು ಕಂಡುಬರುತ್ತಿದೆ. ಆದರೆ ಇವರ ಮಾಹಿತಿ ದೊರೆತಿಲ್ಲ.

ವಿಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ…https://m.facebook.com/story.php?story_fbid=306525654755946&id=100061955421424

ತುಳುನಾಡಿನಲ್ಲಿ ದೈವಾರಾಧನೆ ಬಗ್ಗೆ ನಂಬಿಕೆಯಿದೆ. ಆದರೆ ಇಂತಹ ಹೀನಕೃತ್ಯ ಎಸಗುತ್ತಿರುವವರಿಂದ ನಂಬಿಕೆಗೆ ಅವಮಾನವಾಗುತ್ತಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಮದುವೆ ಮನೆಯಲ್ಲಿ ಕೊರಗಜ್ಜನಿಗೆ ಅವಮಾನಿಸಿದ ಮುಸ್ಲಿಂ ಯುವಕನ ಬಂಧನವಾಗಿದೆ. ಜೊತೆಗೆ ಹಳೆಯದಾದ ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದ್ದು, ಈತನ ಬಂಧನ ಯಾವಾಗ ಎಂಬ ಮಾತು ತುಳುನಾಡಿನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ವೈರಲ್ ಆದ ವಿಡಿಯೋ

https://m.facebook.com/story.php?story_fbid=306525654755946&id=100061955421424

Leave a Comment

Your email address will not be published. Required fields are marked *