Ad Widget .

ಸುರತ್ಕಲ್: ಆನ್ ಲೈನ್ ಸಾಲದ ಶೂಲಕ್ಕೆ ಬಿತ್ತು ಮತ್ತೊಂದು ಹೆಣ| ಡೆತ್ ನೋಟ್ ಬರೆದಿಟ್ಟು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಯುವಕ ಆತ್ಮಹತ್ಯೆ|

ಮಂಗಳೂರು : ಸಾಲದ ಸುಳಿಯಲ್ಲಿ ಸಿಲುಕಿ ನೊಂದ ಯುವಕನೊಬ್ಬ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಯುವಕನನ್ನು 26 ವರ್ಷ ಪ್ರಾಯದ ಸುಶಾಂತ್ (ಜಗ್ಗು) ಎಂದು ಗುರುತಿಸಲಾಗಿದೆ.

Ad Widget . Ad Widget .

ಮೂಲ್ಕಿ ಸಮೀಪದ ಪಕ್ಷಿ ಕೆರೆ ನಿವಾಸಿಯಾಗಿರುವ ಸುಶಾಂತ್ ತಾನು ಕೆಲಸ ಮಾಡುತ್ತಿದ್ದ ಕುಳಾಯಿಯ ಸನ್’ರೈಸ್ ಕಾರ್ಪೋರೇಷನ್ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದಾರೆ. ಸಾಲದ ಕಾರಣಕ್ಕಾಗಿಯೇ ಸಾವಿಗೆ ಶರಣಾದ ಶಂಕೆ ವ್ಯಕ್ತವಾಗಿದ್ದು, ಡೆತ್ ನೋಟ್ ನಲ್ಲಿ ಶರತ್ ಈ ಬಗ್ಗೆ ಉಲ್ಲೇಖಿಸಿದ್ದಾರೆ.

Ad Widget . Ad Widget .

“ಎಲ್ಲರಿಗೂ ಸ್ಸಾರಿ, ನನಗೆ ಯಾರದ್ದೂ ನಂಬಿಕೆ ಉಳಿಸಲು ಆಗಲಿಲ್ಲ. ಹಣದ ವಿಷಯದಲ್ಲಿ ತೊಂದರೆ ಆಗಿದೆ ಅದಕ್ಕಾಗಿ ಕ್ಷಮಿಸಿ. ಒಂದು ವೇಳೆ ಆನ್ ಲೈನ್ ಲೋನ್ ನೀಡಿದವರು ಕರೆ ಮಾಡಿದರೆ ನಾನು ಸತ್ತಿದ್ದೇನೆ ಎಂದು ಹೇಳಿ” ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಸುಶಾಂತ್ ಅವರ ತಂದೆ ತಾಯಿ 15 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು ಅಣ್ಣ ಅಶ್ವಿತ್ ಜೊತೆ ಪಕ್ಷಿಕೆರೆಯಲ್ಲಿ ವಾಸ್ತವ್ಯ ಇದ್ದರು ಎಂದು ಪೋಲಿಸರು ತಿಳಿಸಿದ್ದಾರೆ.

ಸುಶಾಂತ್ ತೆಗೆದುಕೊಂಡ ಸಾಲ ತೀರಿಸಲು ಆಗದ ಕಾರಣಕ್ಕೆ ಮನನೊಂದಿದ್ದು, ಆನ್ ಲೈನ್ ಸಾಲ ನೀಡಿದವರಿಂದಲೂ ಮಾನಸಿಕ ಕಿರಿಕಿರಿ ಆಗಿರುವ ಹಿನ್ನೆಲೆಯಲ್ಲಿ ಸುಶಾಂತ್ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಆನ್ ಲೈನ್ ಸಾಲ ಪಡೆದು ಮಾನಸಿಕ ಕಿರಿಕಿರಿಗೆ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿರುವ ಕರಾವಳಿಯ ಎರಡನೇ ಪ್ರಕರಣ ಇದಾಗಿದ್ದು ತಿಂಗಳ ಹಿಂದಷ್ಟೇ ಉಡುಪಿಯ ಯುವಕನೊಬ್ಬ ಆನ್ ಲೈನ್ ಸಾಲದ ಕಿರಿಕಿರಿಗೆ ಸಾವಿಗೆ ಶರಣಾಗಿದ್ದನ್ನು ಉಲ್ಲೇಖಿಸಬಹುದು.

Leave a Comment

Your email address will not be published. Required fields are marked *