Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಮಕರ ಸಂಕ್ರಾಂತಿ ವಾರದಲ್ಲಿ ನಾವಿದ್ದೇವೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರಯಾಣ ಮಾಡಲಿದ್ದಾರೆ. ಹೀಗಾಗಿ ಮಕರ ಸಂಕ್ರಾಂತಿಯ ಶುಭದಿನದಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ, ಯಾವ ರಾಶಿಯವರಿಗೆ ಅದೃಷ್ಟವಿದೆ, ಯಾವ ರಾಶಿಯವರಿಗೆ ಲಾಭವಿದೆ, ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಜನವರಿ 9ರಿಂದ ಜನವರಿ 15ರ ವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ…

Ad Widget . Ad Widget .

Ad Widget . Ad Widget .

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಹಿರಿಯರೊಂದಿಗೆ ಶಾಂತಿಯಿಂದ ವ್ಯವಹರಿಸುವುದು ಉತ್ತಮ. ಅನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ. ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವವರು ಜನರೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳಿ. ಪ್ರತಿಭೆಗೆ ತಕ್ಕ ಅವಕಾಶ ಒದಗಿ ಬರುತ್ತದೆ. ಕೃಷಿಕಾರ್ಯಗಳಲ್ಲಿ ಪ್ರಗತಿ. ನವೀನ ರೀತಿಯ ಕೃಷಿಯನ್ನು ಮಾಡುವವರೆಗೆ ಕೆಲಸ ಸುಗಮವಾಗುತ್ತದೆ. ಬೇರೆಯವರಿಗೆ ಕಷ್ಟದಲ್ಲಿ ನೆರವಾಗುವುದು ಒಳ್ಳೆಯದು. ವೃತ್ತಿಯಲ್ಲಿ ನೀವು ಕಲಿತಿರುವ ವಿದ್ಯೆಯನ್ನು ಪರಿಗಣಿಸಿ ಸೂಕ್ತ ಹುದ್ದೆಯನ್ನು ಕೊಡಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಫ್ಯಾಶನ್ ಡಿಸೈನ್ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ವಿದೇಶಿ ವ್ಯವಹಾರಗಳಿಂದ ಉತ್ತಮ ಲಾಭದ ನಿರೀಕ್ಷೆ. ಹೂಡಿದ ಹಣದಲ್ಲಿ ನಿರೀಕ್ಷಿತ ಲಾಭದ ಸಾಧ್ಯತೆ. ಸ್ವಂತ ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಉತ್ತಮ ಬೆಳವಣಿಗೆ ಇರುತ್ತದೆ. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಬಿಡುವಿಲ್ಲದ ಕೆಲಸಗಳು ಬರಬಹುದು. ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇದ್ದರೂ ತೊಂದರೆಯೇನಿಲ್ಲ. ವಾತ ಸಂಬಂಧಿ ಕಾಯಿಲೆ ಇರುವವರು ಸ್ವಲ್ಪಮಟ್ಟಿಗೆ ಎಚ್ಚರವಹಿಸಿ. ಕೃಷಿಕರಿಗೆ ಸ್ವಲ್ಪ ಹಿನ್ನಡೆ ಸಾಧ್ಯತೆ. ಬಂಧುಗಳಿಂದ ಶುಭ ಸಮಾಚಾರಗಳು ಕೇಳಿಬರುತ್ತವೆ. ಹೈನುಗಾರಿಕೆಯನ್ನು ಮಾಡುತ್ತಿರುವವರು ಹೆಚ್ಚಿನ ಬೆಳವಣಿಗೆಯನ್ನು ಕಾಣಬಹುದು.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಮಾನಸಿಕ ಉದ್ವೇಗದಿಂದ ಯಾವುದೇ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಬೇಡ. ಬಂಧುಗಳ ನಡುವೆ ಕೆಲವು ಜಿಜ್ಞಾಸೆಗಳು ಮೂಡಬಹುದು. ಹೊಸ ವಸ್ತ್ರಗಳ ಸಗಟು ದಾಸ್ತಾನುಗಾರರು ಎಚ್ಚರಿಕೆಯನ್ನು ವಹಿಸಿ. ಉದ್ಯೋಗಸ್ಥರಿಗೆ ಶುಭಫಲವಿರುತ್ತದೆ. ಲಲಿತ ಕಲಾವಿದರುಗಳಿಗೆ ಹೆಚ್ಚಿನ ಕೆಲಸ ಒದಗಿಬರುತ್ತದೆ. ನೃತ್ಯ ಪಟುಗಳಿಗೆ ಕಲೆಯ ಸೂಕ್ಷ್ಮತೆಯನ್ನು ತಿಳಿಸುವ ಗುರು ದೊರೆಯುತ್ತಾರೆ. ವೃತ್ತಿ ಬದಲಾವಣೆಯನ್ನು ಮಾಡಬೇಕೆನ್ನುವವರು ಈಗ ಮಾಡಬಹುದು. ಸರ್ಕಾರಿ ಕಂಪನಿಗಳಿಗೆ ಉಪವಸ್ತುಗಳನ್ನು ಪೂರೈಕೆ ಮಾಡುವವರಿಗೆ ಹೆಚ್ಚಿನ ಪೂರೈಕೆಗೆ ಆದೇಶಗಳು ದೊರೆಯುತ್ತವೆ. ಧನ ಆದಾಯವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಆರ್ಥಿಕ ಸಂಕಷ್ಟಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತವೆ. ಉದ್ಯೋಗದಲ್ಲಿರುವವರಿಗೆ ಅಧಿಕಾರ ವರ್ಗದವರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಕೃಷಿಕರು ತಾವು ಬೆಳೆಯುವ ಬೆಳೆಯ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ವ್ಯವಹಾರ ವಿಸ್ತರಣೆಗೆ ಅನುಕೂಲಕರವಾದ ವಾತಾವರಣ ದೊರೆಯುವ ಸಾಧ್ಯತೆ ಇದೆ. ಸರ್ಕಾರಿ ದಾಖಲೆಗಳನ್ನು ಪಡೆಯಲು ಹೆಚ್ಚು ಹಣ ಖರ್ಚಾಗುವ ಸಾಧ್ಯತೆಗಳಿವೆ. ಕುಟುಂಬದ ಒಟ್ಟಿನ ವ್ಯವಹಾರಗಳಲ್ಲಿ ನಿಮಗೆ ಪಾಲ್ಗೊಳ್ಳಲು ಅವಕಾಶ ದೊರೆಯುತ್ತದೆ. ಕ್ರಯವಿಕ್ರಯ ವ್ಯವಹಾರಗಳಲ್ಲಿ ಲಾಭ. ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ಹಾಗೂ ಸಹಾಯಧನ ಒದಗಿಬರುತ್ತದೆ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ನೌಕರಸ್ಥರಿಗೆ ಉದ್ಯೋಗದ ಸ್ಥಳಗಳು ಬದಲಾವಣೆ ಸಾಧ್ಯತೆ. ಮನೆಯಲ್ಲಿನ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳುವಿರಿ. ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಒಳ್ಳೆಯ ಸ್ಥಾನ ಸಿಗುವ ಸಾಧ್ಯತೆಗಳಿವೆ. ನಿಮ್ಮ ಬೇಜವಾಬ್ದಾರಿತನದಿಂದ ಖರ್ಚುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಸಮೂಹದಲ್ಲಿ ಮಾತನಾಡುವಾಗ ಎಚ್ಚರವಹಿಸಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ಅವಿವಾಹಿತರಿಗೆ ಕಂಕಣಬಲ ಕೂಡಿ ಬರುವ ಸಾಧ್ಯತೆ ಇದೆ. ತಾಯಿಯೊಂದಿಗೆ ಹಣದ ವಿಚಾರಕ್ಕಾಗಿ ಭಿನ್ನಾಭಿಪ್ರಾಯ. ವಿದೇಶಗಳಿಗೆ ಕಚ್ಚಾವಸ್ತುಗಳನ್ನು ಪೂರೈಕೆ ಮಾಡುವವರಿಗೆ ಶುಭ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಜೊತೆಗೆ ಲಾಭ ಕಾಣಬಹುದು. ನ್ಯಾಯಾಲಯದ ತೀರ್ಪು ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಅನುಕೂಲ ವಾತಾವರಣವಿದ್ದರೂ ಒಳಗೊಳಗೆ ನಿಮಗೆ ಅತೃಪ್ತಿ ಇರುತ್ತದೆ. ಹಳೆಯ ಸಮಸ್ಯೆಗಳು ಪರಿಹಾರವಾಗಿ ಮನಸ್ಸಿಗೆ ಸಂತೋಷವಾಗುವುದು. ಇತರರ ಔದಾರ್ಯವನ್ನು ದುರುಪಯೋಗ ಮಾಡಿಕೊಳ್ಳದಿರುವುದು ಉತ್ತಮ. ಗಣಿಗಾರಿಕೆಯನ್ನು ಮಾಡುವವರಿಗೆ ಲಾಭ ಹೆಚ್ಚುತ್ತದೆ. ಅದಿರನ್ನು ಸಂಸ್ಕರಿಸಿ ಮಾರಾಟ ಮಾಡುವವರಿಗೆ ಹೆಚ್ಚಿನ ಆದಾಯವಿರುತ್ತದೆ. ಧನದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇದ್ದೇ ಇರುತ್ತದೆ. ಆಸ್ತಿಯನ್ನು ಮಾಡುವ ವಿಚಾರದಲ್ಲಿ ಪ್ರಗತಿಯನ್ನು ಕಾಣಬಹುದು. ಉದರ ಸಂಬಂಧಿ ಕಾಯಿಲೆ ಇರುವವರು ಎಚ್ಚರ ವಹಿಸಿರಿ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಕೃಷಿಕರ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿಯನ್ನು ಕಾಣಬಹುದು. ನಿಮ್ಮ ಶತ್ರುಗಳನ್ನು ಈಗ ನೀವು ಎದುರಿಸಬಹುದು. ಪ್ರಿಯವ್ಯಕ್ತಿಗಳ ಆಗಮನದಿಂದ ಮನಸ್ಸಿಗೆ ಸಂತೋಷ. ಶತ್ರುಗಳು ತಾವಾಗಿಯೇ ಬಯಸಿ ಮಿತ್ರರಾಗುವರು. ಬಂಧುಗಳ ಆಸ್ತಿಯನ್ನು ಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಯ ಅವಕಾಶ ಒದಗಿಬರುತ್ತದೆ. ಶೀತ ಬಾಧೆ ಅಥವಾ ಕಣ್ಣಿನ ತೊಂದರೆ ಇರುವವರು ಎಚ್ಚರವಹಿಸಿ. ಕೆಲವರಿಗೆ ಸಂಗಾತಿ ಕಡೆಯಿಂದ ಸ್ಥಿರಾಸ್ತಿ ಬರುವ ಸಾಧ್ಯತೆಗಳಿವೆ. ರಾತ್ರಿ ವಾಹನ ಚಾಲನೆ ವೇಳೆ ಬಹಳ ಎಚ್ಚರವಿರಲಿ. ಲೇವಾದೇವಿ ಮಾಡುವವರಿಗೆ ಸಾಕಷ್ಟು ಹಣ ವಸೂಲಿ ಆಗುವುದು. ಸ್ವಂತ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ಇರಲಿ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಹಿರಿಯ ಉದ್ಯಮಿಗಳು ತಮ್ಮ ನಡೆನುಡಿಯ ಬಗ್ಗೆ ಎಚ್ಚರದಿಂದ ಇರುವುದು ಬಹಳ ಒಳ್ಳೆಯದು. ಆರ್ಥಿಕವಾಗಿ ಸಬಲತೆ ಬರುವ ಸಾಧ್ಯತೆಗಳಿವೆ. ಆಸ್ತಿ ವಿವಾದಗಳಿಂದ ಮುಕ್ತಿ ದೊರೆಯಬಹುದು. ಹಿರಿಯರ ಆರೋಗ್ಯದಲ್ಲಿ ಏರುಪೇರಾದರೂ ಭಯವಿಲ್ಲ. ಸಹವರ್ತಿಗಳಿಗೆ ಉತ್ಸಾಹ ತುಂಬಿ ಕೆಲಸ ಮಾಡಿಸುವಿರಿ. ಹೊಸ ವಾಹನ ಮಾರಾಟಗಾರರಿಗೆ ವ್ಯವಹಾರ ಹೆಚ್ಚುತ್ತದೆ. ತಂದೆಯಿಂದ ಧನ ಸಹಾಯ. ವೃತ್ತಿಯಲ್ಲಿ ಸ್ವಲ್ಪ ವೇತನ ಹೆಚ್ಚಳವನ್ನು ಕಾಣಬಹುದು. ಪರಿಚಯಸ್ಥರ ಜೊತೆ ಮಾಡಿದ ವ್ಯವಹಾರಗಳಲ್ಲಿ ಲಾಭ. ದೈವತಾ ಕಾರ್ಯಗಳಿಗಾಗಿ ಸ್ವಲ್ಪ ಹಣವನ್ನು ಖರ್ಚು ಮಾಡುವಿರಿ. ಹಿರಿಯರ ಸಲಹೆಯನ್ನು ಮಾನ್ಯ ಮಾಡಿರಿ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ನಿಮ್ಮ ಕೆಲಸ ಕಾರ್ಯಗಳು ವೇಗವನ್ನು ಪಡೆಯುವವು. ಹಿರಿಯರು ತಮ್ಮ ಸ್ವಯಂಕೃತ ಅಪರಾಧಗಳಿಂದ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆ. ಆಯುಧ ವ್ಯಾಪಾರಿಗಳು ಅವರ ಗಿರಾಕಿಗಳ ಬಗ್ಗೆ ಹೆಚ್ಚಿನ ಎಚ್ಚರವಹಿಸಿ. ಅಧ್ಯಯನದಲ್ಲಿ ಆಸಕ್ತಿ ಮೂಡಿ ಹೊಸ ವಿಚಾರಗಳನ್ನು ಕಲಿಯಲು ಯತ್ನಿಸುವಿರಿ. ಉತ್ತಮ ಸಂವಹನದಿಂದ ಬಂಧುಗಳ ನಡುವಿನ ಸಂಶಯಗಳು ನಿವಾರಣೆ. ಆದಾಯ ಮತ್ತು ಖರ್ಚು ಸಮನಾಗಿರುವ ಸಾಧ್ಯತೆಗಳಿವೆ. ಮೂಳೆಯ ತೊಂದರೆ ಇರುವವರು ಚಿಕಿತ್ಸೆ ಪಡೆಯುವುದು ಉತ್ತಮ. ಹೈನುಗಾರಿಕೆಯನ್ನು ಮಾಡುವವರೆಗೆ ಪ್ರಗತಿ ಇರುತ್ತದೆ. ಸಿದ್ಧಪಡಿಸಿದ ಬಟ್ಟೆ ತಯಾರಕರಿಗೆ ಬೇಡಿಕೆ ಹೆಚ್ಚುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಆದಾಯ ಮತ್ತು ಉಳಿತಾಯದಲ್ಲಿ ಪ್ರಗತಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ಮಂಗಳ ಕಾರ್ಯಗಳ ಬಗ್ಗೆ ಮನೆಯಲ್ಲಿ ಮಾತಾಗಬಹುದು. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಸಹಾಯ. ಲೇವಾದೇವಿ ವ್ಯವಹಾರಗಳು ಸದ್ಯ ಬೇಡವೇ ಬೇಡ. ಮಹತ್ತರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕೂಲಂಕಷವಾಗಿ ಅವಲೋಕನ ಮಾಡಿರಿ. ಸಹೋದರಿಯರಿಂದ ನಿಮ್ಮ ಕಾನೂನು ವ್ಯವಹಾರಗಳಲ್ಲಿ ನಿಮಗೆ ಸಾಕಷ್ಟು ಸಹಾಯ ದೊರೆಯುತ್ತದೆ. ದೂರದಲ್ಲಿರುವ ಮಕ್ಕಳ ಓದಿಗಾಗಿ ಹಣ ಕಳುಹಿಸಬೇಕಾಗಬಹುದು. ಕೃಷಿಭೂಮಿಯ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಹಿರಿಯರ ಸಂತೋಷಕ್ಕಾಗಿ ಯಾತ್ರೆ ಮಾಡಿಸುವಿರಿ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸಿನ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಭಾಷಾಂತರ ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆತು ಸಂಪಾದನೆ ಹೆಚ್ಚುವ ಸಾಧ್ಯತೆ ಇದೆ. ಉದ್ಯೋಗವನ್ನು ಅರಸುತ್ತಿರುವವರು ಒದಗಿಬಂದ ಉದ್ಯೋಗವನ್ನು ದೂರ ಮಾಡುವುದು ಒಳಿತಲ್ಲ. ಖರ್ಚು ವೆಚ್ಚಗಳ ಬಗ್ಗೆ ಸರಿಯಾದ ಹಿಡಿತವನ್ನು ಹೊಂದುವುದು ಬಹಳ ಒಳ್ಳೆಯದು. ಮಧ್ಯವರ್ತಿ ಕೆಲಸ ಮಾಡುವವರಿಗೆ ಸ್ವಲ್ಪ ತೊಂದರೆಗಳಾಗುವ ಸೂಚನೆಗಳಿವೆ. ಸರ್ಕಾರಿ ಯೋಜನೆಗಳಲ್ಲಿ ಹಣ ಹೂಡಿದವರಿಗೆ ಈಗ ಹೆಚ್ಚಿನ ಲಾಭ ದೊರೆಯುತ್ತದೆ. ಕೃಷಿಯಲ್ಲಿ ವಿಶೇಷ ಆಸಕ್ತಿ ಮೂಡುವ ಸಾಧ್ಯತೆ ಇದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ವಾರದ ಆರಂಭದಲ್ಲಿ ಅತ್ಯಂತ ಉಲ್ಲಾಸದ ವಾತಾವರಣ. ಕೃಷಿಭೂಮಿ ಖರೀದಿಯಿಂದ ಸಂತೋಷ. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಅಪರೂಪದ ವಸ್ತುಗಳ ಖರೀದಿ ಬಗ್ಗೆ ಆಸಕ್ತಿ ಬೆಳೆಯುತ್ತದೆ. ವೃತ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಂಡು ಪುನಃ ವೃತ್ತಿಗೆ ಹೋಗುವಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ. ಸಂಗಾತಿಯಿಂದ ನಿಮ್ಮ ಕಾರ್ಯಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನಿರೀಕ್ಷಿಸಬಹುದು. ಸಂಗಾತಿಯ ವ್ಯವಹಾರಗಳಲ್ಲಿ ಲಾಭ ಸಾಧ್ಯತೆ. ತಂದೆಯ ಆರೋಗ್ಯದಲ್ಲಿ ದಿಢೀರ್‌ ಏರುಪೇರನ್ನು ಕಂಡರೂ ನಂತರ ಸುಧಾರಣೆಯನ್ನು ಕಾಣಬಹುದು.

Leave a Comment

Your email address will not be published. Required fields are marked *