Ad Widget .

ಒಮಿಕ್ರಾನ್ ಗಂಭೀರವಲ್ಲ, ಶಾಲೆಗಳ ಬಂದ್, ಲಾಕ್ ಡೌನ್ ಮಾಡಿ ಗಾಬರಿ ಹುಟ್ಟಿಸಬೇಡಿ| ಕೇಂದ್ರಕ್ಕೆ ತಜ್ಞರಿಂದ ಸಲಹೆ|

ನವದೆಹಲಿ: ದೇಶದಲ್ಲಿ ಕೊರೊನಾ ಕೇಸ್ ಗಳನ್ನು ನೋಡಿ ಶಾಲೆಗಳನ್ನು ಬಂದ್ ಮಾಡಬೇಡಿ. ನಿರ್ಬಂಧ ಹೇರಬೇಡಿ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಕೋವಿಡ್ ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥ, ಹೈದರಾಬಾದ್ ಐಐಟಿ ಪ್ರಾಧ್ಯಾಪಕ ಡಾ. ವಿದ್ಯಾಸಾಗರ್ ಸಲಹೆ ನೀಡಿದ್ದಾರೆ.

Ad Widget . Ad Widget .

ಶಾಲೆ, ಕಾಲೇಜು, ಕಚೇರಿಗಳನ್ನು ಬಂದ್ ಮಾಡುವುದು, ಲಾಕ್ಡೌನ್ ಮಾಡುವುದು ಗಾಬರಿಯ ಕ್ರಮಗಳಾಗಿವೆ. ಕೊರೋನಾ ಏರುಗತಿಯಲ್ಲಿ ಇದ್ದರೂ, ಆಸ್ಪತ್ರೆ ಸೇರುವವರ ಸಂಖ್ಯೆ ಬಹಳ ಕಡಿಮೆ ಇದೆ. ಎಲ್ಲಾ ಸೋಂಕಿತರನ್ನು ಕಾಯಿಲೆ ಪೀಡಿತರು ಎಂದು ಹೇಳಲಾಗುವುದಿಲ್ಲ. ಸಂಖ್ಯೆಯನ್ನು ನೋಡಿ ಗಾಬರಿ ಆಗಬಾರದು, ನಿರ್ಬಂಧ ಹೇರಬಾರದು ಎಂದು ಅವರು ಸಲಹೆ ನೀಡಿದ್ದಾರೆ.

Ad Widget . Ad Widget .

ಕೊರೋನಾದಷ್ಟು ರೂಪಾಂತರಿ ಒಮಿಕ್ರಾನ್ ಗಂಭೀರ ಕಾಯಿಲೆಯಲ್ಲ. ಚಳಿಗಾಲದಲ್ಲಿ ಜನ ಶೀತಕ್ಕೆ ತುತ್ತಾಗುತ್ತಾರೆ. ಇದಕ್ಕೆ ಗಾಬರಿ ಆಗಬಾರದು ಎಂದು ಅವರು ಹೇಳಿದ್ದಾರೆ.

Leave a Comment

Your email address will not be published. Required fields are marked *