Ad Widget .

ತೆಂಗಿನ ಮರ ಬಿದ್ದು ನವ ವಿವಾಹಿತ ದಾರುಣ ಸಾವು

Ad Widget . Ad Widget .

ಬಂಟ್ವಾಳ: ತೆಂಗಿನ ಮರ ಬಿದ್ದು ನವ ವಿವಾಹಿತನೋರ್ವ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಾಯಿಲ ಎಂಬಲ್ಲಿ ಜ. 9 ರಂದು ನಡೆದಿದೆ.

Ad Widget . Ad Widget .

ನಾಯಿಲ ಬೆಟ್ಟುಗದ್ದೆ ನಿವಾಸಿ ದಿ. ಪೂವಪ್ಪ ಪೂಜಾರಿ ಎಂಬವರ ಪುತ್ರ ಯತಿರಾಜ್ (37) ಮೃತಪಟ್ಟ ದುರ್ದೈವಿ. ಇವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು.

ಸ್ಥಳೀಯ ಕೃಷಿಕರೊಬ್ಬರ ತೋಟದಲ್ಲಿ ತೆಂಗಿನಮರ ಕಡಿಯುವ ಗುತ್ತಿಗೆಯನ್ನು ಯತಿರಾಜ್ ಅವರು ಪಡೆದುಕೊಂಡಿದ್ದು , ಆ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಕಡಿಯುತ್ತಿದ್ದ ತೆಂಗಿನ ಮರ ಯತಿರಾಜ್ ಅವರ ಮೇಲೆ ಬಿದ್ದಿದ್ದು ಗಾಯಗೊಂಡ ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುಲಾಯಿತ್ತಾರೂ ಆದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

Leave a Comment

Your email address will not be published. Required fields are marked *