Ad Widget .

ಮಂಗಳೂರು: ವಾರಾಂತ್ಯ ಕರ್ಪ್ಯೂ ಹಿನ್ನೆಲೆ| ಸಾರ್ವಜನಿಕ ಓಡಾಟಕ್ಕೆ ಬ್ರೇಕ್| ಪೊಲೀಸರಿಂದ ಬಿಗಿ ಕ್ರಮ|

ಮಂಗಳೂರು: ರಾಜ್ಯ ಸರಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಬಂದೋಬಸ್ತು ಹಾಗೂ ಜನತೆಯ ಅನಗತ್ಯ ಓಡಾಟಕ್ಕೆ ಕಡಿವಾಣ ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಇಬ್ಬರು ಡಿಸಿಪಿ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ.

Ad Widget . Ad Widget .

ಶುಕ್ರವಾರ ರಾತ್ರಿ 10ರ ಬಳಿಕ ಓಡಾಟ ನಡೆಸುವವರನ್ನು ವಿಚಾರಣೆ ನಡೆಸಿ ಕಳುಹಿಸುತ್ತಿರುವ ದೃಶ್ಯ ಕಂಡು ಬಂದಿತು. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿ ವಾಹನಗಳಲ್ಲಿ ಓಡಾಟ ನಡೆಸುವವರನ್ನು ಪರಿಶೀಲನೆ ನಡೆಸುತ್ತಿದ್ದ ಪೊಲೀಸರು ವಾಹನಗಳಲ್ಲಿ ಅನಗತ್ಯ ಓಡಾಟ ನಡೆಸುತ್ತಿದ್ದವರನ್ನು ಎಚ್ಚರಿಕೆ ‌ನೀಡಿ ಹಿಂದಕ್ಕೆ ಕಳುಹಿಸಿದ್ದಾರೆ.

Ad Widget . Ad Widget .

ನಗರದಲ್ಲಿ ರಾತ್ರಿ 10ಗಂಟೆಯ ಬಳಿಕ ಓಡಾಟ ನಡೆಸುತ್ತಿದ್ದ ಕಾರು, ಬೈಕ್, ರಿಕ್ಷಾಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದ ದೃಶ್ಯಗಳು ಕಂಡು ಬಂದಿವು. ಅಲ್ಲದೆ ಮಾಸ್ಕ್ ಧರಿಸದೆ, ಸಕಾರಣವಿಲ್ಲದೆ ಓಡಾಟ ನಡೆಸುವವರನ್ನು ವಿಚಾರಣೆ ನಡೆಸಿ ದಂಡ ವಿಧಿಸಿದ ಘಟನೆಯೂ ನಡೆದಿದೆ.

ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್, ಡಿಸಿಪಿಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ಹಾಗೂ ಪೊಲೀಸರ ತಂಡ ಹದ್ದಿನ ಕಣ್ಣಿರಿಸಿ ಪ್ರತೀ ವಾಹನಗಳನ್ನು ತಪಾಸಣೆ ನಡೆಸಿಯೇ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂದಿತು. ಇಂದು ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನಾಳೆ, ನಾಡಿದ್ದು ಎರಡೂ ದಿನವೂ ಪರಿಸ್ಥಿತಿ ಇದೇ ರೀತಿ ಮುಂದುವರಿಯಲಿದೆ.

Leave a Comment

Your email address will not be published. Required fields are marked *