Ad Widget .

ನೈಟ್ ಕರ್ಪ್ಯೂ ಹಿನ್ನೆಲೆ| ಅಜಿಲಮೊಗರು ಉರೂಸ್ ಸಮಯದಲ್ಲಿ ಬದಲಾವಣೆ| ಹಗಲು ಹೊತ್ತಿನಲ್ಲೇ ನಡೆಯಲಿದೆ ಧಾರ್ಮಿಕ ಪ್ರಭಾಷಣ|

ಬಂಟ್ವಾಳ: ಜಿಲ್ಲೆಯ ಪ್ರಸಿದ್ಧ ಅಜಿಲಮೊಗರು ಮಾಲಿದ ಉರೂಸ್ ಈ ಬಾರಿ ನೈಟ್ ಕರ್ಫ್ಯೂ ಹಿನ್ನಲೆ ಉದಯಾಸ್ತಮಾನವಾಗಿ ಆಚರಿಸಲಾಗುವುದು ಎಂದು ಬಾಬಾ ಫಕ್ರುದ್ದೀನ್ ಜಮಾಅತ್ ಸಮಿತಿ ಹೇಳಿಕೆ ನೀಡಿದೆ.

Ad Widget . Ad Widget .

ಜನವರಿ 14 ರಿಂದ 18 ರ ವರೆಗೆ ಉದ್ದೇಶಿಸಿದ್ದ ಮಾಲಿದ ಉರೂಸ್ ನ ದಿನಾಂಕ ಮತ್ತು ಸಮಯವನ್ನು ಬದಲಾಯಿಸಿದ್ದು ಪೊಲೀಸರು ಅನುಮತಿ ನೀಡಿದರೆ ಯತಾ ಸ್ಥಿತಿಯಲ್ಲೇ ಉರೂಸ್ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದು ಜಮಾಅತ್ ಸದಸ್ಯ ಇಬ್ರಾಹಿಂ ರವರು ತಿಳಿಸಿದ್ದಾರೆ.

Ad Widget . Ad Widget .

ನೈಟ್ ಕರ್ಫ್ಯೂ ಹಿನ್ನಲೆ ದಿನಾಂಕ ಮತ್ತು ಸಮಯಗಳಲ್ಲಿ ಒಂದಷ್ಟು ಬದಲಾವಣೆ ನಡೆಸಿದ್ದು ಜನವರಿ 16 ರಿಂದ ಜನವರಿ 19ರ ವರೆಗೆ ನಡೆಯಲಿದೆ. ಈ ದಿನಗಳಲ್ಲಿ ಬೆಳಗ್ಗಿನ ಹೊತ್ತು ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಹೊತ್ತು ಯಾವುದೇ ಕಾರ್ಯಕ್ರಮ ನಡೆಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮ ವಿವರ:
16 ರಂದು ಬೆಳಿಗ್ಗೆ ಭಂಡಾರದ ಹರಕೆ ನಡೆಯಲಿದ್ದು ಆ ದಿನ ರಾತ್ರಿ 8 ಗಂಟೆ ಹೊತ್ತಿಗೆ ಭಂಡಾರದ ಮಾಲಿದ ವಿತರಣೆ ನಡೆಯಲಿದೆ.
17 ರಂದು ಬೆಳಿಗ್ಗೆಯಿಂದ ರಾತ್ರಿ 9 ರ ವರೆಗೆ ಪರ ಊರವರಿಂದ ಮಸೀದಿಗೆ ಮಾಲಿದ ಕೊಡುವಿಕೆ ನಡೆಯಲಿದ್ದು 18 ರಂದು ಬೆಳಿಗ್ಗೆ 10 ರಿಂದ ಮಾಲಿದ ವಿತರಣೆ ನಡೆಯಲಿದೆ. 19 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ ವರೆಗೂ ಕಂದೂರಿ ವಿತರಣೆ ನಡೆಯಲಿದೆ.

ಮೊದಲು ನಿಗದಿಯಾಗಿದ್ದ ಮತ ಪ್ರಬಾಷಣಗಳೆಲ್ಲವನ್ನೂ ರದ್ದುಗೊಳಿಸಿದ್ದು, ಪೊಲೀಸರು ಅನುಮತಿ ನೀಡಿದರಷ್ಟೇ ಕಾರ್ಯಕ್ರಮ ನಡೆಯುತ್ತದೆ.

ಈ ಕಾರ್ಯಕ್ರಮಗಳೆಲ್ಲವೂ ಕೋವಿಡ್ ನಿಯಮಗಳಿಗೆ ಅನುಸಾರವಾಗಿ ನಡೆಯಲಿದ್ದು ಸಾರ್ವಜನಿಕರು ಸಹಕರಿಸುವಂತೆ ಅಜಿಲಮೊಗರು ಜಮಾಅತ್ ಸಮಿತಿ ಮನವಿ ಮಾಡಿದೆ.

Leave a Comment

Your email address will not be published. Required fields are marked *