Ad Widget .

ಸುದ್ದಿ ಪ್ರಸಾರ ಮಾಡುವುದಾಗಿ ಚಾನೆಲ್ ವರದಿಗಾರನಿಂದ ಬ್ಲ್ಯಾಕ್ ಮೇಲ್| 25 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟವ ಹಣ ಪಡೆಯುತ್ತಿರುವಾಗಲೇ ಅರೆಸ್ಟ್

ಬೆಂಗಳೂರು: ಮರಳು ಮಾಫಿಯಾದ ಸಂಬಂಧಿಸಿದಂತೆ ಸುದ್ದಿ ಪ್ರಸಾರ ತಡೆಗೆ 25 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು 8 ಲಕ್ಷ ರೂ. ಹಣ ಪಡೆಯುತ್ತಿದ್ದಾಗ ಖಾಸಗಿ ವಾಹಿನಿಯ ಪತ್ರಕರ್ತನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Ad Widget . Ad Widget .

ಖಾಸಗಿ ಚಾನೆಲ್​ ಸಿಬ್ಬಂದಿ ಬಂಧನ
ಅನಿಲ್‌ಕುಮಾರ್, ಶ್ರೀಕಾಂತ್ ಕುಮಾರ್, ಸುನಿಲ್ ಕುಮಾರ್ ಎಂಬುವವರು ತಮಗೆ ಸುದ್ದಿ ಪ್ರಸಾರ ಮಾಡದಂತೆ ತಡೆಯಲು ಹಣ ಕೇಳುತ್ತಿದ್ದಾರೆ ಎಂದು ಆಡಿಯೋ ಮತ್ತು ವಿಡಿಯೋ ಸಮೇತ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384, 504, 506 ಮತ್ತು 34 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ರಕರ್ತ ತೀರ್ಥ ಪ್ರಸಾದ್‌ನನ್ನು ಬಂಧಿಸಿ ಉಳಿದ ಆರೋಪಿಗಳ ಪಾತ್ರದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Ad Widget . Ad Widget .

ಏನಿದು ಪ್ರಕರಣ ?
ಖಾಸಗಿ ಸುದ್ದಿವಾಹಿನಿಯ ಉದ್ಯೋಗಿ ತೀರ್ಥ ಪ್ರಸಾದ್, ಸುನಿಲ್ ಹಾಗೂ ಅನಿಲ್ ಎಂಬುವವರಿಗೆ ಕರೆ ಮಾಡಿ 420 ಸೊಣ್ಣಪ್ಪ ಅಂಡ್ ಸನ್ಸ್ ಮರಳು ಮಾಫಿಯಾ ಡಾನ್‌ಗಳು ಎಂಬ ಶೀರ್ಷಿಕೆಯಡಿ ನಮ್ಮ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಹಾಗಾಗಿ ನಿಮ್ಮ ಜೊತೆ ಮಾತನಾಡಬೇಕು ಸಿಗುವುದಾಗಿ ತಿಳಿಸಿದ್ದಾರೆ.

25 ಲಕ್ಷಕ್ಕೆ ಬೇಡಿಕೆ:
ಮುಖಾಮುಖಿ ಭೇಟಿಯಾಗಿ ಮಾತನಾಡಿದ ವೇಳೆ ಮರಳು ಮಾಫಿಯಾ ಮಾಡುವುದರ ಬಗ್ಗೆ ಸುದ್ದಿ ಮಾಡಲಾಗುತ್ತಿದ್ದು, 25 ಲಕ್ಷ ರು. ಕೊಟ್ಟರೆ ಸುದ್ದಿ ಪ್ರಸಾರ ನಿಲ್ಲಿಸಲಾಗುವುದು. ಇಲ್ಲದಿದ್ದರೆ ನಿಮ್ಮ ಮಾನಹಾನಿ ಮಾಡಲಾಗುವುದು ಎಂದು ಅನಿಲ್ ಅವರಿಗೆ ತೀರ್ಥಪ್ರಸಾದ್ ಬೆದರಿಕೆ ಹಾಕಿದ್ದಾರೆ.

ಜ.5ರಂದು ರಾತ್ರಿ ಹೋಟೆಲ್ ಉಡುಪಿಯಲ್ಲಿ ಭೇಟಿಯಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಅನಿಲ್ ನಿರಾಕರಿಸಿದಾಗ ಪದೇ ಪದೇ ಸುದ್ದಿ ಪ್ರಸಾರ ಮಾಡಿ ಮಾನಹಾನಿ ಮಾಡುವುದಾಗಿ ಭೀತಿ ಹುಟ್ಟಿಸಿದ್ದಾರೆ. ಅಲ್ಲದೇ, ತೀರ್ಥ ಪ್ರಸಾದ್, ಕುಮಾರ್ ಎಂಬುವರಿಗೆ ಇನ್ನಿತರ ಆರೋಪಿಗಳೊಂದಿಗೆ ಕಾನ್ಫರೆನ್‌ ಕರೆ ಮಾಡಿ ಮಾತನಾಡಿಸಿದ್ದಾರೆ. ಈ ವೇಳೆ ಮಾಜಿ ಎಂಎಲ್​ಸಿ ಮಾತನಾಡಿ, ಮರಳು ಮಾರಾಟ ಮಾಡುತ್ತಿರುವುದಕ್ಕೆ ಇದುವರೆಗೂ 2 ಕೋಟಿ ರೂ. ದಂಡ ಹಾಕಿಸಲಾಗಿದ್ದು, ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದರು. ಹಾಗಾಗಿ, ಹಣ ಹೊಂದಿಸಿ ಕೊಡುವುದಾಗಿ ಒಪ್ಪಿಕೊಂಡಿದ್ದೆವು ಎಂದು ಅನಿಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Comment

Your email address will not be published. Required fields are marked *