Ad Widget .

ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗಿ ವೈದ್ಯರು ಗೋವಾದಲ್ಲಿ ಮದ್ವೆಯಾಗ್ತಿದಾರಂತೆ!

Ad Widget . Ad Widget .

ನಾಗ್ಪುರ: ಈ ಹಿಂದೆ ತೆಲಂಗಾಣದಲ್ಲಿ ಸಲಿಂಗಿ ಜೋಡಿಯೊಂದು ಹಸೆಮಣೆ ಏರಿದ್ದ ಸುದ್ದಿ ನಡೆದಿರುವ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿ ಇಬ್ಬರು ಮಹಿಳಾ ವೈದ್ಯರು ಸರಳ ಸಮಾರಂಭದಲ್ಲಿ ನಿಶ್ಚಿತಾರ್ಥವಾಗಿದ್ದಾರೆ.

Ad Widget . Ad Widget .

ಪರಸ್ಪರ ಪ್ರೇಮಿಸುತ್ತಿದ್ದ ಈ ಇಬ್ಬರು ಸಲಿಂಗಿ ವೈದ್ಯರು, ಒಂದು ಹೆಜ್ಜೆ ಮುಂದೆ ಹೋಗಿ ಜೀವನಪರ್ಯಂತ ಜೊತೆಗಿರಲು ನಿರ್ಧರಿಸಿದ್ದಾರೆ. ಈ ಸಲಿಂಗಿ ಜೋಡಿ ಶೀಘ್ರದಲ್ಲೇ ಗೋವಾದಲ್ಲಿ ಮದುವೆಯಾಗಲು ಯೋಜಿಸಿದ್ದಾರೆ.

ಪರೋಮಿತಾ ಮುಖರ್ಜಿ ಮತ್ತು ಸುರಭಿ ಮಿತ್ರ ಡಿಸೆಂಬರ್ 29ರಂದು ನಾಗ್ಪುರದ ಹೊರವಲಯದಲ್ಲಿ ಪರಸ್ಪರ ಉಂಗುರ ಬದಲಾಯಿಸುವ ಮೂಲಕ ನಿಶ್ಚಿತಾರ್ಥವಾಗಿದ್ದಾರೆ. ಇಬ್ಬರು ಕೂಡ ಬಂಗಾಳ ಮೂಲದವರಾಗಿದ್ದು, ತಮ್ಮ ನಿಶ್ಚಿತಾರ್ಥ ಸಮಾರಂಭದಲ್ಲಿ ಹಾಡುತ್ತಾ, ನೃತ್ಯ ಮಾಡುತ್ತಾ ಸಂಭ್ರಮಿಸಿದ್ದಾರೆ.

ಇಬ್ಬರ ಸಂಬಂಧದ ಬಗ್ಗೆ 2013ರಿಂದಲೇ ಪರೋಮಿತಾ ಅವರ ತಂದೆಗೆ ತಿಳಿದಿತ್ತಂತೆ. ಇತ್ತೀಚೆಗೆ ತನ್ನ ತಾಯಿಯ ಬಳಿ ವಿಚಾರ ಹೇಳಿದಾಗ ಮೊದಲಿಗೆ ಅವರು ಆಘಾತಕ್ಕೊಳಗಾದರಂತೆ. ಆದರೆ, ಪುತ್ರಿಯ ಸಂತೋಷವೇ ಮುಖ್ಯವಾದ್ದರಿಂದ ಒಪ್ಪಿಕೊಂಡಿದ್ದಾಗಿ ಪರೋಮಿತಾ ಹೇಳಿದ್ದಾರೆ. ಇನ್ನು ಸುರಭಿ ಅವರ ಮನೆಯಲ್ಲಿ ಇವರಿಬ್ಬರ ಸಂಬಂಧಕ್ಕೆ ಯಾವುದೇ ವಿರೋಧವಿರಲಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ. ಈ ಜೋಡಿಯು 2022ರ ಅಂತ್ಯ ಅಥವಾ 2023ರ ಆರಂಭದಲ್ಲಿ ಮದುವೆಯಾಗಲು ಯೋಜಿಸಿದ್ದಾರಂತೆ.

Leave a Comment

Your email address will not be published. Required fields are marked *