ಬೆಂಗಳೂರು : ಕೊರೊನಾ ಪ್ರಕರಣಗಳು ಹೆಚ್ಚು ಆಗುತ್ತಿದ್ದರೂ ಮತ್ತೆ ಯಾವುದೇ ಲಾಕ್ ಡೌನ್ ಮಾಡುವ ಮಾತೇ ಇಲ್ಲ ಎಂದು ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತಾಡಿದ ಡಾ. ಸುಧಾಕರ್ ಕೊರೊನ ಪ್ರಕರಣಗಳು ಹೆಚ್ಚು ಆಗಿಯೇ ಆಗುತ್ತೆ. ಪಾಸಿಟಿವಿಟಿ ರೇಟ್ ಬಗ್ಗೆ ಆತಂಕ ಬೇಡ, ನಾವು ಲಸಿಕಾಕರಣ ತೀವ್ರತೆಯನ್ನು ಬಹಳ ಅದ್ಬುತವಾಗಿ ಮಾಡಿರುವುದರಿಂದ ಜನರು ಆತಂಕ ಪಡುವ ಅಗತ್ಯ ಇಲ್ಲ, ಇದರಿಂದ ನಿಯಂತ್ರಣಕ್ಕೆ ಬರುತ್ತದೆ. ಆದರೆ ಯಾವುದೇ ಕಾರಣಕ್ಕೂ ಸಂಪೂರ್ಣ ಲಾಕ್ ಡೌನ್ ಮಾಡುವುದಿಲ್ಲ.
ಲಾಕ್ ಡೌನ್ ಕಳೆದು ಹೋದ ಭೀತಿ, ಅದರ ಬಗ್ಗೆ ಚಿಂತೆ ಬೇಡ, ಜನರ ಬದುಕಿಗೆ ತೊಂದರೆ ಮಾಡಲ್ಲ. ಸರ್ಕಾರ ಜನರ ರಕ್ಷಣೆಗೆ ಬದ್ಧವಾಗಿದೆ. ಆದರೂ ಜನರು ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಲಾಕ್ ಡೌನ್ ಬಗ್ಗೆ ಮುಖ್ಯಮಂತ್ರಿಗಳೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮತ್ತೊಮ್ಮೆ ಲಾಕ್ ಡೌನ್ ಮಾಡುವ ಪ್ರಶ್ನೆ ಉದ್ಭವಿಸಲ್ಲ. ಜನತೆ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಚಿವರು ಇಂದು ಸ್ಪಷ್ಟನೆ ನೀಡಿದ್ದಾರೆ.