Ad Widget .

ಒಂಬತ್ತು ವರ್ಷದ ಬಾಲಕಿ‌ ಮೇಲೆ ಇಬ್ಬರು ಬಾಲಕರಿಂದ ಅತ್ಯಾಚಾರ

Ad Widget . Ad Widget .

ಮುಜಾಫರ್‌ನಗರ: ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಇಬ್ಬರು ಹುಡುಗರು ಅತ್ಯಾಚಾರವೆಸಗಿದ ಕುರಿತು ಪ್ರಕರಣವೊಂದು ದಾಖಲಾಗಿದೆ.

Ad Widget . Ad Widget .

ಕಳವಳಕಾರಿ ಘಟನೆಯು ಕೆಲವು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಜನವರಿ 5 ರಂದು ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಸಂತ್ರಸ್ತೆಯ ಪೋಷಕರು ನೀಡಿದ ಪೊಲೀಸ್ ದೂರಿನ ಪ್ರಕಾರ, ಬಾಲಕಿ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಆರೋಪಿಗಳಾದ 10 ಮತ್ತು 14 ವರ್ಷ ವಯಸ್ಸಿನ ಬಾಲಕರು ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *