Ad Widget .

ಕೆಎಸ್ಆರ್ ಟಿಸಿ‌ ಪ್ರಯಾಣಿಕರೇ ಗಮನಿಸಿ| ಹೊಸ ಮಾರ್ಗಸೂಚಿ ಪ್ರಕಟಿಸಿದ ನಿಗಮ|

Ad Widget . Ad Widget .

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಕೊರೋನಾ ಹಾಗೂ ಓಮೈಕ್ರಾನ್ ಸೋಂಕು ಹರಡುವುದನ್ನು ತಪ್ಪಿಸಲು ಕಠಿಣ ನಿಯಮ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿಸಿ (KSRTC New Rules) ಹೊಸ ಮಾರ್ಗಸೂಚಿ ಪ್ರಕಟಿಸಿದೆ.

Ad Widget . Ad Widget .

ಕೊರೋನಾ ಕೇಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಪ್ಯೂ ಹಾಗೂ ವೀಕೇಂಡ್ ಕರ್ಪ್ಯೂ ಜಾರಿಗೆ ತಂದಿದ್ದು, ಜನರ ಓಡಾಟವನ್ನು ನಿಯಂತ್ರಿಸಲು ನಿಯಮ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಹೊಸ ಕೊರೋನಾ ಮಾರ್ಗಸೂಚಿ ಪ್ರಕಟಿಸಿದೆ. ವಾರಾಂತ್ಯ ದಿನದಂದು ಜನದಟ್ಟಣೆ ನೋಡಿಕೊಂಡು ಸಾರಿಗೆ ಸೇವೆ ಒದಗಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದ್ದು, ಸಾಧ್ಯವಾದಷ್ಟು ಆನ್ ಲೈನ್ ಬುಕ್ಕಿಂಗ್ ಆದ್ಯತೆ ನೀಡುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

ಇನ್ನು ಬಸ್ ಗಳ ಸೇವೆಯನ್ನು ಆನ್ ಲೈನ್ ಬುಕ್ಕಿಂಗ್ ಆಧರಿಸಿ ರಾಜ್ಯದಲ್ಲಿ ಸಾರಿಗೆ ಸೇವೆ ಒದಗಿಸಲು ನಿರ್ದರಿಸಿದ್ದು ಅಗತ್ಯವಿದ್ದಷ್ಟು ಬಸ್ ಗಳನ್ನು ಮಾತ್ರ ಕೆಎಸ್ಆರ್ಟಿಸಿ ರಸ್ತೆಗಿಳಿಸಲಿದೆ. ಇನ್ನು ಪ್ರಮುಖವಾಗಿ ಕೆಎಸ್ಆರ್ಟಿಸಿ ಕೈಗೊಂಡಿರುವ ನಿಯಮಗಳನ್ನು ಗಮನಿಸುವುದಾದರೆ

  1. ವಾರಾಂತ್ಯದಲ್ಲಿ ಜನಸಂಚಾರವನ್ನು ಗಮನಿಸಿಕೊಂಡು ಅಗತ್ಯವಿದ್ದಷ್ಟೇ ಬಸ್ ಸೇವೆ ಒದಗಿಸುವುದು.
  2. ರಾತ್ರಿ ಬಸ್ ಸೇವೆಗಳಿಗೆ ಆನ್ ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸಿ, ಬುಕ್ಕಿಂಗ್ ಆಧರಿಸಿ ಬಸ್ ಸೌಲಭ್ಯ ಒದಗಿಸುವುದು.
  3. ನೆರೆ ರಾಜ್ಯಗಳಿಂದ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಎರಡು ಡೋಸ್ ಪಡೆಯದಿದ್ದರೂ, ಪಡೆಯದಿದ್ದರೂ 72 ಗಂಟೆ ಮುನ್ನ ಆರ್ ಟಿ ಪಿಎಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ.
  4. ಮಹಾರಾಷ್ಟ್ರ, ಗೋವಾ, ಕೇರಳದಿಂದ ಬರುವ ಪ್ರಯಾಣಿಕರು ಆರ್ ಟಿ ಪಿ ಸಿ ಆರ್ ಟೆಸ್ಟ್ ವರದಿ ತೋರಿಸುವುದು ಕಡ್ಡಾಯಗೊಳಿಸಲಾಗಿದೆ.
  5. ಕೆಎಸ್ಆರ್ಟಿಸಿ ಪ್ರಯಾಣಿಕರು, ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯ ಅಲ್ಲದೇ ಪ್ರಯಾಣಿಕರಿಗೆ ಕೊವಿಡ್ ಮಾರ್ಗಸೂಚಿ ಪಾಲನೆ ಅಗತ್ಯವನ್ನು ಮನವರಿಕೆ ಮಾಡಿಸುವಂತೆ ಸೂಚಿಸಲಾಗಿದೆ.

ಈ ಮೇಲಿನ ನಿಯಮಗಳನ್ನು ರೂಪಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ. ಕೇವಲ ಕೆಎಸ್ಆರ್ಟಿಸಿ ಮಾತ್ರವಲ್ಲದೇ ಬಿಎಂಟಿಸಿ ಕೂಡ ಬಸ್ ಸಂಚಾರ ಕಡಿತಗೊಳಿಸಲು ನಿರ್ಧರಿಸಿದ್ದು, ಒಟ್ಟಿನಲ್ಲಿ ಕರ್ಪ್ಯೂ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರವೂ ಸ್ಥಗಿತಗೊಳ್ಳೋದು ಖಚಿತವಾಗಿದೆ.

Leave a Comment

Your email address will not be published. Required fields are marked *