Ad Widget .

ಮಲತಂದೆಯಿಂದ 5 ವರ್ಷದ ಮಗಳ ಮೇಲೆ ಅತ್ಯಾಚಾರ| ಆರೋಪಿಯನ್ನು ಬಂಧಿಸಿದ ಪೊಲೀಸರು|

Ad Widget . Ad Widget .

ಚಾಮರಾಜನಗರ: ಮಲತಂದೆಯೇ 5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Ad Widget . Ad Widget .

ಘಟನೆ ಎಸಗಿರುವ ಆರೋಪಿ ಬಾಲಕಿಯ ತಾಯಿಯ ಎರಡನೇ ಗಂಡನಾಗಿದ್ದು, ಆತನ ವಿರುದ್ದ ಪತ್ನಿ ದೂರು ನೀಡಿದ್ದಾಳೆ. ಮೊದಲ ಗಂಡನ ಕಿರುಕುಳ ತಾಳಲಾರದೇ ಆತನಿಂದ ಎರಡು ವರ್ಷಗಳ ಹಿಂದೆ ಡೈವೋರ್ಸ್ ಪಡೆದಿದ್ದ ಮಹಿಳೆ ಆರೋಪಿಯೊಡನೆ ಮರು ವಿವಾಹವಾಗಿದ್ದರು. ಆಕೆಗೆ ಇಬ್ಬರು ಗಂಡು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ.

ಆರೋಪಿ ಮೂಲತಃ ಮೈಸೂರಿನವನಾಗಿದ್ದು, ಈತ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಈತನ ಕಿರುಕುಳ ತಾಳಲಾರದೇ ಮಹಿಳೆ ನಗರದಲ್ಲಿರುವ ತಂದೆಯ ಮನೆಗೆ ಬಂದಿದ್ದರು. ಗಂಡನ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರನ್ನೂ ನೀಡಿದ್ದರು. ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ನಂತರ ಈರ್ವರೂ ನಗರದಲ್ಲೇ ಮನೆಮಾಡಿಕೊಂಡು ವಾಸಿಸುತ್ತಿದ್ದರು.

ಹೆಂಡತಿ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮುಖ ತೊಳೆಯುತ್ತಿದ್ದ 5 ವರ್ಷದ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ತಾಯಿ ಮನೆಗೆ ಬಂದಾಗ ಮಗು ಅಳುತ್ತಿತ್ತು. ಮಗುವನ್ನು ವಿಚಾರಿಸಿದಾಗ ನಡೆದ ಘಟನೆ ವಿವರಿಸಿದೆ. ನಂತರ ಆಕೆ ಪಟ್ಟಣ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.

Leave a Comment

Your email address will not be published. Required fields are marked *