ವ್ಯಾಟಿಕನ್ ಸಿಟಿ – ಮಹಿಳೆಯರ ಅತ್ಯಾಚಾರ ಮಾಡುವುದು ಇದು ಈಶ್ವರನ ಅವಮಾನವಾಗಿದೆ. ತಾಯಿ ಜೀವನ ನೀಡುತ್ತಾಳೆ. ಮಹಿಳೆ ಜಗತ್ತನ್ನು ಒಟ್ಟುಗೂಡಿಸುತ್ತಾಳೆ. ಮಹಿಳೆಯರಿಗೆ ಯಾವುದೇ ರೀತಿ ತೊಂದರೆ ಕೊಡುವುದು ಇದು ನೇರ ಭಗವಂತನಿಗೆ ಅವಮಾನ ಮಾಡಿದಂತೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ ಫ್ರಾನ್ಸಿಸ್ ಇವರು ಕ್ರೈಸ್ತ ಹೊಸವರ್ಷದ ಶುಭಾಶಯ ನೀಡುವಾಗ ಹೇಳಿದರು. ಕಳೆದೆರಡು ವರ್ಷಗಳಿಂದ ಕೊರೊನಾದ ಕಾರಣದಿಂದ ಸಂಚಾರ ನಿರ್ಬಂಧದ ಸಮಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದ ಪ್ರಮಾಣ ಹೆಚ್ಚಾಗಿದೆ, ಇದರಿಂದ ಅವರು ಮೇಲಿನ ಹೇಳಿಕೆ ನೀಡಿದರು. ಪೋಪ್ ಫ್ರಾನ್ಸಿಸ್ ಇವರು ಈ ಮೊದಲು ಮಹಿಳೆ ಮತ್ತು ಮಕ್ಕಳ ಮೇಲಿನ ಹಿಂಸಾಚಾರವನ್ನು ತಡೆಯುವಂತೆ ಕರೆ ನೀಡಿದ್ದರು.
ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯ ಭಗವಂತನಿಗೆ ಮಾಡುವ ಅವಮಾನ – ಪೋಪ್ ಪ್ರಾನ್ಸಿಸ್
