Ad Widget .

ಒಂದೇ ತಿಂಗಳಲ್ಲಿ ಭಾರತೀಯರ 17 ಲಕ್ಷ ವಾಟ್ಸ್ ಆ್ಯಪ್ ಖಾತೆಗಳು ಬ್ಯಾನ್‌

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನವದೆಹಲಿ: 2021ರ ನವೆಂಬರ್‌ ತಿಂಗಳಲ್ಲಿ ಭಾರತೀಯರ 17 ಲಕ್ಷ ಖಾತೆಗಳನ್ನು ವಾಟ್ಸಪ್‌ ಬ್ಯಾನ್‌ ಮಾಡಿದೆ. ಆದರೆ ಇದೇ ವೇಳೆ 602 ಕುಂದು ಕೊರತೆ ದೂರುಗಳನ್ನು ವಾಟ್ಸಪ್‌ ಸ್ವೀಕರಿಸಿದೆ.

Ad Widget . Ad Widget . Ad Widget .

ಮಾಸಿಕ ದೂರು ಸ್ವೀಕಾರ ವರದಿಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಒಂದು ತಿಂಗಳಲ್ಲಿ ಭಾರತೀಯರ 17,59,000 ಖಾತೆಗಳನ್ನು ವಾಟ್ಸಪ್‌ ನಿಷೇಧಿಸಿದೆ.

ನಿಯಮ ಉಲ್ಲಂಘಿಸಿದವರ ವಿರುದ್ಧ ಹಾಗೂ ದುರುಪಯೋಗ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಈ ಖಾತೆಗಳನ್ನು ಮರುಸ್ಥಾಪಿಸಿಕೊಳ್ಳುವ ಅವಕಾಶ ಬಳಕೆದಾರನಿಗೆ ಇಲ್ಲ. ಮುಂದೆ ಈ ಸಂಬಂಧ ಆಯ್ಕೆ ನೀಡಲಿದ್ದು, ಅದಕ್ಕೆ ಕಠಿಣ ನಿಯಮಗಳು ಇರಲಿವೆ.

ಐಟಿ ನಿಯಮ 2021ರ ಅನುಸಾರ, ನವೆಂಬರ್‌ ತಿಂಗಳಲ್ಲಿ 6ನೇ ಮಾಸಿಕ ವರದಿ ಪ್ರಕಟಿಸಲಾಗಿದೆ. ಷರತ್ತು ಹಾಗೂ ನಿಯಮ ಉಲ್ಲಂಘಿಸಿದ ಭಾರತೀಯರ ಖಾತೆಗಳನ್ನು ನಿಷೇಧ ಮಾಡಲಾಗಿದೆ. ಬಳಕೆದಾರರಿಂದ ಸ್ವೀಕರಿಸಿದ ದೂರುಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ. ಇದನ್ನೂ

ಅಕ್ಟೋಬರ್‌ನಲ್ಲಿ ಮೆಸೇಜಿಂಗ್‌ ವೇದಿಕೆಯಲ್ಲಿ ಸುಮಾರು 500 ಕುಂದು ಕೊರತೆ ದೂರುಗಳನ್ನು ಸ್ವೀಕರಿಸಲಾಗಿತ್ತು. ಆ ವೇಳೆ ಭಾರತೀಯರ 20 ಖಾತೆಗಳನ್ನು ನಿಷೇಧ ಮಾಡಲಾಗಿತ್ತು.

Leave a Comment

Your email address will not be published. Required fields are marked *