Ad Widget .

ಸುಳ್ಯ : ಕಾಣೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಸುಳ್ಯ : ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ಬಾವಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಜ. 2 ರಂದು ನಡೆದಿದೆ .

Ad Widget . Ad Widget .

ಮೃತ ದೇಹವು ಬಾಂಜಿಕೋಡಿ ನಿವಾಸಿ ದಿವಂಗತ ಮಾಧವ ರವರ ಪುತ್ರ ಅರುಣ್ ಕುಮಾರ್ ಬಾಂಜಿಕೋಡಿಯವರದ್ದೆಂದು ಗುರುತಿಸಲಾಗಿದೆ. ಇವರು ಡಿ .31 ರಿಂದ ಮನೆಯಿಂದ ಕಾಣೆಯಾಗಿದ್ದು ಸ್ಥಳೀಯರು ಮತ್ತು ಕುಟುಂಬಸ್ಥರು ಇವರನ್ನು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಆದರೆ ಇಂದು ಮುಂಜಾನೆ ರವಿಕುಮಾರ್ ರವರ ಮನೆಯ ಮುಂಭಾಗದಲ್ಲಿರುವ ಬಾವಿಯಲ್ಲಿ ಇವರ ಮೃತದೇಹ ಕುಟುಂಬಸ್ಥರಿಗೆ ಕಂಡು ಬಂದಿದೆ.

Ad Widget . Ad Widget .

ಅರುಣ್ ಕುಮಾರ್ ರವರು ಉಪ್ಪಿನಂಗಡಿಯಲ್ಲಿ ಫ್ಯಾಕ್ಟರಿಯೊಂದರಲ್ಲಿ ಮಾಸ್ಟರ್ ಪ್ಲಾನ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ .

ಮೃತ ಅರುಣ್ ಕುಮಾರ್ ತಾಯಿ ವಿಮಲಾ ಪತ್ನಿ ವನಜ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ .

Leave a Comment

Your email address will not be published. Required fields are marked *