Ad Widget .

ರಾಜ್ಯದಲ್ಲಿ ಒಮಿಕ್ರಾನ್, ಕೊರೊನಾ ಸೋಂಕಿನಲ್ಲಿ ದಿನೇದಿನೇ ಏರಿಕೆ| ಇಂದಿನ ಪ್ರಕರಣಗಳೆಷ್ಟು ಗೊತ್ತಾ?

Ad Widget . Ad Widget .

ಬೆಂಗಳೂರು : ದಿನ ಕಳೆದಂತೆ ಓಮಿಕ್ರಾನ್‌ ಜೊತೆಗೆ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಳವಾಗುತ್ತಿದೆ. ಹೊಸ ವರ್ಷದ ಮೊದಲ ದಿನವೇ ಬರೋಬ್ಬರಿ ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಈ ನಡುವಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜೊತೆಗೆ ಕೊರೊನಾ ಹೆಚ್ಚಳ ಪೋಷಕರಲ್ಲಿ ಆತಂಕ ಮೂಡಿಸಿದ್ದು, ಮತ್ತೆ ಶಾಲೆಗಳು ಬಂದ್‌ ಆಗಲಿದೆ. ಈಗಾಗಲೇ ಶಾಲೆ, ಕಾಲೇಜುಗಳನ್ನು ಬಂದ್‌ ಮಾಡುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಸಲಹೆಯನ್ನು ನೀಡಿದೆ.

Ad Widget . Ad Widget .

ಕರ್ನಾಟಕದಲ್ಲಿ ದಿನಂಪ್ರತಿ ಕೊರೊನಾ ಸೋಂಕಿನ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಹೊಸ ವರ್ಷದ ಮೊದಲ ದಿನವೇ ಬರೋಬ್ಬರಿ 1033 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ 810 ಮಂದಿಗೆ ಸೋಂಕು ದೃಢಪಟ್ಟಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 86, ಮೈಸೂರಿನಲ್ಲಿ 29, ಉಡುಪಿ ಯಲ್ಲಿ 28, ಮಂಡ್ಯದಲ್ಲಿ 23 ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 30,08,370 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ 9386 ಸಕ್ರೀಯ ಕೋವಿಡ್‌ ಪ್ರಕರಣಗಳಿವೆ. ಅಲ್ಲದೇ ಇದುವರೆಗೆ ಒಟ್ಟು 38,340 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

Leave a Comment

Your email address will not be published. Required fields are marked *