ಬಂಟ್ವಾಳ: ಇಲ್ಲಿನ ಚರ್ಚ್ ಬಳಿ ತ್ಯಾಜ್ಯಗಳ ರಾಶಿಯಿಂದ ಗಬ್ಬು ವಾಸನೆ ಬರುತ್ತಿದ್ದು ಸಾರ್ವಜನಿಕರು ಸಂಚರಿಸುವುದಕ್ಕೆ ತೊಂದರೆಯುಂಟಾಗಿದೆ.
ಗೋಳ್ತಮಜಲು ಗ್ರಾಮ ಪಂಚಾಯ್ತ ವ್ಯಾಪ್ತಿಯ ಅಮ್ಟೂರು ಚರ್ಚ್ ಬಳಿ ಸಾರ್ವಜನಿಕರು ಸಂಚಾರಿಸುವ ರಸ್ತೆ ಬದಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆದಿದ್ದು ಇಲ್ಲಿನ ಪ್ರದೇಶ ಗಬ್ಬು ವಾಸನೆಯಿಂದ ಬರುತ್ತಿದೆ. ಕಸದ ಬುಟ್ಟಿ ಸೇರಬೇಕಾದ ಗಲೀಜು ವಸ್ತುಗಳು ಸೇರಿದಂತೆ ಎಲ್ಲವನ್ನು ರಸ್ತೆ ಬದಿಯಲ್ಲಿ ಎಸೆಯಲ್ಪಟ್ಟಿದ್ದು ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಬಹಳ ಹಿಂಜರಿಯುವಂತೆ ಮಾಡಿದೆ.
ಇನ್ನೂ ದೇಶದೆಲ್ಲೆಡೆ ಸ್ವಚ್ಚಭಾರತ ಮಂತ್ರ ಪಠಿಸುತ್ತಿದ್ದರೆ ಗೋಳ್ತಮಜಲು ಗ್ರಾಮ ಪಂಚಾಯತ್ ನ ಅಮ್ಟೂರು ಚರ್ಚ್ ಬಳಿ ಮಾತ್ರ ತ್ಯಾಜ್ಯ ವಸ್ತುಗಳ ರಾಶಿ ಕಾಣುತ್ತಿದೆ.
ಇದು ಅದೇ ಊರಿನವರು ಎಸೆದದ್ದು ಆಗಿದ್ದರು ಇದಕ್ಕೆ ಕಾರಣ ಹಲವು ಹೇಳಬಹುದು. ಇಲ್ಲಿನ ಗ್ರಾಮ ಪಂಚಾಯತ್ ಇದಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿಸದೆ ಇರುವುದು, ಮತ್ತು ಸರಿಯಾದ ವ್ಯವಸ್ಥೆ ಇದ್ದರು ಈ ರೀತಿ ಎಸೆದವರ ವಿರುದ್ಧ ಕ್ರಮ ಕೈಗೊಳ್ಳದ್ದೆ ಇರುವವುದು. ಇನ್ನಾದರೂ ಗ್ರಾಮ ಪಂಚಾಯತ್ ನವರು ಗಮನಹರಿಸಿ ಇದಕ್ಕೆ ಸರಿಯಾದ ವ್ಯವಸ್ಥೆ ರೂಪಿಸಿ ಸ್ವಚ್ಛತೆ ಕಡೆ ಗಮನಹರಿಸಿ.
ವರದಿ: ಪ್ರಶಾಂತ್ ಕಲ್ಲಡ್ಕ