December 2021

2 ವರ್ಷದ ಪುಟ್ಟ ಕಂದಮ್ಮ ಇಂಡಿಯಾ ಬುಕ್ ಆಪ್ ರೆಕಾರ್ಡ್ ಗೆ ಎಂಟ್ರಿ| ಈತನ ಸ್ಮರಣ ಶಕ್ತಿ ನಿಜಕ್ಕೂ ಅಚ್ಚರಿ|

ಶಿವಮೊಗ್ಗ: 2 ವರ್ಷದ ಪುಟ್ಟ ಬಾಲಕ ತನ್ನ ಅದ್ಭುತ ಸ್ಮರಣ ಶಕ್ತಿಯಿಂದ ಇಂಡಿಯಾ ಬುಕ್ಸ್ ಆಪ್ ರೆಕಾರ್ಡ್ ನಲ್ಲಿ ದಾಖಲಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಗೀತಾ ಕೆ ಮತ್ತು ಜ್ಞಾನೇಶ್ವರ್ ಪಿ ಹೆಚ್ ದಂಪತಿಗಳ ಎರಡನೇ ಪುತ್ರನಾಗಿರುವ ಮಾ. ರಿಯಾಂಶ್ ಶ್ರುತ್ಯರ್ಥ ಪಿ ಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾಗಿರುವ ಪುಟಾಣಿ. ಈ ಪುಟ್ಟ ಬಾಲಕ 14 ಮಹಾನ್ ವ್ಯಕ್ತಿಗಳು, 33 ಪ್ರಾಣಿಗಳು, 2 ಪಕ್ಷಿಗಳು, 8 ಸಮುದ್ರ ಜೀವಿಗಳು, 5 ಕೀಟಗಳು,4 ಹೂವುಗಳು, 10 […]

2 ವರ್ಷದ ಪುಟ್ಟ ಕಂದಮ್ಮ ಇಂಡಿಯಾ ಬುಕ್ ಆಪ್ ರೆಕಾರ್ಡ್ ಗೆ ಎಂಟ್ರಿ| ಈತನ ಸ್ಮರಣ ಶಕ್ತಿ ನಿಜಕ್ಕೂ ಅಚ್ಚರಿ| Read More »

ವಿಪಕ್ಷಗಳ ಗದ್ದಲದ ನಡುವೆಯೂ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ

ಬೆಳಗಾವಿ: ತೀವ್ರ ಕುತೂಹಲ ಮತ್ತು ಭಾರಿ ಗದ್ದಲಕ್ಕೆ ಕಾರಣವಾಗಿದ್ದ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಂಗೀಕಾರ ದೊರೆತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಅಂಗೀಕಾರ ಸಿಕ್ಕಿದೆ. ಇಂದು ಸದನದಲ್ಲಿ ಸ್ಪೀಕರ್‌ ಕಾಗೇರಿ ಮಂತಾತರ ನಿಷೇಧ ಮಸೂದೆಯನ್ನು ದ್ವನಿ ಮತಕ್ಕೆ ಹಾಕಿದರು. ಈ ವೇಳೆ ವಿಧಾನಸಭಾ ಹೆಚ್ಚಿನ ಸದಸ್ಯರು ಮಸೂದೆ ಪರ ಮತ ಹಾಕಿದ್ದು, ಈಗ ಅಂಗೀಕಾರಗೊಂಡಿದೆ. ಎರಡು

ವಿಪಕ್ಷಗಳ ಗದ್ದಲದ ನಡುವೆಯೂ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ Read More »

ಅಕ್ರಮ ಸಂಬಂಧದಿಂದ ಹುಟ್ಟಿದ ಕಂದಮ್ಮನನ್ನು ಕೊಂದ ಹೆತ್ತಮ್ಮ|

ತ್ರಿಶೂರ್: ಅಕ್ರಮ ಸಂಬಂಧದಿಂದ ಗರ್ಭಧರಿಸಿ ನವಜಾತ ಶಿಶುವನ್ನು ಬಕೆಟ್‌ ನೀರಿನಲ್ಲಿ ಮುಳುಗಿಸಿ ಕೊಂದುಹಾಕಿದ ಹೀನ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ.ಈ ಮಗುವನ್ನು ಕೊಂದು ಗೋಣಿಚೀಲದಲ್ಲಿ ಕಟ್ಟಿ ಕಾಲುವೆಗೆ ಬೀಸಾಕಿದ್ದ ಮೇಘಾ (23), ಆಕೆಯ ಪ್ರಿಯಕರ ಮ್ಯಾನುಯೆಲ್ (25) ಮತ್ತು ಆತನ ಸ್ನೇಹಿತ ಅಮಲ್‌ನನ್ನು (24) ಪೊಲೀಸರು ಬಂಧಿಸಿದ್ದಾರೆ. ಗೋಣಿಚೀಲದಲ್ಲಿ ಸತ್ತಿದ್ದ ಮಗುವನ್ನು ಜನರು ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ.

ಅಕ್ರಮ ಸಂಬಂಧದಿಂದ ಹುಟ್ಟಿದ ಕಂದಮ್ಮನನ್ನು ಕೊಂದ ಹೆತ್ತಮ್ಮ| Read More »

ಸುಳ್ಯ: ಪಾಣತ್ತೂರಿನಲ್ಲಿ ಟಿಂಬರ್ ಲಾರಿ ಪಲ್ಟಿ, 4 ಮಂದಿ ದುರ್ಮರಣ

ಸುಳ್ಯ: ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯ ಪರಿಯಾರಂ ಎಂಬಲ್ಲಿ ನಡೆದ ಭೀಕರ ಲಾರಿ ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮರಗಳನ್ನು ತುಂಬಿ ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಟ್ಲಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ದುರ್ಘಟನೆಯಲ್ಲಿ ಲಾರಿಯಲ್ಲಿದ್ದ 4 ಮಂದಿ ಮೃತಪಟ್ಟಿದ್ದು ಮೃತಪಟ್ಟವರನ್ನು ಪಾಣತ್ತೂರು ಸಮೀಪದ ಕುಂಡುಪಳ್ಳಿಯವರು ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದವರ ಪೈಕಿ 5 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ ತುಂಬಿದ ಲಾರಿ ಕಲ್ಲಪಳ್ಳಿಯಿಂದ ಪಾಣತ್ತೂರು ಕಡೆಗೆ ತೆರಳುತ್ತಿತ್ತು.

ಸುಳ್ಯ: ಪಾಣತ್ತೂರಿನಲ್ಲಿ ಟಿಂಬರ್ ಲಾರಿ ಪಲ್ಟಿ, 4 ಮಂದಿ ದುರ್ಮರಣ Read More »

ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ| ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ಮಂಜೂರು

ಬೆಂಗಳೂರು : ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಉದ್ಯಮಿ ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯಾಗಿದ್ದ ರಾಜೇಶ್ವರಿ ಶೆಟ್ಟಿಗೆ ಇಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಉಡುಪಿ ಮೂಲದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ʼನಲ್ಲಿ ಮೂವರು ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಮತ್ತು ರಾಜೇಶ್ವರಿ ಗೆಳೆಯ ಹಾಗೂ ಅರ್ಚಕ ನಿರಂಜನ್ ಭಟ್ʼಗೆ ಉಡುಪಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು ಆದರೆ, ಅವರು ಜಾಮೀನು ಕೋರಿ

ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ| ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ಮಂಜೂರು Read More »

ಓಮಿಕ್ರಾನ್ ಭೀತಿಯ ನಡುವೆಯೂ ಗುಡ್ ನ್ಯೂಸ್| ಅಧ್ಯಯನ ವರದಿಯಲ್ಲಿದೆ ನಿಟ್ಟುಸಿರು ಬಿಡುವ ಸಂಗತಿ..!

ವಾಷಿಂಗ್ಟನ್: ವಿಶ್ವದಲ್ಲಿ ಓಮಿಕ್ರಾನ್ ಜೊತೆಜೊತೆಗೆ ಕೊರೋನಾ ಆರ್ಭಟ ಶುರುವಾಗಿದೆ. ರೂಪಾಂತರಿ ಓಮಿಕ್ರಾನ್ ವೈರಸ್ ಬಗ್ಗೆ ದಿನಕ್ಕೊಂದು ಸುದ್ದಿಗಳು ಹರಡುತ್ತಿರುವಂತ ಈ ಹೊತ್ತಿನಲ್ಲಿಯೂ, ಎರಡು ದೇಶಗಳ ವಿಜ್ಞಾನಿಗಳು ನಡೆಸಿದಂತ ಅಧ್ಯಯನದಲ್ಲಿ ಓಮಿಕ್ರಾನ್ ಬಗ್ಗೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತ ಸುದ್ದಿಯೊಂದು ಬಹಿರಂಗ ಗೊಂಡಿದೆ. ರೂಪಾಂತರಿ ಓಮಿಕ್ರಾನ್ ವೈರಸ್ ಬಗ್ಗೆ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದು, ಈ ಅಧ್ಯಯನದಲ್ಲಿ ಓಮಿಕ್ರಾನ್ ಅಷ್ಟೇನೂ ತೀವ್ರತೆಯನ್ನು ಹೊಂದಿಲ್ಲ. ಅದರಲ್ಲೂ ಡೆಲ್ಟಾ ಥಳಿಯಷ್ಟು ತೀವ್ರತೆಯನ್ನು ಹೊಂದಿಲ್ಲ ಎಂಬುದಾಗಿ ಸ್ಪೋಟ ಮಾಹಿತಿಯನ್ನು ಅಧ್ಯಯನ

ಓಮಿಕ್ರಾನ್ ಭೀತಿಯ ನಡುವೆಯೂ ಗುಡ್ ನ್ಯೂಸ್| ಅಧ್ಯಯನ ವರದಿಯಲ್ಲಿದೆ ನಿಟ್ಟುಸಿರು ಬಿಡುವ ಸಂಗತಿ..! Read More »

ಬೆಳ್ತಂಗಡಿ: ನಮಾಜ್ ಮಾಡುತ್ತಿದ್ದ ಯುವಕ ಹೃದಯಾಘಾತದಿಂದ ಸಾವು

ಬೆಳ್ತಂಗಡಿ : ಯುವಕನೊರ್ವ ಇದ್ದಕ್ಕಿದ್ದಂತೆ ತನ್ನ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳ್ತಂಗಡಿಯ ಜಾರಿಗೆ ಬೈಲ್ ನಲ್ಲಿ ನಡೆದಿದೆ. ಮೃತಪಟ್ಟ ಯುವಕ ಶಾಕಿರ್(24) ಎಂದು ತಿಳಿದು ಬಂದಿದೆ. ಎಂದಿನಂತೆ ಬೆಳಿಗ್ಗೆ ನಮಾಝ್ ಮಾಡಲು ಜಾರಿಗೆ ಬೈಲ್ ಮಸೀದಿಗೆ ತೆರಳಿದ್ದರು. ಮಸೀದಿಯಿಂದ ಬಂದ ಯುವಕ ತಾಯಿ ಬಳಿ ಸ್ವಲ್ಪ ಎದೆನೋವು ಇದೆ ಎಂದು ಹೇಳಿಕೊಂಡಿದ್ದರು. ತಾಯಿಯಲ್ಲಿ ನೋವಿನ ಬಗ್ಗೆ ತಿಳಿಸಿ ಒಂದಷ್ಟು ನಿಮಿಷಗಳ ಬಳಿಕ ದಿಢೀರ್ ಆಗಿ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ: ನಮಾಜ್ ಮಾಡುತ್ತಿದ್ದ ಯುವಕ ಹೃದಯಾಘಾತದಿಂದ ಸಾವು Read More »

ಮಂಗಳೂರು: ಕ್ರಿಸ್ಮಸ್ ಹಬ್ಬಕ್ಕೆ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌- 19 ರೂಪಾಂತರಿ ಒಮಿಕ್ರಾನ್‌ ವೈರಾಣು ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಿಸ್ಮಸ್‌ ಮತ್ತು ಹೊಸ ವರ್ಷವನ್ನು ಸರಳವಾಗಿ ಆಚರಿಸಲು ಮಾರ್ಗಸೂಚಿ ಹೊರಡಿಸಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಚರ್ಚ್ ಆವರಣದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಪ್ರಾರ್ಥನೆಯನ್ನು ಕೋವಿಡ್‌ ಸಮುಚಿತವರ್ತನೆ ಅನುಸರಿಸಿ ಆಚರಿಸಬೇಕು. ಕ್ರಿಸ್ಮಸ್‌ ಆಚರಣೆ ಅಥವಾ ಪ್ರಾರ್ಥನೆ ನಡೆಸಲು ಯಾವುದೇ ಸಾರ್ವಜನಿಕ ಸ್ಥಳ, ರಸ್ತೆ ಅಥವಾ ಉದ್ಯಾನವನ ಬಳಸುವಂತಿಲ್ಲ ಎಂದು ತಿಳಿಸಿದ್ದಾರೆ. ಕ್ಲಬ್‌, ಪಬ್‌, ರೆಸ್ಟೋರೆಂಟ್‌, ಹೋಟೆಲ್‌, ಉದ್ಯಾನವನ ಅಥವಾ

ಮಂಗಳೂರು: ಕ್ರಿಸ್ಮಸ್ ಹಬ್ಬಕ್ಕೆ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ Read More »

ಮಂಗಳೂರು: ಮೊಬೈಲ್ ಕದ್ದ ನೆಪದಲ್ಲಿ ಮೀನುಗಾರನಿಗೆ ಚಿತ್ರಹಿಂಸೆ| 6 ಮಂದಿಯನ್ನು ಬಂಧಿಸಿದ ‌ಪೊಲೀಸರು|

ಮಂಗಳೂರು: ನಗರದ ಬಂದರ್ ನಲ್ಲಿ ಮೀನುಗಾರನೊಬ್ಬನನ್ನು ಬೋಟ್ ನಲ್ಲಿ ತಲೆಕೆಳಗಾಗಿಸಿ ನೇತು ಹಾಕಿ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಆಯುಕ್ತ ಶಶಿಕುಮಾರ್ ಗುರುವಾರ ತಿಳಿಸಿದ್ದಾರೆ. ಬಂಧಿತ ಆರೋಪಿಗಳು, ಕೊಂಡೂರು ಪೋಲಯ್ಯ (23), ಅವುಲ ರಾಜ್ ಕುಮಾರ್ (26), ಕಾಟಂಗರಿ ಮನೋಹರ್ (21), ವುಟುಕೋರಿ ಜಾಲಯ್ಯ (30), ಕರ್ಪಿಂಗಾರಿ ರವಿ (27) ಮತ್ತು ಪ್ರಳಯ ಕಾವೇರಿ ಗೋವಿಂದಯ್ಯ (47) ಎನ್ನುವವರಾಗಿದ್ದು, ಎಲ್ಲರೂ ಆಂಧ್ರಪ್ರದೇಶ ಮೂಲದ ಮೀನುಗಾರರಾಗಿದ್ದಾರೆ. ಆಂಧ್ರ ಪ್ರದೇಶ ಮೂಲದ ಮೀನುಗಾರ

ಮಂಗಳೂರು: ಮೊಬೈಲ್ ಕದ್ದ ನೆಪದಲ್ಲಿ ಮೀನುಗಾರನಿಗೆ ಚಿತ್ರಹಿಂಸೆ| 6 ಮಂದಿಯನ್ನು ಬಂಧಿಸಿದ ‌ಪೊಲೀಸರು| Read More »

ಸುಳ್ಯ: ಸಿನಿಮೀಯ ಶೈಲಿಯಲ್ಲಿ ರಿಕ್ಷಾ ದರೋಡೆಗೆ ಯತ್ನ| ಆರೋಪಗಳನ್ನು ಬಂಧಿಸಿದ ಕೇರಳ ಪೊಲೀಸರು|

ಸುಳ್ಯ: ಬಾಡಿಗೆಗೆಂದು ಕೊಂಡೊಯ್ದು ರಿಕ್ಷಾವನ್ನು ನಂತರ ಚಾಲಕನಿಗೆ ಥಳಿಸಿ ರಿಕ್ಷಾ ಕೊಂಡೊಯ್ಯುತ್ತಿದ್ದಾಗ ಆರೋಪಿಗಳು ಕೇರಳ ಪೊಲೀಸರಿಗೆ ಸೆರೆ ಸಿಕ್ಕ ಘಟನೆ ಸುಳ್ಯದಲ್ಲಿ ನಡೆದಿದೆ. ಅಜ್ಜಾವರದಿಂದ ಆಟೋರಿಕ್ಷಾವನ್ನು ಮಂಡೆಕೋಲಿಗೆ ಬಾಡಿಗೆಗೆಂದು ಇಬ್ಬರು ಕರೆದೊಯ್ದಿದ್ದರು. ಆಟೋ ಅಡ್ಪಂಗಾಯದ ಬಳಿ ತಲುಪುತ್ತಿದ್ದಾಗ ಆಟೋದಲ್ಲಿದ್ದ ವ್ಯಕ್ತಿ ಏಕಾಏಕಿ ಆಟೋ ಚಾಲಕ ಹುಸೈನ್ ಮೇಲೆ ಹಲ್ಲೆ ಮಾಡಿದ್ದಾರೆ. ಆ ಬಳಿಕ ಆಟೋಚಾಲಕನ ಬಳಿಯಲ್ಲಿದ್ದ ಮೊಬೈಲ್ ಹಾಗೂ ಹಣವನ್ನು ಕಿತ್ತು ಕೇರಳದ ಕಡೆಗೆ ಆಟೋ ಸಮೇತ ಪರಾರಿಯಾಗಿದ್ದಾನೆ. ಘಟನೆ ತಿಳಿದ ಸ್ಥಳೀಯರು ಆದೂರು ಪೊಲೀಸ್ ಠಾಣೆಗೆ

ಸುಳ್ಯ: ಸಿನಿಮೀಯ ಶೈಲಿಯಲ್ಲಿ ರಿಕ್ಷಾ ದರೋಡೆಗೆ ಯತ್ನ| ಆರೋಪಗಳನ್ನು ಬಂಧಿಸಿದ ಕೇರಳ ಪೊಲೀಸರು| Read More »