December 2021

ಗರ್ಲ್ ಫ್ರೆಂಡ್ ನ ಮದುವೆಯಾದಾತನ ಗುಪ್ತಾಂಗ ಕತ್ತರಿಸಿದ ಪ್ರಿಯಕರ

ನವದೆಹಲಿ : ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾದ ಎಂಬ ಒಂದೇ ಕಾರಣಕ್ಕೆ ಯುವಕನನ್ನು ಥಳಿಸಿ, ಆತನ ಗುಪ್ತಾಂಗವನ್ನು ಕಟ್ ಮಾಡಲಾಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಯುವತಿಯನ್ನು ಮದುವೆಯಾಗಿ, ಓಡಿಹೋದ ಯುವಕನನ್ನು ಅಪಹರಿಸಿದ ಯುವತಿಯ ಕುಟುಂಬಸ್ಥರು ಥಳಿಸಿ, ಆತನ ಗುಪ್ತಾಂಗವನ್ನು ಕತ್ತರಿಸಿದ್ದಾರೆ. ಡಿಸೆಂಬರ್ 22ರಂದು ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊಲೆ ಯತ್ನ ಮತ್ತು ಅಪಹರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಪ್ರಶಾಂತ್ ಗೌತಮ್ ತಿಳಿಸಿದ್ದಾರೆ. ಹಲ್ಲೆಗೊಳಗಾದ 22 […]

ಗರ್ಲ್ ಫ್ರೆಂಡ್ ನ ಮದುವೆಯಾದಾತನ ಗುಪ್ತಾಂಗ ಕತ್ತರಿಸಿದ ಪ್ರಿಯಕರ Read More »

ಸಂಕ್ರಾಂತಿ ಬಳಿಕ ದೇಶದಲ್ಲಿ ದೊಡ್ಡ ಗಂಡಾಂತರ| ಕೋಡಿ ಮಠ ಶ್ರೀ ಭವಿಷ್ಯ|

ರಾಣಿಬೆನ್ನೂರು: ಈಗಾಗಲೇ ದೇಶದಲ್ಲಿ ದೊಡ್ಡ ಗಂಢಾಂತರ ಉಂಟಾಗಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದಂತ ಕೋಠಿಮಠದ ಡಾ.ಶಿವಾನಂದ ಶಿವಯೋಗೀಂದ್ರ ರಾಜೇಂದ್ರ ಸ್ವಾಮೀಜಿ ಈಗ ರೂಪಾಂತರಿ ಓಮಿಕ್ರಾನ್, ರಾಜಕೀಯ ತಲ್ಲಣದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಭಾರತೀಯ ಸೇನೆಯ ಮುಖ್ಯಸ್ಥರ ಅವಘಡದಂತೆ ಸಂಕ್ರಾತಿಯೊಳಗೆ ಮತ್ತೊಂದು ರಾಜಕೀಯ ಅವಘಡ ಸಂಭವಿಸುವ ಲಕ್ಷಣವಿದೆ. ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ ಅಂತ ಅವರು ಹೇಳಿದ್ದಾರೆ. ಈ ಬಗ್ಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಕೋಡಿಮಠದ ಡಾ.ಶಿವಾನಂದ ಶಿವಯೋಗೀಂದ್ರ ರಾಜೇಂದ್ರ ಸ್ವಾಮೀಜಿಯವರು ಈಗಾಗಲೇ ನಾನು ಹೇಳಿದಂತೆ ದೊಡ್ಡ

ಸಂಕ್ರಾಂತಿ ಬಳಿಕ ದೇಶದಲ್ಲಿ ದೊಡ್ಡ ಗಂಡಾಂತರ| ಕೋಡಿ ಮಠ ಶ್ರೀ ಭವಿಷ್ಯ| Read More »

ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್

ಸ್ಪೋರ್ಟ್ಸ್ ಡೆಸ್ಕ್: ಭಾರತದ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಶುಕ್ರವಾರ ಎಲ್ಲಾ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಇಂದು ನಾನು ಜೀವನದಲ್ಲಿ ಎಲ್ಲವನ್ನೂ ನೀಡಿದ ಆಟಕ್ಕೆ ವಿದಾಯ ಹೇಳುತ್ತಿದ್ದೇನೆ. ಈ 23 ವರ್ಷಗಳ ಸುದೀರ್ಘ ಪ್ರಯಾಣವನ್ನು ಸುಂದರ ಮತ್ತು ಸ್ಮರಣೀಯಗೊಳಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ.ನನ್ನ ಹೃತ್ಪೂರ್ವಕ ಧನ್ಯವಾದಗಳು, ಕೃತಜ್ಞತೆ ಎಂಬುದಾಗಿ ತಿಳಿಸಿದ್ದಾರೆ. 2007 (ಟಿ20) ಮತ್ತು 2011 ರಲ್ಲಿ ಭಾರತದ

ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ Read More »

ಶಿವಮೊಗ್ಗ:19ರ ಯುವಕನೊಂದಿಗೆ 32 ರ ಆಂಟಿ ಲವ್ವಿಡವ್ವಿ| ತಮಿಳುನಾಡಿನಲ್ಲಿ ನಡೆಯಿತು ಇವರಿಬ್ಬರ ಮದುವೆ!

ಶಿವಮೊಗ್ಗ: ಪ್ರೀತಿ ಅಂದ್ರೇನೇ ಹಾಗೆ. ಯಾವ ಸಮಯದಲ್ಲಿ, ಯಾರ ಮೇಲೆ ಲವ್ ಆಗುತ್ತೆ ಅಂತ ಹೇಳಲಾಗದು. ಒಮ್ಮೆ ಪ್ರೀತಿಗೆ ಬಿದ್ದರೆ ಪ್ರಪಂಚವೇ ತಲೆಕೆಳಗಾದ್ರೂ ಪ್ರೇಮಿಗಳು ಮಾತ್ರ ಬೇರೆ ಆಗೋದಿಲ್ಲ‌ ಅನ್ನೋದಕ್ಕೆ ಈ ಕಥೆನೇ ಸಾಕ್ಷಿ. ಅಂದಹಾಗೆ‌ ಈ ಘಟನೆ ನಡೆದದ್ದು ಶಿವಮೊಗ್ಗದಲ್ಲಿ. ತಾಲೂಕಿನ ಮಲ್ಲಿಗೆನಹಳ್ಳಿ ನಿವಾಸಿ ಮಧು(19) ಆಟೋ ಓಡಿಸಿಕೊಂಡು ತಂದೆ ತಾಯಿ ಜೊತೆಯಲ್ಲೇ ಇದ್ದ. ಡಿಸೆಂಬರ್ 10ರಂದು ಮನೆಯಿಂದ ಹೋದವನ್ನು ವಾಪಸ್ ಬರಲಿಲ್ಲ.. ಪೋಷಕರು ಎಲ್ಲೋ ಪಿಕ್ನಿಕ್ ಹೋಗಿರಬೇಕು, ಬರ್ತಾನೆ ಅಂತಾ ಸುಮ್ಮನಾಗಿದ್ದಾರೆ. ಮೂರ್ನಾಲ್ಕು ದಿನ

ಶಿವಮೊಗ್ಗ:19ರ ಯುವಕನೊಂದಿಗೆ 32 ರ ಆಂಟಿ ಲವ್ವಿಡವ್ವಿ| ತಮಿಳುನಾಡಿನಲ್ಲಿ ನಡೆಯಿತು ಇವರಿಬ್ಬರ ಮದುವೆ! Read More »

ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ

ಬೆಳಗಾವಿ: ಕರ್ನಾಟಕದ ವಿಧಾನಸಭಾ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದು, ಅದರ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ.

ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ Read More »

ಹಿರಿಯ ನಿರ್ಮಾಪಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸೇತು ಮಾಧವನ್ ಇನ್ನಿಲ್ಲ

ಚೆನ್ನೈ: ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಕೆ.ಎಸ್.ಸೇತುಮಾಧವನ್ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಮಲಯಾಳಂನ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕೆ.ಎಸ್.ಸೇತುಮಾಧವನ್(90 ವರ್ಷ) ಇಂದು ನಿಧನರಾಗಿದ್ದಾರೆ. 1931ರಲ್ಲಿ ಕೇರಳದ ಉತ್ತರ ಪಾಲಕ್ಕಾಡ್ ಜಿಲ್ಲೆಯಲ್ಲಿ ಜನಿಸಿದ ಅವರು ಕೆ. ರಾಮನಾಥ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು. 1960ರಲ್ಲಿ ಸಿಂಹಳೀಸ್ ಚಲನಚಿತ್ರ ‘ವೀರವಿಜಯ’ ಮೂಲಕ ಸ್ವತಂತ್ರ ಚಲನಚಿತ್ರ ನಿರ್ಮಾಪಕರಾಗಿ ತಮ್ಮನ್ನು ಪ್ರಾರಂಭಿಸಿದ ನಂತರ, ಅವರು ತಮ್ಮ ಮೊದಲ ಮಲಯಾಳಂ

ಹಿರಿಯ ನಿರ್ಮಾಪಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸೇತು ಮಾಧವನ್ ಇನ್ನಿಲ್ಲ Read More »

ಹಿರಿಯ ಸಿನಿಮಾ ನಿರ್ದೇಶಕ ಕೆ.ವಿ ರಾಜು ಅಸ್ತಂಗತ

ಬೆಂಗಳೂರು: ಸ್ಯಾಂಡಲ್‌ವುಡ್‌ ನ ಹಿರಿಯ ನಿರ್ದೇಶಕ ಕೆ.ವಿ.ರಾಜು ಬದುಕಿನ ಯಾತ್ರೆ‌ ಮುಗಿಸಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಹಿರಿಯ ನಿರ್ದೇಶಕ ಕೆ.ವಿ.ರಾಜು ಇಹಲೋಕ ತ್ಯಜಿಸಿದ್ದಾರೆ. ಹುಲಿಯಾ, ಬೆಳ್ಳಿ ಮೋಡ, ಇಂದ್ರಜಿತ್, ಬೆಳ್ಳಿ ಕಾಲುಂಗುರ, ಯುದ್ಧಕಾಂಡ ಸೇರಿ ಹಲವು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಚಿತ್ರಕ್ಕೂ ಅವರು ನಿರ್ದೇಶಿಸಿದ್ದರು. ಅನಾರೋಗ್ಯದ ಕಾರಣ ಕೆಲವು ದಿನಗಳಿಂದ ಮನೆಯಲ್ಲಿಯೇ ಅವರು ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೆ ಇಂದು ರಾಜಾಜಿನಗರದ ನಿವಾಸದಲ್ಲಿ ನಿಧನರಾಗಿದ್ದಾರೆ. ರಾಜಾಜಿನಗರದ ನಿವಾಸದಲ್ಲಿ ರಾಜು

ಹಿರಿಯ ಸಿನಿಮಾ ನಿರ್ದೇಶಕ ಕೆ.ವಿ ರಾಜು ಅಸ್ತಂಗತ Read More »

ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆದ ‘ಪುಟ್ಟಕ್ಕನ ಮಕ್ಕಳು’| ವಾರದಲ್ಲೇ ಭರ್ಜರಿ ಟಿಆರ್ ಪಿ|

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಅಪಾರ​ ಜನಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿ​ ಗಿಟ್ಟಿಸಿಕೊಂಡಿರುವ ಟಿಆರ್​ಪಿ ಕಂಡು ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಹಿರಿಯ ನಟಿ ಉಮಾಶ್ರಿ ನಟಿಸಿರುವ ಹೊಸ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’ ಪ್ರಸಾರ ಆರಂಭಿಸಿರುವ ಈ ಧಾರಾವಾಹಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಟಿಆರ್​ಪಿ ವಿಚಾರದಲ್ಲಿ ಈ ಸೀರಿಯಲ್​ ದಾಖಲೆ ಬರೆದಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿ ಬೇರೆ ಯಾವುದೇ ಧಾರಾವಾಹಿ ಪಡೆದುಕೊಳ್ಳದಷ್ಟು ಗ್ರ್ಯಾಂಡ್​ ಓಪನಿಂಗ್​ ಅನ್ನು ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್​ ಪಡೆದುಕೊಂಡಿದೆ.

ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆದ ‘ಪುಟ್ಟಕ್ಕನ ಮಕ್ಕಳು’| ವಾರದಲ್ಲೇ ಭರ್ಜರಿ ಟಿಆರ್ ಪಿ| Read More »

ಸಂಕ್ರಾಂತಿ ಬಳಿಕ ರಾಜ್ಯ ಸರ್ಕಾರದಲ್ಲಿ ಬದಲಾವಣೆ| ಹಲವು ಸಚಿವರಿಗೆ ಕೋಕ್, ಹೊಸಬರಿಗೆ ಮಣೆ|

ಬೆಂಗಳೂರು: ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸದೇ ವಿನಾಕಾರಣ ನಾಯಕತ್ವದ ಬಗ್ಗೆ ಹರಡುವ ಮೂಲಕ ರಾಜ್ಯ ಸರ್ಕಾರದ ಘನತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುತ್ತಿರುವ ಸಚಿವರಿಗೆ ಗೇಟ್ ಪಾಸ್ ನೀಡಲು ಬಿಜೆಪಿ ಮುಂದಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಕೆಲವು ಸಚಿವರು ತಮಗೆ ನೀಡಿದ ಇಲಾಖೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ, ಅನಗತ್ಯವಾಗಿ ವದಂತಿ ಹರಡುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಘನತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುತ್ತಿದ್ದಾರೆ. ನಾಯಕತ್ವ

ಸಂಕ್ರಾಂತಿ ಬಳಿಕ ರಾಜ್ಯ ಸರ್ಕಾರದಲ್ಲಿ ಬದಲಾವಣೆ| ಹಲವು ಸಚಿವರಿಗೆ ಕೋಕ್, ಹೊಸಬರಿಗೆ ಮಣೆ| Read More »

ಬೈಕ್ ಗಳ ಮುಖಾಮುಖಿ ಢಿಕ್ಕಿ| ಮೂವರು ಸ್ಪಾಟ್ ಔಟ್|

ದಾವಣಗೆರೆ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಕ್ಕನಹಳ್ಳಿಯಲ್ಲಿ ನಡೆದಿದೆ. ತಕ್ಕನಹಳ್ಳಿ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹೇಶಪ್ಪ, ಸಂಜು, ಪ್ರಶಾಂತ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಆನಂದ್ ಗೆ ಗಂಭೀರ ಗಾಯಗೊಂಡಿದ್ದು, ಶಿವಮೊಗ್ಗ ಅಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾಳಿ ಪೊಲೀಸ್

ಬೈಕ್ ಗಳ ಮುಖಾಮುಖಿ ಢಿಕ್ಕಿ| ಮೂವರು ಸ್ಪಾಟ್ ಔಟ್| Read More »