December 2021

ದೇಗುಲಗಳಿನ್ನು ಸರ್ಕಾರಿ ಕಾನೂನುಗಳಿಂದ ಮುಕ್ತ| ಹೊಸ ಧಾರ್ಮಿಕ ‌ಕಾನೂನು ಜಾರಿಗೆ ಚಿಂತನೆ|

ಹುಬ್ಬಳ್ಳಿ : ವಿವಾದಾಸ್ಪದ ಮತಾಂತರ ವಿರೋಧಿ ಮಸೂದೆಯ ನಂತರ ರಾಜ್ಯ ಸರ್ಕಾರ ಈಗ ಧಾರ್ಮಿಕ ಸ್ಪರ್ಶ ಹೊಂದಿರುವ ಮತ್ತೊಂದು ಕಾನೂನನ್ನ ತರಲು ಯೋಜಿಸುತ್ತಿದೆ. ಈ ಬಾರಿ ಹಿಂದೂ ದೇವಾಲಯಗಳನ್ನು ಸರ್ಕಾರಿ ಕಾನೂನುಗಳಿಂದ ಮುಕ್ತಗೊಳಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಮ್ಮ ಸರ್ಕಾರವು ಹಿಂದೂ ದೇವಾಲಯಗಳನ್ನು ಕಾನೂನುಗಳು ಮತ್ತು ನಿಯಮಗಳಿಂದ ಮುಕ್ತಗೊಳಿಸಲಿದ್ದು, ದೇವಾಲಯದ ಆಡಳಿತ ಮಂಡಳಿಗಳು ತಮ್ಮ ಆದಾಯವನ್ನ ಅಭಿವೃದ್ಧಿಗೆ ಬಳಸಿಕೊಳ್ಳಲು ಅನುಮತಿ ಪಡೆಯುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಿಎಂ ಬೊಮಾಯಿ […]

ದೇಗುಲಗಳಿನ್ನು ಸರ್ಕಾರಿ ಕಾನೂನುಗಳಿಂದ ಮುಕ್ತ| ಹೊಸ ಧಾರ್ಮಿಕ ‌ಕಾನೂನು ಜಾರಿಗೆ ಚಿಂತನೆ| Read More »

ದೈವಸನ್ನಿಧಿಗೆ ಕಾಂಡೋಮ್, ಅವಹೇಳನಕಾರಿ ಬರಹ ಹಾಕಿ ಅಪಚಾರ ಮಾಡುತ್ತಿದ್ದ ವ್ಯಕ್ತಿಯ ಬಂಧನ| ಈತನ ವಿಕೃತ ಕೃತ್ಯ ಬಯಲಿಗೆಳೆದ ಮಂಗಳೂರು ಪೊಲೀಸರು|

ಮಂಗಳೂರು: ನಗರದ ಹಲವು ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಕಾಂಡೋಮ್, ಫ್ಯಾನ್ಸಿ ಕರೆನ್ಸಿ ನೋಟು ಹಾಗೂ ಅದರ ಮೇಲೆ ಅವಹೇಳನಕಾರಿ ಬರಹಗಳು ಹಾಗೂ ಬಿಳಿ ಚೀಟಿಯಲ್ಲಿ ಅವಹೇಳನಕಾರಿ ಬರಹಗಳನ್ನು ಹಾಕಿ ವಿಕೃತಿ ಮೆರೆಯುತ್ತಿದ್ದ ವ್ಯಕ್ತಿಯನ್ನು ಮಂಗಳೂರು‌ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ ಹಲವು ಪೋಲಿಸ್ ಠಾಣೆಗಳಲ್ಲಿ ಈ ಬಗ್ಗೆ ಪ್ರಕರಣಗಳು ದಾಖಲಾಗಿತ್ತು. ಇದೀಗ ಈ ಎಲ್ಲಾ ಕೃತ್ಯಗಳು ಒಬ್ಬನೇ ಮಾಡಿರುವುದು ಪೋಲಿಸರ ತನಿಖೆಯಲ್ಲಿ ಬಯಲಾಗಿದ್ದು, ಆರೋಪಿ ದೇವದಾಸ್ ದೇಸಾಯಿ (62 ವರ್ಷ) ಎಂಬಾತ ಬಂಧನಕ್ಕೆ ಒಳಗಾಗಿದ್ದಾನೆ.

ದೈವಸನ್ನಿಧಿಗೆ ಕಾಂಡೋಮ್, ಅವಹೇಳನಕಾರಿ ಬರಹ ಹಾಕಿ ಅಪಚಾರ ಮಾಡುತ್ತಿದ್ದ ವ್ಯಕ್ತಿಯ ಬಂಧನ| ಈತನ ವಿಕೃತ ಕೃತ್ಯ ಬಯಲಿಗೆಳೆದ ಮಂಗಳೂರು ಪೊಲೀಸರು| Read More »

ಕರ್ನಾಟಕ ಬಂದ್‌ನ ದಿನಾಂಕವನ್ನು ಮುಂದೂಡಲು ಕನ್ನಡ ಪರ ಸಂಘಟನೆಗಳ ಅಧ್ಯಕ್ಷ ವಾಟಳ್ ನಾಗರಾಜ್‌ಗೆ ಮನವಿ

ಬೆಂಗಳೂರು: ಕನ್ನಡ ಧ್ವಜಕ್ಕೆ, ನಾಡು-ನುಡಿಯನ್ನು ಅವಮಾನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಡಿ.31 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ಆದರೆ ಬಂದ್‌ನ ದಿನಾಂಕವನ್ನು ಮುಂದೂಡಲು ಕನ್ನಡ ಪರ ಸಂಘಟನೆಗಳ ಅಧ್ಯಕ್ಷ ವಾಟಳ್ ನಾಗರಾಜ್‌ಗೆ ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮನವಿ ಪತ್ರ ಸಲ್ಲಿಸಿದ್ದಾರೆ. ಪತ್ರದಲ್ಲಿ ಏನಿದೆ?: ಕನ್ನಡದ, ಕನ್ನಡಿಗರ, ಕನ್ನಡಪರ ಹೋರಾಟಗಾರರ ಪ್ರಶ್ನಾತೀತ ನಾಯಕರೇ, ತಮ್ಮಲ್ಲಿ ವಿನಮ್ರತೆಯಿಂದ ನಿವೇದಿಸಿಕೊಳ್ಳುವುದೇನೆಂದರೆ ಡಿ.22 ರಂದು ನಾವೆಲ್ಲರೂ

ಕರ್ನಾಟಕ ಬಂದ್‌ನ ದಿನಾಂಕವನ್ನು ಮುಂದೂಡಲು ಕನ್ನಡ ಪರ ಸಂಘಟನೆಗಳ ಅಧ್ಯಕ್ಷ ವಾಟಳ್ ನಾಗರಾಜ್‌ಗೆ ಮನವಿ Read More »

ಸೋಮವಾರಪೇಟೆಯಲ್ಲಿ ರೈತರ ಪ್ರತಿಭಟನೆ

ಸೋಮವಾರಪೇಟೆ:- ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪಟ್ಟಣದಲ್ಲಿ ಜಿಲ್ಲಾ ರೈತಸಂಘ ಪ್ರತಿಭಟನೆ ನಡೆಸಿದರು.ಕಳೆದ 17 ದಿನಗಳಿಂದ ಇಲ್ಲಿನ ಜೆ.ಸಿ.ವೇದಿಕೆಯಲ್ಲಿ ನಿರಂತರ ಧರಣಿ ನಡೆಸುತ್ತಿದ್ಫು ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಆದರೆ ರೈತರ ಬೇಡಿಕೆಗಳಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಗಮನಸೆಳೆಯುವಲ್ಲಿ ವಿಫಲರಾಗಿದ್ದಾರೆ,ರಾಜ್ಯ ಸರ್ಕಾರ ಕೊಡಗುರೈತರ ಬೇಡಿಕೆಗೆ ಸ್ಪಂದಿಸಿಲವೆಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಮನುಸೋಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. 17 ದಿನಗಳ ಧರಣಿ ಅಂತಿಮಗೊಳಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಪಟ್ಟಣದ ಬಸವೇಶ್ವರ ಪ್ರತಿಮೆ ಬಳಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ

ಸೋಮವಾರಪೇಟೆಯಲ್ಲಿ ರೈತರ ಪ್ರತಿಭಟನೆ Read More »

ಮೆಹಂದಿ ಕಾರ್ಯಕ್ರಮದಲ್ಲಿ ಲಾಠಿಚಾರ್ಜ್| ಪಿಎಸ್ಐ ಅಮಾನತು

ಕುಂದಾಪುರ: ಇಲ್ಲಿನ ಕೋಟತಟ್ಟು ಕೊರಗ ಕಾಲೋನಿಯ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸ್ ಲಾಟಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆ ಪಿಎಸ್‌ಐ ಸಂತೋಷ್ ಬಿ.ಪಿ‌ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಈ‌ ಬಗ್ಗೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರು‌ ಮಾಹಿತಿ ನೀಡಿದ್ದು, ಕೋಟದಲ್ಲಿ ನಡೆದ ಕೊರಗ ಸಮುದಾಯದವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಆಧಾರದಲ್ಲಿ ಕೋಟ ಪಿಎಸ್‌ಐ ಅವರನ್ನು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಯವರು ಅಮಾನತು ಮಾಡಿದ್ದಾರೆ

ಮೆಹಂದಿ ಕಾರ್ಯಕ್ರಮದಲ್ಲಿ ಲಾಠಿಚಾರ್ಜ್| ಪಿಎಸ್ಐ ಅಮಾನತು Read More »

ಅಧ್ಯಯನಶೀಲತೆಯಿಂದ ಪರಿಪೂರ್ಣ ವರದಿಗಾರಿಕೆ ಸಾಧ್ಯ: ಮನೋಹರ ಪ್ರಸಾದ್

ಮಂಗಳೂರು:: ಪತ್ರಕರ್ತರು ಬಳಸುವ ಭಾಷೆ ಶುದ್ಧ, ಸರಳವಾಗಿದ್ದಾಗ ವರದಿಗಳು ಜನ ಸಮುದಾಯವನ್ನು ಸುಲಭವಾಗಿ ತಲುಪಲು ಸಾಧ್ಯ. ಇದಕ್ಕೆ ತಿಳಿದುಕೊಳ್ಳುವ ಆಸಕ್ತಿ ಜತೆ ಅಧ್ಯಯನ ಶೀಲತೆ ಅತೀ ಅಗತ್ಯ ಎಂದು ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅಭಿಪ್ರಾಯಿಸಿದ್ದಾರೆ.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದಜಿಲ್ಲಾ ಪತ್ರಕರ್ತರ ಸಮ್ಮೇಳನ‘ಸಾಧನೆ ಸಂಭ್ರಮ-2021’ ದ ಸರ್ವಾಧ್ಯಕ್ಷರಾಗಿ ಮಾತನಾಡಿದರು.ಭಾಷಾ ಶುದ್ದಿ, ಸರಳ ಭಾಷೆ ಬಗ್ಗೆ ಯುವ ಪತ್ರಕರ್ತರು ಗಮನ ಹರಿಸಬೇಕು ಎಂದು ಹೇಳಿದ ಅವರು ಸಂಘದ ನೇತೃತ್ವದಲ್ಲಿ ಭಾ಼ಷಾ

ಅಧ್ಯಯನಶೀಲತೆಯಿಂದ ಪರಿಪೂರ್ಣ ವರದಿಗಾರಿಕೆ ಸಾಧ್ಯ: ಮನೋಹರ ಪ್ರಸಾದ್ Read More »

ಲೋನ್ ಪಡೆದು ಬ್ಯಾಂಕ್ ಗೆ ವಂಚನೆ| ಬೆಟ್ಟ ಉದಯಕುಮಾರ್ ಸಹಿತ ಹಲವು ಮಂದಿ ಅರೆಸ್ಟ್

ಮಂಗಳೂರು: ಭಾರತ್ ಬ್ಯಾಂಕ್ ಮೂಡಬಿದಿರೆ ಶಾಖೆಯಿಂದ ಪೋರ್ಜರಿ ದಾಖಲೆಯ ಮೂಲಕ ಸಾಲ ಪಡೆದು ಬ್ಯಾಂಕ್‌ಗೆ ವಂಚಿಸಿದ್ದಾರೆಂಬ ದೂರಿನ ಹಿನ್ನಲೆಯಲ್ಲಿ ಮಂಗಳೂರಿನ ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೆಟ್ಟ ಉದಯಕುಮಾರ್, ಮಹಮ್ಮದ್, ಅಶ್ರಫ್, ಬಾಳಿಲದ ಮಜೀದ್ ಮತ್ತಿತರರನ್ನು ಹಾಗೂ ಪೂರಕ ದಾಖಲೆ ಒದಗಿಸಿದ ಇಂಜಿನಿಯರ್‌ರನ್ನು ಬಂಧಿಸಿರುವ ಘಟನೆ ವರದಿಯಾಗಿದೆ. ಮಜೀದ್, ಮಹಮ್ಮದ್, ಅಶ್ರಫ್ ಮತ್ತಿತರರ ಹೆಸರಲ್ಲಿ ಹಲವು ಲಕ್ಷ ರೂ.ಗಳ ಸಾಲ ಮಾಡಿ ಅದನ್ನು ಬೆಟ್ಟ ಉದಯಕುಮಾರ್‌ರವರು ಪಡೆದುಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಲೋನ್ ಪಡೆದು ಬ್ಯಾಂಕ್ ಗೆ ವಂಚನೆ| ಬೆಟ್ಟ ಉದಯಕುಮಾರ್ ಸಹಿತ ಹಲವು ಮಂದಿ ಅರೆಸ್ಟ್ Read More »

ಕೇಂದ್ರ ಸರ್ಕಾರದಿಂದ ಸರ್ಕಾರಿ ಇ ಕಾಮರ್ಸ್ ಶೀಘ್ರ ಲೋಕಾರ್ಪಣೆ| ಅಮೆಜಾನ್, ಪ್ಲಿಪ್ ಕಾರ್ಟ್ ಗೆ ಪೈಪೋಟಿ|

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಓಪನ್ ನೆಟ್​ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್​ಡಿಸಿ) ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. ಇದು ಯುಪಿಐಗೆ ಸರಿಸಮವಾದ ವಾಣಿಜ್ಯ ವಹಿವಾಟಿನ ವೇದಿಕೆಯಾಗಿ ರೂಪುಗೊಳ್ಳಲಿದೆ. ಈ ವೇದಿಕೆ ಅಮೆಜಾನ್, ಫ್ಲಿಪ್​ಕಾರ್ಟ್​ಗೆ ಪೈಪೋಟಿ ನೀಡಲಿದೆ. ಸದ್ಯ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿದ್ದು, 12 ಕಂಪನಿಗಳು ಇದರಲ್ಲಿ ಖಚಿತ ಪಾಲುದಾರರಾಗಿ ಸೇರಿಕೊಂಡಿವೆ. ಇವುಗಳು ಒಟ್ಟಾಗಿ 185 ಕೋಟಿ ರೂಪಾಯಿ ಹೂಡಿಕೆ ಮಾಡಲಿವೆ. ಈ ಪ್ಲಾಟ್​ಫಾರಂ ಅನ್ನು ಕಂಪನಿ ಕಾಯ್ದೆಯ ಪ್ರಕಾರ ಲಾಭದ ಉದ್ದೇಶವಿಲ್ಲದ ಕಂಪನಿ ಎಂದು ನೋಂದಣಿ ಮಾಡಿಸಲಾಗುವುದು

ಕೇಂದ್ರ ಸರ್ಕಾರದಿಂದ ಸರ್ಕಾರಿ ಇ ಕಾಮರ್ಸ್ ಶೀಘ್ರ ಲೋಕಾರ್ಪಣೆ| ಅಮೆಜಾನ್, ಪ್ಲಿಪ್ ಕಾರ್ಟ್ ಗೆ ಪೈಪೋಟಿ| Read More »

ಕಡಬ: ಚೂರಿ ಇರಿತಕ್ಕೆ ವ್ಯಕ್ತಿ ಗಂಭೀರ, ಆರೋಪಿಯ ಬಂಧನ

ಕಡಬ: ಇಲ್ಲಿನ ಸಮೀಪದ ಮರ್ದಾಳದಲ್ಲಿ ಚೂರಿ ಇರಿತ ಗೊಂಡು ರಬ್ಬರ್ ಟ್ಯಾಪರ್ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಡಿ.28 ರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ಕೇರಳ ಮೂಲದ ಪ್ರಸ್ತುತ ಮರ್ದಾಳದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿರುವ ಪ್ರಸಾದ್(57ವ) ಎಂಬವರು ಚೂರಿ ಇರಿತಕೊಳಗಾದ ವ್ಯಕ್ತಿ. ಪ್ರಸಾದ್ ಅವರಿಗೆ ಸ್ಥಳೀಯ ಇನ್ನೋರ್ವ ರಬ್ಬರ್ ಟ್ಯಾಪರ್ ಶಿವಪ್ರಸಾದ್ ಎಂಬಾತ ಚೂರಿಯಿಂದ ತಿವಿದ್ದಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಡಬ: ಚೂರಿ ಇರಿತಕ್ಕೆ ವ್ಯಕ್ತಿ ಗಂಭೀರ, ಆರೋಪಿಯ ಬಂಧನ Read More »

ಕುಡಿತದ ಮತ್ತಲ್ಲಿ ಕಿರಿಕ್ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್| ನೈಟ್ ಕರ್ಪ್ಯೂ ಉಲ್ಲಂಘನೆ ಆರೋಪ|

ಬೆಂಗಳೂರು : ರಾಜ್ಯದಲ್ಲಿ ಮೊದಲ ದಿನದ ನೈಟ್ ಕರ್ಪ್ಯೂ ಮುಕ್ತಾಯವಾಗಿದ್ದು, ಬಿಗ್‍ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯ ಸುರೇಶ್ ಬ್ರಿಗೇಡ್ ರೋಡ್‍ನಲ್ಲಿ ರಂಪಾಟ ಮಾಡಿದ ಘಟನೆ ರಾತ್ರಿ ನಡೆದಿದೆ. ಬ್ರಿಗೇಡ್ ರೋಡ್‍ನಲ್ಲಿ ಸ್ನೇಹಿತರೊಂದಿಗಿದ್ದ ದಿವ್ಯ ಸುರೇಶ್ ಕುಡಿದ ಅಮಲಿನಲ್ಲಿ ಕಿರಿಕ್ ಮಾಡಿಕೊಂಡಿದ್ದು, ಕರ್ಪ್ಯೂ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ ರಾತ್ರಿ ಬ್ರಿಗ್ರೇಡ್ ರೋಡ್ ನಲ್ಲಿ ಸ್ನೇಹಿತರೊಂದಿಗೆ ಬಂದಿದ್ದ ದಿವ್ಯ ಸುರೇಶ್ ಗೆ ಪೊಲೀಸರು ನೈಟ್ ಕರ್ಪ್ಯೂ ಇದೆ ಮನೆ ಹೋಗಿ ಎಂದಿದ್ದಕ್ಕೆ ಪೊಲೀಸರೊಂದಿಗೆ

ಕುಡಿತದ ಮತ್ತಲ್ಲಿ ಕಿರಿಕ್ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್| ನೈಟ್ ಕರ್ಪ್ಯೂ ಉಲ್ಲಂಘನೆ ಆರೋಪ| Read More »