December 2021

ಪ್ರಪಂಚ ಅರಿಯದ ಹಸುಗೂಸನ್ನು ಪೊದೆಗೆ ಬಿಸಾಡಿದ ಹೆತ್ತವರು

ಕುಂದಾಪುರ: ತಾಲೂಕಿನ ಮುಚ್ಚಟ್ಟು ಸೇತುವೆ ಬಳಿ ಪೊದೆಯ ನಡುವೆ ವಾರದ ಹಸುಳೆಯನ್ನು ಬಿಟ್ಟು ಎಸೆದು ಪರಾರಿಯಾಗಿರುವ ಘಟನೆ ಪತ್ತೆಯಾಗಿದೆ. ಮುಂಜಾನೆ ಡೇರಿಗೆ ಹಾಲು ಹಾಕಲು ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ಈ ದೃಶ್ಯ ಕಂಡುಬಂದಿದೆ. ಮುಂಜಾನೆ 4.30ರ ಸುಮಾರಿಗೆ ರಸ್ತೆ ಪಕ್ಕದ ಪೊದೆಯಲ್ಲಿ ಶಿಶುವಿನ ಅಳಲು ಮಹಿಳೆ ಗೀತಾ ಅವರಿಗೆ ಕೇಳಿದೆ. ಹೆಣ್ಣು ಶಿಶುವನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ಪೋಷಕರು ಉದ್ದೇಶಪೂರ್ವಕವಾಗಿ ಮಗುವನ್ನು ಅಪಾಯಕಾರಿ ಪರಿಸರದಲ್ಲಿ ಎಸೆದಿದ್ದಾರೆ ಎಂದು ಅಮಾಸೆಬೈಲ್ ಪೊಲೀಸ್ ಠಾಣೆಯ ಸಬ್ […]

ಪ್ರಪಂಚ ಅರಿಯದ ಹಸುಗೂಸನ್ನು ಪೊದೆಗೆ ಬಿಸಾಡಿದ ಹೆತ್ತವರು Read More »

‘ಹೀಟ್’ನಲ್ಲಿದ್ದ ಶಿಕ್ಷಕನಿಂದ ‘ಕಿಸ್’ ಕೀಟಲೆ| ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಹಾಕಿದ ಪೋಲಿ ಮೇಷ್ಟ್ರು!

ಹಾವೇರಿ: ಆನ್​ಲೈನ್​ ಕ್ಲಾಸ್ ನೆಪದಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ವಾಟ್ಸ್ ಆಪ್ ನಲ್ಲಿ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ರಾಣೆಬೆನ್ನೂರು ತಾಲೂಕು ದೇವರಗುಡ್ಡ ಸರ್ಕಾರಿ ಶಾಲೆಯ ಶಿಕ್ಷಕ ಮಲ್ಲಪ್ಪ ತಳವಾರ ಎಂಬಾತ ಪ್ರಕರಣದ ಆರೋಪಿಯಾಗಿದ್ದಾನೆ. ಈತ ಆನ್ ಲೈನ್ ಕ್ಲಾಸ್ ನೆಪದಲ್ಲಿ ವಿದ್ಯಾರ್ಥಿನಿಯ ಮೊಬೈಲ್ ನಂಬರ್ ಪಡೆದು ವಾಟ್ಸ್ ಆಪ್ ಮೂಲಕ ಚಾಟ್ ಮಾಡುತ್ತಿದ್ದ. ಕಿಸ್ ಕೊಡು ಅಂತ ಮೆಸೇಜ್ ಮಾಡಿ ಕಿರುಕುಳ

‘ಹೀಟ್’ನಲ್ಲಿದ್ದ ಶಿಕ್ಷಕನಿಂದ ‘ಕಿಸ್’ ಕೀಟಲೆ| ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಹಾಕಿದ ಪೋಲಿ ಮೇಷ್ಟ್ರು! Read More »

2022 ರ ಸರ್ಕಾರಿ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದ ಕರ್ನಾಟಕ|

2022ನೇ ಸಾಲಿಗೆ ಸರ್ಕಾರಿ ಸಿಬ್ಬಂದಿಗೆ ಕರ್ನಾಟಕ ಸರ್ಕಾರದಿಂದ ಅಧಿಕೃತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ. ಕರ್ನಾಟಕ ಸರ್ಕಾರವು ನವೆಂಬರ್ 30ನೇ ತಾರೀಕಿನಂದು 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ಸರ್ಕಾರಿ ಸಿಬ್ಬಂದಿಗೆ ರಜಾ ಇರುತ್ತದೆ. ಅದನ್ನು ಹೊರತುಪಡಿಸಿದಂತೆ ಇರುವ ರಜಾ ದಿನಗಳು ಈ ಕೆಳಗಿನಂತಿವೆ: 15-1-2022: ಶನಿವಾರ- ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ ಹಬ್ಬ26-1-2022: ಬುಧವಾರ-

2022 ರ ಸರ್ಕಾರಿ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದ ಕರ್ನಾಟಕ| Read More »

ಹಣ ಕೊಡದ್ದಕ್ಕೆ ವೃದ್ಧೆ ತಾಯಿಗೆ ಹಲ್ಲೆ| ದೋಸೆ ಕಾವಲಿಯಲ್ಲಿ ಹೊಡೆದು ಕೊಲ್ಲುತ್ತೇನೆಂದ ಪಾಪಿ‌ಮಗ| ಆರೋಪಿಯ ಬಂಧನ

ಮಂಗಳೂರು: ದ್ವಿಚಕ್ರ ವಾಹನ ತೆಗೆಯಲು ಹಣ ಕೊಡಲು ನಿರಾಕರಿಸಿದ ತನ್ನ ತಾಯಿಗೆ ಹಲ್ಲೆ ನಡೆಸಿದ ಆರೋಪಿಯನ್ನು ಕದ್ರಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕದ್ರಿ ಹಿಲ್‌ನ ಪದವು ಸ್ಕೂಲ್ ಸಮೀಪದ ನಿವಾಸಿ ರೋಶನ್ ರೋಚ್ ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಸುಮಾರು 8 ಗಂಟೆಗೆ ತನ್ನ 66ರ ಹರೆಯದ ತಾಯಿ ಐರಿನ್ ಪ್ಯಾಟ್ರಿಕ್ ರೋಚ್ ಎಂಬವರ ಬಳಿ ಆರೋಪಿಯು ಸ್ಕೂಟರ್ ತೆಗೆಯಲು 75 ಸಾವಿರ ರೂ. ಕೊಡಬೇಕು ಎಂದು ಒತ್ತಾಯಿಸಿದ. ಆದರೆ ಐರಿನ್ ಅವರು ಹಣ

ಹಣ ಕೊಡದ್ದಕ್ಕೆ ವೃದ್ಧೆ ತಾಯಿಗೆ ಹಲ್ಲೆ| ದೋಸೆ ಕಾವಲಿಯಲ್ಲಿ ಹೊಡೆದು ಕೊಲ್ಲುತ್ತೇನೆಂದ ಪಾಪಿ‌ಮಗ| ಆರೋಪಿಯ ಬಂಧನ Read More »

‘ಭಯಬೇಡ, ಎಚ್ಚರವಿರಲಿ’ – ಓಮಿಕ್ರಾನ್ ಡೆಲ್ಟಾದಷ್ಟು ಅಪಾಯಕಾರಿ ಅಲ್ಲ| ಸ್ಪಷ್ಟನೆ ನೀಡಿದ ವೈದ್ಯರು|

ನವದೆಹಲಿ : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ರೂಪಾಂತರಿ ಒಮಿಕ್ರಾನ್ ವೈರಸ್ ಡೆಲ್ಟಾ ರೂಪಾಂತರಕ್ಕಿಂತಲೂ ಹೆಚ್ಚು ಅಪಾಯಕಾರಿ ಅಲ್ಲ ಎಂದು ಉತ್ತರ ಪ್ರದೇಶ ಕೋವಿಡ್ ಸಲಹಾ ಸಮಿತಿಯ ಅಧ್ಯಕ್ಷ ಡಾ.ದಿಮನ್ ಹೇಳಿದ್ದಾರೆ. ವಿಶ್ವದ ಅನೇಕ ದೇಶಗಳು ಈಗಾಗಲೇ ಓಮಿಕ್ರಾನ್ ಭಯದಿಂದ ನಿರ್ಬಂಧಗಳನ್ನು ಹೇರಲು ತಯಾರಿ ನಡೆಸುತ್ತಿವೆ. ಈ ಸಮಯದಲ್ಲಿ, ಒಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾದ ದಕ್ಷಿಣ ಆಫ್ರಿಕಾದ ವರದಿಗಳನ್ನು ತಾನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇನೆ ಎಂದು ದಿಮಾನ್ ಹೇಳಿದ್ದು, ವರದಿಗಳ ಪ್ರಕಾರ, ಒಮಿಕ್ರಾನ್ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿಯಲ್ಲ

‘ಭಯಬೇಡ, ಎಚ್ಚರವಿರಲಿ’ – ಓಮಿಕ್ರಾನ್ ಡೆಲ್ಟಾದಷ್ಟು ಅಪಾಯಕಾರಿ ಅಲ್ಲ| ಸ್ಪಷ್ಟನೆ ನೀಡಿದ ವೈದ್ಯರು| Read More »

‘ಶಾಂತಿ’ ಕದಡಿದ ಖಲೀಲ್ ಕಟ್ಟೆಕಾರ್ ನ ಕೈಬಿಟ್ಟು ಮರು ಮದುವೆಯಾದ ಆಸಿಯಾ..!| ಕೇರಳದ ಮುಸ್ಲಿಂ ಉದ್ಯಮಿಯ ಜೊತೆ 2ನೇ ವಿವಾಹ..?

ಮಂಗಳೂರು: ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಹಾಗೂ ಆಸಿಯಾ ಪ್ರಕರಣವು ತಲಾಕ್ ಮೂಲಕ ತಾರ್ಕಿಕ ಅಂತ್ಯದ ಬೆನ್ನಲ್ಲೇ ಆಸಿಯಾ ಕೇರಳದಲ್ಲಿ ಮುಸ್ಲಿಂ ಉದ್ಯಮಿಯೊಬ್ಬರನ್ನು ವರಿಸಿದ್ದಾಳೆ ಎನ್ನಲಾಗಿದೆ ಸುಳ್ಯದ ಉದ್ಯಮಿ ಕಲೀಲ್ ಕಟ್ಟೆಕಾರ್ ಎಂಬಾತ ಕೇರಳ ಮೂಲದ ಶಾಂತಿ ಜೂಬಿ ಅಲಿಯಾಸ್ ಆಸಿಯಾಳನ್ನು ಲವ್ ಜಿಹಾದ್ ಮಾಡಿ ಮದುವೆಯಾಗಿರುವ ಪ್ರಕರಣ ದಿನಕ್ಕೊಂದು ಹೈಡ್ರಾಮಾವಾಗಿ ಸುದ್ದಿಯಾಗಿತ್ತು. ಈ ಪ್ರಕರಣ ಕರವಾಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆಸಿಯಾ ಖಲೀಲ್ ನನ್ನು ಬಿಟ್ಟರೂ ಮತ್ತೆ ಹಿಂದೂ ಧರ್ಮಕ್ಕೆ ಹೋಗುವುದಿಲ್ಲ

‘ಶಾಂತಿ’ ಕದಡಿದ ಖಲೀಲ್ ಕಟ್ಟೆಕಾರ್ ನ ಕೈಬಿಟ್ಟು ಮರು ಮದುವೆಯಾದ ಆಸಿಯಾ..!| ಕೇರಳದ ಮುಸ್ಲಿಂ ಉದ್ಯಮಿಯ ಜೊತೆ 2ನೇ ವಿವಾಹ..? Read More »

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆ ಸ್ಕೆಚ್..! ಇಲ್ಲಿದೆ ವಿಡಿಯೋ…

ಬೆಂಗಳೂರು: ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಹತ್ಯೆಗೆ ಸ್ಕೆಚ್ ಹಾಕಿರೋ ವೀಡಿಯೋ ಈಗ ಬಹಿರಂಗವಾಗಿದೆ. ಕೋಟಿ ಕೋಟಿ ಡೀಲ್ ಗೆ ಅವರ ಹತ್ಯೆಗೆ ಸಂಚು ರೂಪಿಸಿದ್ದಂತ ವೀಡಿಯೋ ಈಗ ವೈರಲ್ ಆಗಿದೆ. ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಅವರ ನಿವಾಸದಲ್ಲಿ ನಡೆದಿರುವಂತ ಮಾತುಕತೆ ವೀಡಿಯೋ ಇದಾಗಿದ್ದು, ಈ ವೀಡಿಯೋದಲ್ಲಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಅವರು ದೇವರಾಜ್ ಎಂಬುವರೊಂದಿಗೆ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಹತ್ಯೆ ಕುರಿತಂತೆ ಮಾತನಾಡುತ್ತಿರೋ

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆ ಸ್ಕೆಚ್..! ಇಲ್ಲಿದೆ ವಿಡಿಯೋ… Read More »

ಮಂಗಳೂರು: ಹೆತ್ತ ತಂದೆಯಿಂದಲೇ ಪುತ್ರಿಗೆ ಲೈಂಗಿಕ ಕಿರುಕುಳ

ಮಂಗಳೂರು; ತಂದೆಯಿಂದಲೇ ಹೆತ್ತ ಮಗಳ ಮೇಲೆ ಲೈಂಗಿಕ ಕಿರುಕುಳ ನಡೆದ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಒಂದನೆ ತರಗತಿ ಕಲಿಯುತ್ತಿರುವ ಮಗಳ ಮೇಲೆ ಈತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗಳಿಗೆ ಈತ ದೌರ್ಜನ್ಯ ಎಸಗುತ್ತಿರುವುದನ್ನು ವಿರೋಧಿಸಿದ ತನ್ನ ತಾಯಿಗೂ ಹಲ್ಲೆ ನಡೆಸಿದ್ದಾನೆ. ಈತ ಕದ್ರಿ ಪೊಲೀಸ್ ಠಾಣೆ ಯಲ್ಲಿ ರೌಡಿಶೀಟರ್ ಆಗಿದ್ದು ಜೊಮ್ಯಾಟೊದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿ ಈತನನ್ನು ಬಂಧಿಸಿದ್ದಾರೆ.

ಮಂಗಳೂರು: ಹೆತ್ತ ತಂದೆಯಿಂದಲೇ ಪುತ್ರಿಗೆ ಲೈಂಗಿಕ ಕಿರುಕುಳ Read More »

ಬಂಟ್ವಾಳ: ಯುವಕ ನಾಪತ್ತೆಯಾಗುತ್ತಿದ್ದಂತೆ ಕೋಟ್ಯಂತರ ರೂ. ವಂಚನೆ ಬಗ್ಗೆ ಕಾಸರಗೋಡು ಠಾಣೆಯಲ್ಲಿ ದೂರು.!

ಬಂಟ್ವಾಳ: ಕ್ರಿಕೆಟ್ ಆಡವಾಡಲೆಂದು ತೆರಳಿ ವಾಪಾಸ್ ಮನೆಗೆ ಬರದೆ ನಾಪತ್ತೆಯಾಗಿದ್ದಾನೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಯುವಕನ ವಿರುದ್ಧ ಉದ್ಯೋಗದಲ್ಲಿದ್ದ ಸಂಸ್ಥೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಬಗ್ಗೆ ಕಾಸರಗೋಡಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿ.ಸಿ.ರೋಡ್ ಕೈಕಂಬ ಸಮೀಪದ ತಾಳಿಪಡ್ಡು ನಿವಾಸಿ ಮುಹಮ್ಮದ್ ಫಾರೂಕ್ ನಾಪತ್ತೆಯಾದ ಯುವಕ. ಈತ ನ.28ರಂದು ಬೆಳಗ್ಗೆ 7:30ಕ್ಕೆ ಕ್ರಿಕೆಟ್ ಆಡಲೆಂದು ಮನೆಯಿಂದ ಹೋದವರು ಅ ಬಳಿಕ ಮನೆಗೆ ವಾಪಸ್ ಬಂದಿಲ್ಲ ಎಂದು ಅವರ

ಬಂಟ್ವಾಳ: ಯುವಕ ನಾಪತ್ತೆಯಾಗುತ್ತಿದ್ದಂತೆ ಕೋಟ್ಯಂತರ ರೂ. ವಂಚನೆ ಬಗ್ಗೆ ಕಾಸರಗೋಡು ಠಾಣೆಯಲ್ಲಿ ದೂರು.! Read More »

ರಾಷ್ಟ್ರ ಶಕ್ತಿ ಸೌಧದಲ್ಲಿ ಬೆಂಕಿ| ಸಂಸತ್ ನ 59 ನೇ ಕೊಠಡಿಯಲ್ಲಿ ಅಗ್ನಿ ಅವಘಡ|

ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ ನಡೆಯುತ್ತಿರೋ ಸಂದರ್ಭದಲ್ಲಿಯೇ ಸಂಸತ್ ಆವರಣದೊಳಗೆ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಸಂಸತ್ ಭವನದ 59ನೇ ಕೊಠಡಿಯಲ್ಲಿ ಕಾಣಿಸಿಕೊಂಡಿತು. ಇಂದು ಬೆಳಿಗ್ಗೆ 8 ಗಂಟೆಯ ಹಾಗೇ ದೆಹಲಿಯ ಸಂಸತ್ ಭವನದ ಕೊಠಡಿ ಸಂಖ್ಯೆ 59ರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಮತ್ತೊಂದೆಡೆ ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಪ್ರಾರಂಭವಾಗಿದ್ದು ಮತ್ತು ಡಿಸೆಂಬರ್ 23ರಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಇದೇ ಸಂದರ್ಭದಲ್ಲಿ ಅಗ್ನಿ ಅವಘಡ

ರಾಷ್ಟ್ರ ಶಕ್ತಿ ಸೌಧದಲ್ಲಿ ಬೆಂಕಿ| ಸಂಸತ್ ನ 59 ನೇ ಕೊಠಡಿಯಲ್ಲಿ ಅಗ್ನಿ ಅವಘಡ| Read More »