ಮಂಗಳೂರಿನಲ್ಲಿ ಕೇರಳ ವಿದ್ಯಾರ್ಥಿಗಳ ಬೀದಿಕಾಳಗ| ಬಿಡಿಸಲು ಹೋದ ಪೊಲೀಸರ ಮೇಲೂ ಹಲ್ಲೆ| ಕಲ್ಲು, ಇಂಟರ್ ಲಾಕ್ ಎಸೆದು ಪುಂಡಾಟ|
ಮಂಗಳೂರು: ನಗರದ ಎರಡು ಕಡೆ ವಿದ್ಯಾರ್ಥಿಗಳ ನಡುವೆ ತೀವ್ರ ಗಲಾಟೆ ನಡೆದಿದ್ದು ಬಿಡಿಸಲು ಹೋದ ಐವರು ಪೊಲೀಸರಿಗೂ ಕಲ್ಲು, ಇಂಟರ್ ಲಾಕ್ ಎಸೆದು ಹಲ್ಲೆ ನಡೆಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಯೇನಪೋಯ ಡಿಗ್ರಿ ಕಾಲೇಜಿನಲ್ಲಿ 3ನೇ ವರ್ಷದ ಬಿಎಸ್ಪಿ ಹಾಸ್ಪಿಟಾಲಿಟಿ ಓದುತ್ತಿರುವ ಕೇರಳ ಮೂಲದ ಆದರ್ಶ ಪ್ರೇಮಕುಮಾರ್ ಎಂಬಾತ ಗುರುವಾರ ಸಂಜೆ ಏಳು ಗಂಟೆ ಸುಮಾರಿಗೆ ಬಾವುಟ ಗುಡ್ಡೆಯ ಲೈಟ್ ಹೌಸ್ ಹಿಲ್ ಅಪಾರ್ಟ್ಮೆಂಟ್ ಬಳಿ ಬಂದಿದ್ದು ಅಲ್ಲಿ ತನ್ನ ಸ್ನೇಹಿತೆ ಸಿನಾನ್ ಜೊತೆ ಮಾತನಾಡುತ್ತಿದ್ದಾಗ […]