December 2021

ಒಂದು‌ ವರ್ಷದ ಸುಧೀರ್ಘ ರೈತ ಚಳುವಳಿಗೆ ಇತಿಶ್ರೀ| ದೆಹಲಿ ಗಡಿಯಿಂದ ವಿರಮಿಸಿದ ಸಂಯುಕ್ತ ಕಿಸಾನ್ ಮೋರ್ಚಾ

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಜೊತೆ ತೀವ್ರ ಮಾತುಕತೆಗಳ ನಂತರ, ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಅಂತಿಮವಾಗಿ ವರ್ಷದಿಂದ ನಡೆಸುತ್ತಿದ್ದ ಸುಧೀರ್ಘ ಚಳವಳಿಯನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ . ಪ್ರತಿಭಟನೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ವಿವಾದಿತ ಕೃಷಿ ಕಾನೂನುಗಳ ವಿರುದ್ಧದ ಚಳವಳಿಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ಪ್ರತಿಭಟನಾ ನಿರತ ರೈತರು ಮಂಡಿಸಿದ ಎಲ್ಲಾ ಬೇಡಿಕೆಗಳನ್ನು ಕೇಂದ್ರವು ಅಂಗೀಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಬಂದಿದೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ […]

ಒಂದು‌ ವರ್ಷದ ಸುಧೀರ್ಘ ರೈತ ಚಳುವಳಿಗೆ ಇತಿಶ್ರೀ| ದೆಹಲಿ ಗಡಿಯಿಂದ ವಿರಮಿಸಿದ ಸಂಯುಕ್ತ ಕಿಸಾನ್ ಮೋರ್ಚಾ Read More »

ಉಪ್ಪಿನಂಗಡಿ: ಸರಣಿ‌ ಅಪಘಾತ| ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಉಪ್ಪಿನಂಗಡಿ: ಕಾರು ಮತ್ತು ಲಾರಿ ಮುಖಾ-ಮುಖಿ ಡಿಕ್ಕಿಯಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಅಪಘಾತದ ಭೀಕರ ಶಬ್ದಕ್ಕೆ ಮುಂದೆ ಚಲಿಸುತ್ತಿದ್ದ ಲಾರಿ ಚಾಲಕ ಹಿಂದೆ ತಿರುಗಿ ನೋಡಿ ತನ್ನ ಲಾರಿಯ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾದ ಘಟನೆ ಮಾಣೆ ಮತ್ತು ಹಾಸನ ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ಮಠ ವ್ಯಾಪ್ತಿಯ ಪಂಜಾಲದಲ್ಲಿ ನಡೆದಿದೆ. ಅಪಘಾತದ ತೀವ್ರತೆಗೆ ಜನ ಬೆಚ್ಚಿ ಬಿದ್ದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.ಚಾಲಕರು ಸಹಿತ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.ಚಿಕಿತ್ಸೆಗಾಗಿ ಹತ್ತಿರದ

ಉಪ್ಪಿನಂಗಡಿ: ಸರಣಿ‌ ಅಪಘಾತ| ನಿಯಂತ್ರಣ ತಪ್ಪಿ ಲಾರಿ ಪಲ್ಟಿ Read More »

ರಾಜ್ಯದಲ್ಲಿ ಕೊರೊನಾ ಹೆಚ್ಚಳ| ಇಂದು‌ ಸಿಎಂ‌ ನೇತ್ರತ್ವದಲ್ಲಿ ಸಚಿವ ಸಂಪುಟ ಸಭೆ| ನೈಟ್ ಕರ್ಪ್ಯೂ,ಹೊಸ ಮಾರ್ಗಸೂಚಿ ಪ್ರಕಟ ಸಾಧ್ಯತೆ|

ಬೆಂಗಳೂರು : ಕೊರೊನಾ ರೂಪಾಂತರ ಒಮಿಕ್ರಾನ್ ಸೋಂಕಿನ ಆತಂಕ ಮತ್ತು ರಾಜ್ಯದ ಶಾಲಾ ಕಾಲೇಜುಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ನಡೆಯಲಿದ್ದು, ಸಭೆಯಲ್ಲಿ ಕೋವಿಡ್ ಸ್ಥಿತಿಗತಿ ಚರ್ಚೆಯ ಬಳಿಕ ಕೋವಿಡ್ ನಿಯಂತ್ರಣದ ಹೊಸ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಬುಧವಾರ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಸಿಎಂ ಬೊಮ್ಮಾಯಿ, ಕೋವಿಡ್ ನಿರ್ವಹಣೆ

ರಾಜ್ಯದಲ್ಲಿ ಕೊರೊನಾ ಹೆಚ್ಚಳ| ಇಂದು‌ ಸಿಎಂ‌ ನೇತ್ರತ್ವದಲ್ಲಿ ಸಚಿವ ಸಂಪುಟ ಸಭೆ| ನೈಟ್ ಕರ್ಪ್ಯೂ,ಹೊಸ ಮಾರ್ಗಸೂಚಿ ಪ್ರಕಟ ಸಾಧ್ಯತೆ| Read More »

ಮಾಜಿ ಸಚಿವ ಎಸ್.ಆರ್‌ ಮೋರೆ ವಿಧಿವಶ

ಧಾರವಾಡ : ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಸ್.ಆರ್. ಮೋರೆ (84) ಅವರು ಇಂದು ಮುಂಜಾನೆ ಧಾರವಾಡದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಎಸ್.ಆರ್ ಮೋರೆ ಅವರನ್ನು ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಧರ್ಮಸಿಂಗ್ ಅವಧಿಯಲ್ಲಿ ಎರಡು ಬಾರಿ ಸಚಿವರಾಗಿ ಅಧಿಕಾರವನ್ನು ಮಾಡಿದ್ದರು.

ಮಾಜಿ ಸಚಿವ ಎಸ್.ಆರ್‌ ಮೋರೆ ವಿಧಿವಶ Read More »

”ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು, ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತು” – ಇಲ್ಲಿದೆ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಮಾತು…

ಚೆನ್ನೈ: ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರಾದ ಸಿಡಿಎಸ್ ಬಿಪಿನ್ ರಾವತ್ ಸಂಚರಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡು ರಾವತ್ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್ ಪತನಗೊಳ್ಳುತ್ತಿದ್ದನ್ನು ಗಮನಿಸಿದ ಸ್ಥಳೀಯರ ಪ್ರಕಾರ ಮೊದಲು ದೊಡ್ಡ ಶಬ್ಧ ಕೇಳಿಬಂದಿದ್ದು ಹೊರ ಬಂದು ನೋಡುತ್ತಿದ್ದಂತೆ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ. ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು – ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತುರಾವತ್ ದಂಪತಿ ಸೇರಿ 14

”ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು, ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತು” – ಇಲ್ಲಿದೆ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಮಾತು… Read More »

ಸಾವಿನ‌ ದವಡೆಯಿಂದ ಪಾರಾಗಿ ಬಂದ ಏಕೈಕ ಅಧಿಕಾರಿ ವರುಣ್ ಸಿಂಗ್

ಚೆನ್ನೈ:ಹೆಲಿಕಾಪ್ಟರ್‌ ದುರಂತದಲ್ಲಿ ಐಎಎಫ್ ನ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಮಾತ್ರವೇ ಬದುಕುಳಿದಿದ್ದಾರೆ. ಅವರಿಗೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಈ ಹಿಂದೆಯೂ ಒಮ್ಮೆ ಪ್ರಾಣಾಪಾಯದಿಂದ ಪಾರಾಗಿದ್ದರು. ಅವರಿಗೆ ಆ.15ರಂದು ಶೌರ್ಯಚಕ್ರ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು. ವರುಣ್‌ ಸಿಂಗ್‌ ಅವರು 2020 ಅ. 12ರಂದು ಯುದ್ಧ ವಿಮಾನವೊಂದರ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದರು. ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಸುರಕ್ಷಿತವಾಗಿ ಇಳಿಸುವ ಪ್ರಯತ್ನದಲ್ಲಿದ್ದ ವೇಳೆ, ವಿಮಾನದ ನಿರ್ವಹಣಾ ಸಿಸ್ಟಂ ಕೂಡ ಸ್ಥಗಿತಗೊಂಡಿತು.

ಸಾವಿನ‌ ದವಡೆಯಿಂದ ಪಾರಾಗಿ ಬಂದ ಏಕೈಕ ಅಧಿಕಾರಿ ವರುಣ್ ಸಿಂಗ್ Read More »

ಕುಕ್ಕೆ ಚಂಪಾಷಷ್ಟಿ ಮಹೋತ್ಸವ ‌ನೇರಪ್ರಸಾರ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವ ಅಂಗವಾಗಿ ಪಂಚಮಿ ರಥೋತ್ಸವ ನೇರಪ್ರಸಾರ ಇಲ್ಲಿ ಕ್ಲಿಕ್ ಮಾಡಿ

ಕುಕ್ಕೆ ಚಂಪಾಷಷ್ಟಿ ಮಹೋತ್ಸವ ‌ನೇರಪ್ರಸಾರ Read More »

ಕಣಕಣದಲ್ಲೂ‌ ದೇಶಭಕ್ತಿ ತುಂಬಿದ್ದ ರಾವತ್| ನಿವೃತ್ತಿಗೂ ಮೊದಲೇ ವಿಶಿಷ್ಟ ಹುದ್ದೆಯ ಮೊದಲಿಗರಾಗಿದ್ದರು| ಬಿಪಿನ್ ಬಗೆಗಿನ ಕೌತುಕ ಹಿನ್ನಲೆ ಏನು ಗೊತ್ತಾ…?

ನವದೆಹಲಿ: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ( IAF Mi-17V5) ತಮಿಳುನಾಡಿನ ಊಟಿ ಬಳಿ ಪತನಗೊಂಡಿದ್ದು, ಅದರ ಪ್ರಯಾಣಿಸುತ್ತಿದ್ದ ಬಿಪಿನ್‌ ರಾವತ್‌ ಅವರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಇವರು ಸಾವನ್ನು ಜಯಿಸಿ ಬರಲು ಮಾಡಿದ ಪ್ರಾರ್ಥನೆಗಳ ಈಡೇರಲಿಲ್ಲ. ಸೇನೆಯ ಅಪೂರ್ವ ವ್ಯಕ್ತಿಯೊಬ್ಬರನ್ನು ಈ ದೇಶ ಕಳೆದುಕೊಂಡಂತಾಗಿದೆ. ಅಷ್ಟಕ್ಕೂ ಬಿಪಿನ್‌ ರಾವತ್‌ ಯಾರು ಗೊತ್ತಾ? ಇವರು ಮಾಡಿರುವ ಸಾಧನೆ ಎಂಥದ್ದು? ಸೇನೆಯ ಕಾನೂನನ್ನೇ ಬದಲಿಸಿರುವ ಇವರ ವ್ಯಕ್ತಿತ್ವ ಎಂಥದ್ದು ಎನ್ನುವುದೇ

ಕಣಕಣದಲ್ಲೂ‌ ದೇಶಭಕ್ತಿ ತುಂಬಿದ್ದ ರಾವತ್| ನಿವೃತ್ತಿಗೂ ಮೊದಲೇ ವಿಶಿಷ್ಟ ಹುದ್ದೆಯ ಮೊದಲಿಗರಾಗಿದ್ದರು| ಬಿಪಿನ್ ಬಗೆಗಿನ ಕೌತುಕ ಹಿನ್ನಲೆ ಏನು ಗೊತ್ತಾ…? Read More »

ಸೇನಾ ಹೆಲಿಕಾಪ್ಟರ್ ದುರಂತ| ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 14 ಮಂದಿ ದುರ್ಮರಣ|

ಚೆನ್ನೈ : ತಮಿಳುನಾಡಿನ ಊಟಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಘಟನೆಯಲ್ಲಿ ರಕ್ಷಣಾ ಪಡೆ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಮಂದಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ಸೇನಾ ಹೆಲಿಕಾಪ್ಟರ್ ಸೇನೆಯ ಐವರು ಹಿರಿಯ ಅಧಿಕಾರಿಗಳ ಸಹಿತ ಸೇನಾ ರಕ್ಷಣಾ ಪಡೆ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವ್ರ ಪತ್ನಿ ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಇವರು ಸೇನಾ ಕಾಲೇಜಿನಲ್ಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು

ಸೇನಾ ಹೆಲಿಕಾಪ್ಟರ್ ದುರಂತ| ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 14 ಮಂದಿ ದುರ್ಮರಣ| Read More »

ಸೇನಾ ಹೆಲಿಕಾಪ್ಟರ್ ಪತನ| ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪತ್ನಿ ಮಧುಲಿಕಾ ಸಾವು| ಹೆಚ್ಚಿದ ಆತಂಕ

ವೆಲ್ಲಿಂಗ್ಟನ್: ತಮಿಳುನಾಡಿನ ಊಟಿಯಲ್ಲಿ ಮಿಲಟರಿ ಹೆಲಿಕಾಪ್ಟರ್ ಪತನವಾಗಿದ್ದು, ಸದ್ಯದ ಮಾಹಿತಿಯ ಪ್ರಕಾರ ಭೀಕರ ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪತ್ನಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅವರು ಕುಟುಂಬ ಸಮೇತ ತಮಿಳುನಾಡಿನ ವೆಲ್ಲಿಂಗ್ಟನ್ ಗೆ ಉಪನ್ಯಾಸ ನೀಡಲು ಪ್ರಯಾಣ ಬೆಳೆಸಿದ್ದರು. ಅವಘಡದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರವರ ಪತ್ನಿ ಮಧುಲಿಕಾ ರಾವತ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಅಸುನೀಗಿದ್ದಾಗಿ ತಿಳಿದುಬಂದಿದೆ. ಹೆಲಿಕಾಪ್ಟರ್ ದುರಂತವಾದ

ಸೇನಾ ಹೆಲಿಕಾಪ್ಟರ್ ಪತನ| ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪತ್ನಿ ಮಧುಲಿಕಾ ಸಾವು| ಹೆಚ್ಚಿದ ಆತಂಕ Read More »