December 2021

ಕೊಂಕಣಿ‌ ಸಾಹಿತಿ ದಾಮೋದರ ಮಾವಜೋ ಅವರಿಗೆ 57ನೇ “ಜ್ಞಾನಪೀಠ” ಪುರಸ್ಕಾರ

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ಪ್ರತಿಷ್ಠಿತ “ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ’ ಪುರಸ್ಕೃತ ಗೋವಾದ ದಾಮೋದರ ಮಾವಜೊ ಅವರಿಗೆ 57ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ಅವರು ಸಣ್ಣ ಕಥೆ‌, ಕಾದಂಬರಿ, ಅಂಕಣ ಮತ್ತು ಚಿತ್ರಕಥೆ ಬರಹಗಾರರಾಗಿದ್ದು, 3 ದಶಕಗಳಿಂದ ಕೊಂಕಣಿಯಲ್ಲಿ ಬರೆಯುತ್ತಿದ್ದಾರೆ. ಗೋವಾ ಕಲಾ ಅಕಾಡೆಮಿ ಪ್ರಶಸ್ತಿ ಮತ್ತು ಕೊಂಕಣಿ ಭಾಷಾ ಮಂಡಲ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಾವಜೊ ಅವರಿಗೆ 2011-2012ರಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಹಿರಿಯ ಫೆಲೋಶಿಪ್‌ ಲಭಿಸಿತ್ತು. 2019ರಲ್ಲಿ […]

ಕೊಂಕಣಿ‌ ಸಾಹಿತಿ ದಾಮೋದರ ಮಾವಜೋ ಅವರಿಗೆ 57ನೇ “ಜ್ಞಾನಪೀಠ” ಪುರಸ್ಕಾರ Read More »

ಮುಸ್ಲಿಂ ವ್ಯಕ್ತಿಯ ಮೇಲೆ ಅನ್ಯಕೋಮಿನ ಯುವಕರ ತಂಡದಿಂದ ದಾಳಿ|

ಮಂಗಳೂರು: ಅನ್ಯಕೋಮಿನ ಯುವಕರ ಗುಂಪಿನಿಂದ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದ ಬಗ್ಗೆ ಇದೀಗ ಕಣ್ಣೂರಿನ ಅಡ್ಯಾರ್ ಪದವು ಬಳಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಅಡ್ಯಾರ್ ಪದವು ನಿವಾಸಿ ರಿಯಾಝ್ ಎಂದು ತಿಳಿದು ಬಂದಿದೆ. ಎಂದಿನಂತೆ ಕೆಲಸ ಬಿಟ್ಚು ಮನೆಗೆ ತೆರಳುತ್ತಿದ್ದಾಗ ಬಿತ್ತ್’ಪಾದೆ ಬಳಿ ಏಕಾಏಕಿ ಅನ್ಯಕೋಮಿನ ಗುಂಪು ಬಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ರಿಯಾಝ್ ಎಂಬವರು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಐಲ್ಯಾಂಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮುಸ್ಲಿಂ ವ್ಯಕ್ತಿಯ ಮೇಲೆ ಅನ್ಯಕೋಮಿನ ಯುವಕರ ತಂಡದಿಂದ ದಾಳಿ| Read More »

ಸಹಪಾಠಿಯ ಅತ್ಯಾಚಾರಗೈದ ಯುವಕ| ಆರೋಪಿಯ ಬಂಧನ

ಮಂಗಳೂರು: ಯುವತಿಯ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಬಜ್ಪೆ ಶನೇಶ್ವರ ದೇವಸ್ಥಾನ ಸಮೀಪದ ಎ. ಅಬೂಬಕರ್ ಸಿದ್ದೀಕ್(21) ಎಂಬಾತನನ್ನು ಶುಕ್ರವಾರ ಬಂಧಿಸಲಾಗಿದೆ. ಆರೋಪಿ ಸಿದ್ದೀಕ್ ಮತ್ತು ಸಂತ್ರಸ್ತೆ ಯುವತಿಯು ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು ಎನ್ನಲಾಗಿದೆ. ಆ ಸಂದರ್ಭ ಆರೋಪಿಯು ಜತೆಯಾಗಿ ಪೊಟೋ ತೆಗೆಸಿಕೊಂಡಿದ್ದ, ಅಲ್ಲದೆ ಆ ಪೊಟೋವನ್ನು ಯುವತಿಗೆ ತೋರಿಸಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎಂದು ಹೇಳಲಾಗಿದೆ. ಮದುವೆಗೆ ಒಪ್ಪದಿದ್ದರೆ ಪೊಟೋವನ್ನು ಫೇಸ್‌ಬುಕ್‌ಗೆ ಹಾಕಿ ವೈರಲ್ ಮಾಡುವುದಾಗಿ ಬೆದರಿಸಿದ್ದ ಎಂದು ಆರೋಪಿಸಲಾಗಿದೆ. ಡಿ.8ರಂದು ಸಂಜೆ ಯುವತಿಯು ಕೆಲಸ ಮುಗಿಸಿ ಮನೆಗೆ ಮರಳಿದಾಗ

ಸಹಪಾಠಿಯ ಅತ್ಯಾಚಾರಗೈದ ಯುವಕ| ಆರೋಪಿಯ ಬಂಧನ Read More »

ಮಂಗಳೂರು: ಬಸ್ಸ್ ನಲ್ಲಿ ಅನ್ಯಕೋಮಿನ ಜೋಡಿಯಿಂದ “ಪ್ರೇಮಸಲ್ಲಾಪ” | ಸಾರ್ವಜನಿಕರಿಂದ ಬುದ್ದಿಮಾತು

ಉಡುಪಿ :ಮಂಗಳೂರಿನಿಂದ ಉಡುಪಿ ಕಡೆಗೆ ಬಸ್ಸಿನಲ್ಲಿ ಹೋಗುತ್ತಿದ್ದ ಯುವಜೋಡಿಯೊಂದು ಮೈಮರೆತು ಸರಸ‌ ಸಲ್ಲಾಪದಲ್ಲಿ ತೊಡಗಿದ ಘಟನೆ ನಡೆದಿದೆ. ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯನ್ನು ಉಡುಪಿಯಲ್ಲಿ ಸಾರ್ವಜನಿಕರು ಹಿಡಿದು ಬುದ್ಧಿಮಾತು ಹೇಳುವ ವೀಡಿಯೋ ವೈರಲ್ ಆಗುತ್ತಿದೆ. ಇಂದು ಬೆಳಗ್ಗೆ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿ ಸರಸದಲ್ಲಿ ತೊಡಗಿದ್ದ ವೇಳೆ ಸಾರ್ವಜನಿಕರು ಬಸ್ಸಿನ ನಿರ್ವಾಹಕರ ಗಮನಕ್ಕೆ ತಂದಿದ್ದು ಉಡುಪಿಯಲ್ಲಿ ಇಬ್ಬರನ್ನೂ ವಿಚಾರಣೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು.

ಮಂಗಳೂರು: ಬಸ್ಸ್ ನಲ್ಲಿ ಅನ್ಯಕೋಮಿನ ಜೋಡಿಯಿಂದ “ಪ್ರೇಮಸಲ್ಲಾಪ” | ಸಾರ್ವಜನಿಕರಿಂದ ಬುದ್ದಿಮಾತು Read More »

ರೈಲ್ವೆ ಇಲಾಖೆಯಲ್ಲಿ 9,328 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪುನರಾರಂಭ

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಡಿಸೆಂಬರ್ 23 ರಿಂದ 9,328 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪುನರಾರಂಭವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಮಧ್ಯ ರೈಲ್ವೆ ಅಡಿಯಲ್ಲಿ 9,328 ಹುದ್ದೆಗಳನ್ನು ಈ ತಿಂಗಳ 23 ರಿಂದ ಹಂತಹಂತವಾಗಿ ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಲ್ಲಿ ಟ್ರ್ಯಾಕ್ ಮ್ಯಾನ್ ವಿಭಾಗದಲ್ಲಿ 4,753, ಪಾಯಿಂಟ್ ಮೆನ್ ಗಳು 1,949, 37 ಆಸ್ಪತ್ರೆ ಪರಿಚಾರಕರು ಮತ್ತು ಇತರ ಹುದ್ದೆಗಳ ಇತರ ವಿಭಾಗಗಳು ಸೇರಿವೆ. ದೇಶಾದ್ಯಂತ ಎಲ್ಲಾ ವಲಯಗಳಲ್ಲಿ

ರೈಲ್ವೆ ಇಲಾಖೆಯಲ್ಲಿ 9,328 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪುನರಾರಂಭ Read More »

ಮಂಗಳೂರು: ಲೈಂಗಿಕ ಕಿರುಕುಳ ಪ್ರಕರಣ| ಆರೋಪಿ ವಕೀಲ ರಾಜೇಶ್ ಭಟ್ ಪತ್ನಿ, ಮಗ ಬಂಧನ| ಇವರ ಸಹಕಾರದಿಂದಲೇ ನಡೆಯುತ್ತಿತ್ತೆ ಕೃತ್ಯ !!!!

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಸಂಬಂದಿಸಿದ ಆರೋಪಿಯ ಪತ್ನಿ ಹಾಗೂ ಆರೋಪಿಗೆ ಸಹಕಾರ ನೀಡಿದ್ದ ಅಚ್ಯುತ ಭಟ್ ಎಂಬಾತನ ಮಗ ಅಲೋಕ್ ನನ್ನೂ ಕೂಡ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿ ವಕೀಲ ಕೆ.ಎಸ್‌.ಎನ್‌. ರಾಜೇಶ್‌ ಭಟ್‌ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಅ.18ರಂದು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ರಾಜೇಶ್ ಭಟ್‌ಗೆ ಸಹಕಾರ ನೀಡಿದ್ದ ಆರೋಪದ ಮೇಲೆ ಈ ಹಿಂದೆ ಅನಂತ ಭಟ್ ಎಂಬಾತನನ್ನು

ಮಂಗಳೂರು: ಲೈಂಗಿಕ ಕಿರುಕುಳ ಪ್ರಕರಣ| ಆರೋಪಿ ವಕೀಲ ರಾಜೇಶ್ ಭಟ್ ಪತ್ನಿ, ಮಗ ಬಂಧನ| ಇವರ ಸಹಕಾರದಿಂದಲೇ ನಡೆಯುತ್ತಿತ್ತೆ ಕೃತ್ಯ !!!! Read More »

ಸಿಎಂ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಕಾಡಿದ ಲ್ಯಾಂಡಿಂಗ್ ಸಮಸ್ಯೆ

ಹುಬ್ಬಳ್ಳಿ: ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ಇದರಿಂದಾಗಿ ಅರ್ಧ ಗಂಟೆ ವಿಮಾನ ಆಗಸದಲ್ಲಿ ಸುತ್ತು‌ ಹೊಡೆದಿದೆ. ಲ್ಯಾಂಡಿಂಗ್ ಗೆ ಕ್ಲಿಯರೆನ್ಸ್ ಸಿಗದ ಕಾರಣ ಅರ್ಧ ಗಂಟೆಯಿಂದ ವಿಮಾನ ಹಾರಾಟ ನಡೆಸಿದೆ. ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ್ದು, ಆದರೆ ದಟ್ಟ ಮಂಜು ಸಮಸ್ಯೆಯ ಕಾರಣ ಆಕಾಶದಲ್ಲಿ ವಿಮಾನ

ಸಿಎಂ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಕಾಡಿದ ಲ್ಯಾಂಡಿಂಗ್ ಸಮಸ್ಯೆ Read More »

ಎಸ್‌ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ| ವಿದ್ಯಾರ್ಥಿಗಳೇ ಈ ಮಾಹಿತಿ ಖಂಡಿತಾ ತಿಳ್ಕೊಳ್ಳಿ

ಬೆಂಗಳೂರು : ಈ ಬಾರಿ ಎಸ್‌ಎಸ್ ಎಲ್ ಸ(SSLC exam) ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬಹು ಆಯ್ಕೆ ಪ್ರಶ್ನೆಗಳನ್ನು ಕೈಬಿಡಲು ತೀರ್ಮಾನಿಸಿದೆ. ರಾಜ್ಯದಲ್ಲಿ 10 ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಈ ಬಾರಿ ಬಹು ಆಯ್ಕೆ ಪ್ರಶ್ನೆಗಳನ್ನು ಕೈಬಿಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ವಿವರಣಾತ್ಮಕ ಉತ್ತರಗಳನ್ನು ಬರೆಯಲು ತಯಾರಿ ಮಾಡಬೇಕಾಗುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2021 ಬೋರ್ಡ್ ಪರೀಕ್ಷೆಗಳಲ್ಲಿ ಅಳವಡಿಸಲಾದ ಬಹು

ಎಸ್‌ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ| ವಿದ್ಯಾರ್ಥಿಗಳೇ ಈ ಮಾಹಿತಿ ಖಂಡಿತಾ ತಿಳ್ಕೊಳ್ಳಿ Read More »

ಇಂದು ಪರಿಷತ್ ಚುನಾವಣೆ| 25 ಸ್ಥಾನಕ್ಕೆ 90 ಅಭ್ಯರ್ಥಿಗಳು ಕಣದಲ್ಲಿ| ಡಿ. 14ರಂದು ಫಲಿತಾಂಶ

ಬೆಂಗಳೂರು: ಇಪ್ಪತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಇಂದು (ಡಿ.9) ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದು, ಡಿಸೆಂಬರ್‌ 14ರಂದು ಫಲಿತಾಂಶ ಹೊರ ಬರಲಿದೆ. ಬುಧವಾರ ಸಂಜೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಗುರುವಾರ ಮತದಾರರನ್ನು ನೇರವಾಗಿ ಭೇಟಿಯಾಗಿ ಮತ ಯಾಚಿಸುವ ಕೊನೆಯ ಕ್ಷಣದ ಕಸರತ್ತು ನಡೆಯಿತು. ನವೆಂಬರ್‌ 16ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 20 ಕ್ಷೇತ್ರಗಳಲ್ಲಿ ಪೈಪೋಟಿಯಲ್ಲಿವೆ.

ಇಂದು ಪರಿಷತ್ ಚುನಾವಣೆ| 25 ಸ್ಥಾನಕ್ಕೆ 90 ಅಭ್ಯರ್ಥಿಗಳು ಕಣದಲ್ಲಿ| ಡಿ. 14ರಂದು ಫಲಿತಾಂಶ Read More »

ನೈಟ್ ಕರ್ಪ್ಯೂ, ಶಾಲೆಗಳ ಬಂದ್ ಸದ್ಯಕ್ಕಿಲ್ಲ| ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಬೆಂಗಳೂರು: ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಕುರಿತು ಜನರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸದ್ಯಕ್ಕೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವುದಿಲ್ಲ. ವಾರದ ಬಳಿಕ ಈ ಕುರಿತು ಪರಿಸ್ಥಿತಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ನೈಟ್ ಕರ್ಫ್ಯೂ ಸದ್ಯಕ್ಕಿಲ್ಲ, ಒಂದು ವಾರದ ಬಳಿಕ ನಿರ್ಧಾರ ಮಾಡಲಾಗುವುದು. ನರ್ಸಿಂಗ್ ವಿದ್ಯಾರ್ಥಿಗಳಿಗೆ ಎರಡು ಡೋಸ್ ಕಡ್ಡಾಯ. ಕ್ರಿಸ್ಮಸ್, ಹೊಸ

ನೈಟ್ ಕರ್ಪ್ಯೂ, ಶಾಲೆಗಳ ಬಂದ್ ಸದ್ಯಕ್ಕಿಲ್ಲ| ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ Read More »