December 2021

ಚೆನ್ನೈ: ಹೆಲಿಕಾಪ್ಟರ್ ದುರಂತದ ಗಾಯಾಳು ಕ್ಯಾಪ್ಟನ್ ವರುಣ್ ಸಿಂಗ್ ವಿಧಿವಶ

​ಬೆಂಗಳೂರು: ತಮಿಳುನಾಡಿನ ಕುನೂರು ಬಳಿ ನಡೆದ ವಿಮಾನ ಅಪಘಾತದಲ್ಲಿ ಬದುಕಿ ಉಳಿದಿದ್ದ ಏಕೈಕ ಯೋಧ ಐಎಎಫ್​ ಗ್ರೂಪ್​​ ಕ್ಯಾಪ್ಟನ್​ ವರುಣ್​ ಸಿಂಗ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ್ದಾರೆ. ಕಳೆದ ಗುರುವಾರ ತಮಿಳುನಾಡಿನ ವೆಲ್ಲಿಂಗ್ಟನ್‌ ಮಿಲಿಟರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ವರುಣ್‌ ಅವರನ್ನು ಬೆಂಗಳೂರಿನ ಕಮಾಂಡೊ ಆಸ್ಪತ್ರೆಗೆ ಕರೆತರಲಾಗಿತ್ತು. ‘ವರುಣ್‌ ಸಿಂಗ್‌ ಅವರ ದೇಹದಲ್ಲಿ ಅಪಾರ ಪ್ರಮಾಣದ ಸುಟ್ಟ ಗಾಯಗಳಾಗಿವೆ. ಅವರಿಗೆ ಸಾಕಷ್ಟು ಚರ್ಮದ ಅಗತ್ಯವಿದೆ. ಕಮಾಂಡೊ ಆಸ್ಪತ್ರೆಯವರ ಮನವಿ ಮೇರೆಗೆ 1 ಸಾವಿರ ಚದರ ಸೆಂ.ಮೀ. ಚರ್ಮವನ್ನು ನೀಡಲಾಗಿದೆ. […]

ಚೆನ್ನೈ: ಹೆಲಿಕಾಪ್ಟರ್ ದುರಂತದ ಗಾಯಾಳು ಕ್ಯಾಪ್ಟನ್ ವರುಣ್ ಸಿಂಗ್ ವಿಧಿವಶ Read More »

ಒಕ್ಕಲಿಗರ ಸಂಘದ ಚುನಾವಣೆ| ಡಾ. ರೇಣುಕಾಪ್ರಸಾದ್ ಗೆ ಗೆಲುವು

ಮಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಹುದ್ಧೆಗೆ ನಡೆದ ಚುನಾವಣೆಯಲ್ಲಿ ದಿ. ಕುರುಂಜಿ ವೆಂಕಟರಮಣ ಗೌಡರ ಕಿರಿಯ ಮಗ ಡಾ.ರೇಣುಕಾ ಪ್ರಸಾದ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ರೇಣುಕಾ ಪ್ರಸಾದ್ 3295 ಮತಗಳನ್ನು ಪಡೆದುಕೊಂಡರೆ ಅವರ ಹಿರಿಯ ಸಹೋದರ ಡಾ ಚಿದಾನಂದ ಕೆವಿ 1741 ಮತ ಪಡೆದು ಸೋಲು ಅನುಭವಿಸಿದರು. ಕಣದಲ್ಲಿದ್ದ ಮತ್ತೋರ್ವ ಸ್ಪರ್ಧಿ ಹೇಮಚಂದ್ರ ಹಲ್ದಡ್ಕ 346 ಮತ ಪಡೆಯಲಷ್ಟೇ ಶಕ್ತರಾದರು.

ಒಕ್ಕಲಿಗರ ಸಂಘದ ಚುನಾವಣೆ| ಡಾ. ರೇಣುಕಾಪ್ರಸಾದ್ ಗೆ ಗೆಲುವು Read More »

ಉಪ್ಪಿನಂಗಡಿ ಠಾಣಾ ಮುಂಭಾಗದಲ್ಲಿ ಹೈಡ್ರಾಮಾ ನಡೆಸಿದ ಪಿಎಫ್ಐ| ಪೊಲೀಸರು ಲಾಠಿ ಚಾರ್ಜ್ ಮಾಡಿದ್ದೇಕೆ? ಕಂಪ್ಲೀಟ್ ಸ್ಟೋರಿ

ನಾಲ್ಕು ತಾಲೂಕುಗಳಲ್ಲಿ ನಿಷೇದಾಜ್ಞೆ ಜಾರಿ: ಪುತ್ತೂರು ಉಪ ವಿಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಸೆಕ್ಷನ್‌ 144ರನ್ವಯ ನಿಷೇದಾಜ್ಞೆ ಜಾರಿಗೊಳಿಸಿ ಪುತ್ತೂರು ಸಹಾಯಕ ಆಯುಕ್ತರಾದ ಡಾ. ಯತೀಶ್‌ ಉಳ್ಳಾಲರವರು ಆದೇಶ ಹೊರಡಿಸಿದ್ದಾರೆ. ಪುತ್ತೂರು,ಬೆಳ್ತಂಗಡಿ,ಸುಳ್ಯ,ಕಡಬ ತಾಲೂಕಿನಾದ್ಯಂತ ನಿಷೇದಾಜ್ಙೆ ಜಾರಿಗೊಳಿಸಲಾಗಿದೆ. ಉಪ್ಪಿನಂಗಡಿಯಲ್ಲಿ ಡಿ 14 ರಂದು ರಾತ್ರಿ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಸಹಾಯಕ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪುತ್ತೂರು ಉಪವಿಭಾಗಾಯಾದ್ಯಂತ ಅಂದರೆ

ಉಪ್ಪಿನಂಗಡಿ ಠಾಣಾ ಮುಂಭಾಗದಲ್ಲಿ ಹೈಡ್ರಾಮಾ ನಡೆಸಿದ ಪಿಎಫ್ಐ| ಪೊಲೀಸರು ಲಾಠಿ ಚಾರ್ಜ್ ಮಾಡಿದ್ದೇಕೆ? ಕಂಪ್ಲೀಟ್ ಸ್ಟೋರಿ Read More »

ಮನೆಗೆ ನುಗ್ಗಿ ವ್ಯಾಪಾರಿಯ ವಿವಸ್ತ್ರಗೊಳಿಸಿ ದರೋಡೆ| ಮೂರು ಮಹಿಳೆಯರು ಸೇರಿದಂತೆ 6 ಮಂದಿ ಅರೆಸ್ಟ್|

ಬೆಂಗಳೂರು: ಬಟ್ಟೆ ಹಾಗೂ ಸೌಂದರ್ಯ ವರ್ಧಕ ವಸ್ತುಗಳ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರ ಮನೆಗೆ ಸಂಘಟನೆಯೊಂದರ ಸದಸ್ಯರು ಎಂದು ಹೇಳಿಕೊಂಡು ನುಗ್ಗಿ ಜೀವ ಬೆದರಿಕೆ ಹಾಕಿ ಚಿನ್ನಾಭರಣ ದರೋಡೆ ಮಾಡಿದ್ದ ಮೂರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಜ್ಞಾನ ಭಾರತಿಯ ನಿವಾಸಿ ದೀಪಾ, ಅನಿತಾ, ಪೀಣ್ಯದ ವಿಜಯಾ, ನವೀನ್‌, ಚಂದ್ರಶೇಖರ್‌, ಮಾಹಾಲಿಂಗಯ್ಯ ಬಂಧಿತರಾಗಿದ್ದು, ಆರೋಪಿಗಳಿಂದ 152 ಗ್ರಾಂ ಚಿನ್ನಾಭರಣ, .63 ಸಾವಿರ ನಗದು ಹಾಗೂ ಒಂದು ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಈ

ಮನೆಗೆ ನುಗ್ಗಿ ವ್ಯಾಪಾರಿಯ ವಿವಸ್ತ್ರಗೊಳಿಸಿ ದರೋಡೆ| ಮೂರು ಮಹಿಳೆಯರು ಸೇರಿದಂತೆ 6 ಮಂದಿ ಅರೆಸ್ಟ್| Read More »

ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣಾ ಫಲಿತಾಂಶ| 221 ಅಭ್ಯರ್ಥಿಗಳ‌ ಭವಿಷ್ಯ ನಿರ್ಧಾರ

ಬೆಂಗಳೂರು: ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಡಿ.12ರಂದು ನಡೆದಿದ್ದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಜಿದ್ದಾಜಿದ್ದಿನ ಫೈಟ್​ನಲ್ಲಿ ಗೆಲ್ಲುವರು ಯಾರು ಎಂಬ ಕುತೂಹಲ ಕೆರಳಿಸಿದೆ. ಇಂದು (ಡಿ.15) ಫಲಿತಾಂಶ ಹೊರಬೀಳಲಿದ್ದು, ರಾಜ್ಯ ಒಕ್ಕಲಿಗ ಸಂಘದ ಆಡಳಿತ ಚುಕ್ಕಾಣಿ ಯಾರ ಕೈ ಸೇರಲಿದೆ ಅಂತ ಕಾದು ನೋಡಬೇಕಿದೆ. ಏಕ ಕಾಲದಲ್ಲಿ ಸುಮಾರು 389 ಬೂತ್ ಗಳ ಮತ ಎಣಿಕೆ ನಡೆಯುತ್ತದೆ. ಮತ ಎಣಿಕೆಗೆ

ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣಾ ಫಲಿತಾಂಶ| 221 ಅಭ್ಯರ್ಥಿಗಳ‌ ಭವಿಷ್ಯ ನಿರ್ಧಾರ Read More »

ಉಪ್ಪಿನಂಗಡಿ: ಕೊಲೆ ಪ್ರಕರಣದ ಆರೋಪಿಗಳ ಬಿಡುಗಡೆಗೆ ಒತ್ತಾಯಿಸಿ ಪಿಎಫ್ಐ ಪ್ರತಿಭಟನೆ| ಕಾನೂನು ಉಲ್ಲಂಘಿಸಿ ದಾಂಧಲೆ ನಡೆಸಿ ಪುಂಡಾಟ| ಪೊಲೀಸರಿಂದ ಲಾಠಿಚಾರ್ಜ್, ಪರಿಸ್ಥಿತಿ ಉದ್ವಿಗ್ನ|

ಪುತ್ತೂರು: ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ನಿರತ ಪಿಎಫ್‌ಐ ಕಾರ್ಯಕರ್ತರ ಮೇಲೆ ಪೋಲಿಸರು ಲಾಠಿ ಚಾರ್ಜ್ ಮಾಡಿದ್ದಾರೆ. ಘಟನೆಯಲ್ಲಿ 20 ಕ್ಕೂ ಅಧಿಕ ಕಾರ್ಯಕರ್ತರು ಗಾಯಗೊಂಡಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಲೆಯತ್ನ ಆರೋಪದ ಪ್ರಕರಣದಲ್ಲಿ ಬಂಧಿತರಾದವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪಿಎಫ್‌ಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆಯ ಎದುರು ಬೆಳಗಿನಿಂದಲೇ ಪ್ರತಿಭಟನೆ ನಡೆಯುತ್ತಿದ್ದು ಸಂಜೆಯಾಗುತ್ತಲೇ ಉಗ್ರ ಸ್ವರೂಪ ಪಡೆದಿತ್ತು. ಸಂಜೆ ಠಾಣೆಯ ಮುಂದೆ ಸಾಮೂಹಿಕ ನಮಾಜ್‌ ಮಾಡಲು ಮುಂದಾದಾಗ ಅದನ್ನು ತಡೆಯಲು ಹೋದ ಪೊಲೀಸ್‌ ಮತ್ತು ಪಿಎಫ್‌ಐ ಕಾರ್ಯಕರ್ತರ ನಡುವೆ ತೀವ್ರ

ಉಪ್ಪಿನಂಗಡಿ: ಕೊಲೆ ಪ್ರಕರಣದ ಆರೋಪಿಗಳ ಬಿಡುಗಡೆಗೆ ಒತ್ತಾಯಿಸಿ ಪಿಎಫ್ಐ ಪ್ರತಿಭಟನೆ| ಕಾನೂನು ಉಲ್ಲಂಘಿಸಿ ದಾಂಧಲೆ ನಡೆಸಿ ಪುಂಡಾಟ| ಪೊಲೀಸರಿಂದ ಲಾಠಿಚಾರ್ಜ್, ಪರಿಸ್ಥಿತಿ ಉದ್ವಿಗ್ನ| Read More »

ಡಿ.15,ಅರೆಭಾಷೆ ಅಕಾಡೆಮಿಗೆ ದಶಮಾನೋತ್ಸವ ಸಂಭ್ರಮ| ಊರುಲಿ ಪೊರ್ಲುನ ಕಾರ್ಯಕ್ರಮದ ಗೌಜಿ|

ಮಂಗಳೂರು: ‘ಹೇಂಗೊಳಯಾ ಬಾವ, ಮನೆಯವು ಏನ್ ಮಾಡ್ವೆ?ನೀವ್ ಉಸಾರ್ ಒಳರಿಯಾ…? ಮಲೆನಾಡು- ಕರಾವಳಿಯ ಪ್ರದೇಶಗಳಲ್ಲಿ ನಮಗೆ ನಿತ್ಯ ಕೇಳಿಬರುವ ಉಭಯ ಕುಶಲೋಪರಿಯ ನಿನಾದವಿದು. ಅಂದ ಹಾಗೆ ಈ ಭಾಷೆ ಅರೆಭಾಷೆ. ಡಿ. 15ರಂದು ಅರೆಭಾಷೆ ದಿನ ಆಚರಿಸಲಾಗುತ್ತಿದ್ದು, ಈಗ ಅದಕ್ಕೆ ದಶಮಾನೋತ್ಸವ ಸಂಭ್ರಮ. ‘ಅರೆಭಾಷೆ ಎಂದರೆ ಇತರ ಜನರಿಗೆ ಈ ಮಾತನ್ನು ಕೇಳುವಾಗ ಅರ್ಧಂಬರ್ಧ ಅರ್ಥವಾಗುವಂತೆ ಇದ್ದುದರಿಂದ ಇದನ್ನು ಅರೆಭಾಷೆ, ಅರೆಗನ್ನಡ ಎಂದು ಗುರುತಿಸಬಹುದು’ ಎಂದು ಸಂಶೋಧಕರು ಹೇಳಿದ್ದಾರೆ. ಅರೆಭಾಷೆ ಮತ್ತು ಸಂಸ್ಕೃತಿಯ ಅಭ್ಯುದಯಕ್ಕೆ ರಾಜ್ಯ ಸರ್ಕಾರವು

ಡಿ.15,ಅರೆಭಾಷೆ ಅಕಾಡೆಮಿಗೆ ದಶಮಾನೋತ್ಸವ ಸಂಭ್ರಮ| ಊರುಲಿ ಪೊರ್ಲುನ ಕಾರ್ಯಕ್ರಮದ ಗೌಜಿ| Read More »

ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಮೂವರ ಬಂಧನ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಮೂವರು ಅತ್ಯಾಚಾರ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಮಂಗಳೂರು ಮೂಲದ ಇಬ್ಬರು ಹಾಗೂ ಕೇರಳ ಮೂಲದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಮುಡಿಪು ಹತ್ತಿರದ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಗೊಂದಲಮಯ ವಾತಾವರಣ ನಿರ್ಮಾಣವಾಗಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಬಾಲಕಿಯ ತಾಯಿ ನೀಡಿರು ದೂರಿನಂತೆ ಪ್ರಕರಣ ದಾಖಲಾಗಿದೆ. ”ಅಪ್ರಾಪ್ತ ವಯಸ್ಸಿನವಳಾಗಿರುವ ಮಗಳಿಗೆ ಆಲ್ಕೋಹಾಲ್ ಕುಡಿಸಿ ಮತ್ತು

ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಮೂವರ ಬಂಧನ Read More »

ವಿಧಾನ ಪರಿಷತ್ ಚುನಾವಣೆ| ಗೆದ್ದೋರು ಯಾರು? ಸೋತವರು ಯಾರು? ಮೂರು ಪಕ್ಷಗಳ ಕಂಪ್ಲೀಟ್ ಮಾಹಿತಿ…

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ 25 ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. 25 ಕ್ಷೇತ್ರಗಳಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೇ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ಒಂದೊಂದು ಕ್ಷೇತ್ರದಲ್ಲಿ ಸಾಧಿಸಿದ್ದಾರೆ. ಡಿಸೆಂಬರ್ 10ರಂದು ನಡೆದ 25 ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಮತಎಣಿಕೆ ಕಾರ್ಯ ಇಂದು ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಇದರ ನಡುವೆಯೂ

ವಿಧಾನ ಪರಿಷತ್ ಚುನಾವಣೆ| ಗೆದ್ದೋರು ಯಾರು? ಸೋತವರು ಯಾರು? ಮೂರು ಪಕ್ಷಗಳ ಕಂಪ್ಲೀಟ್ ಮಾಹಿತಿ… Read More »

ಪರಿಷತ್ ಫಲಿತಾಂಶ| ಕೋಟ ಶ್ರೀನಿವಾಸ ಪೂಜಾರಿ ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲುವು

ಮಂಗಳೂರು: ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ವಿಧಾನ ಪರಿಷತ್‍ನ ಏಕೈಕ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು 3,693 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಅವರು ಆಯ್ಕೆಯಾಗಿದ್ದಾರೆ. ಇನ್ನು ಕಾಂಗ್ರೆಸ್‍ನ ಅಭ್ಯರ್ಥಿ ಮಂಜುನಾಥ ಭಂಡಾರಿ 2,077 ಮತಗಳನ್ನು ಪಡೆದಿದ್ದಾರೆ.‌ ಎಸ್‍ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ 203 ಮತಗಳನ್ನಷ್ಟೇ ಪಡೆದಿದ್ದಾರೆ. 39 ಮತಗಳು ತಿರಸ್ಕೃತಗೊಂಡಿವೆ

ಪರಿಷತ್ ಫಲಿತಾಂಶ| ಕೋಟ ಶ್ರೀನಿವಾಸ ಪೂಜಾರಿ ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲುವು Read More »