December 2021

‘ವಾರ್ ರೂಂ ಸ್ಥಾಪಿಸಿ, ಅಗತ್ಯವಿದ್ದರೆ ನೈಟ್ ಕರ್ಪ್ಯೂ ಮಾಡಿ’ – ರಾಜ್ಯಕ್ಕೆ ಕೇಂದ್ರದ ಸೂಚನೆ

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದ ಹೊಸ ರೂಪಾಂತರ ಓಮಿಕ್ರಾನ್‌ ಡೆಲ್ಟಾಕ್ಕಿಂತ ಮೂರು ಪಟ್ಟು ಸಾಂಕ್ರಾಮಿಕವಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಿಂದಾಗಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ವಾರ್‌ ರೂಂ ಸ್ಥಾಪನೆ ಮಾಡುವ ಅಗತ್ಯವಿದೆ ಎಂದು ರಾಜ್ಯಗಳಿಗೆ ತಿಳಿಸಿರುವ ಕೇಂದ್ರ ಸರ್ಕಾರವು, ಹಲವಾರು ಅಗತ್ಯ ಕ್ರಮಗಳನ್ನು ಪಟ್ಟಿ ಮಾಡಿ ರಾಜ್ಯಗಳಿಗೆ ನೀಡಿದೆ. ಅಗತ್ಯವಿದ್ದರೆ ನೈಟ್‌ ಕರ್ಫ್ಯೂ ಅನ್ನು ಜಾರಿ ಮಾಡಿ ಎಂದು ಕೂಡಾ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ […]

‘ವಾರ್ ರೂಂ ಸ್ಥಾಪಿಸಿ, ಅಗತ್ಯವಿದ್ದರೆ ನೈಟ್ ಕರ್ಪ್ಯೂ ಮಾಡಿ’ – ರಾಜ್ಯಕ್ಕೆ ಕೇಂದ್ರದ ಸೂಚನೆ Read More »

ಇಂದಿನಿಂದ ಪ್ರೊ ಕಬಡ್ಡಿ ಕಲರವ| ಎರಡು ವರ್ಷಗಳ ಬಳಿಕ ತೊಡೆ ತಟ್ಟಲಿದ್ದಾರೆ ದೇಸಿ ಕ್ರೀಡಾ ಕಲಿಗಳು|

ಬೆಂಗಳೂರು: ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಪ್ರೋ ಕಬಡ್ಡಿ ಲೀಗ್‌ ಇಂದಿನಿಂದ ಪ್ರಾರಂಭವಾಗಲಿದೆ. ಈ ಬಾರಿಯ ಎಲ್ಲಾ 137 ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದೆ. ಪ್ರತಿತಂಡವೂ 22 ಪಂದ್ಯಗಳನ್ನು ಆಡಲಿದ್ದು, ಅಗ್ರ ತಂಡಗಳು ಮಾತ್ರ ಫ್ಲೇ ಆಫ್‌ ಗೆ ಪ್ರವೇಶ ಪಡೆಯಲಿದೆ. ಕಳೆದ ಬಾರಿ ನಡೆದ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಬೆಂಗಳೂರು ಬುಲ್ಸ್‌ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹೊಂದಿದೆ. ಮೊದಲ ದಿನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಬೆಂಗಳೂರು ಹಾಗೂ ಯು

ಇಂದಿನಿಂದ ಪ್ರೊ ಕಬಡ್ಡಿ ಕಲರವ| ಎರಡು ವರ್ಷಗಳ ಬಳಿಕ ತೊಡೆ ತಟ್ಟಲಿದ್ದಾರೆ ದೇಸಿ ಕ್ರೀಡಾ ಕಲಿಗಳು| Read More »

ವಿಪಕ್ಷಗಳ ವಿರೋಧದ ನಡುವೆಯೂ ವಿವಾದಿತ ಮತಾಂತರ ನಿಷೇಧ ಕಾಯ್ದೆ ಮಂಡನೆ| ಚರ್ಚೆಗೆ ಅವಕಾಶ‌ ನೀಡಲು ಸ್ಪೀಕರ್ ಸಹಮತ|

ಬೆಳಗಾವಿ: ವಿಪಕ್ಷಗಳ ಭಾರೀ ವಿರೋಧದ ನಡುವೆಯೇ ವಿವಾದಿತ ಮತಾಂತರ ನಿಷೇಧ ವಿಧೇಯಕವನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಭೋಜನದ ವಿರಾಮದ ಬಳಿಕ ಸದನ ಆರಂಭವಾಗುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧೇಯಕವನ್ನು ಮಂಡನೆ ಮಾಡಿದರು. ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ವಿಧೇಯಕ 2021’ ಮಂಡನೆ ಮಾಡುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇದಿರಂತೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿತು. ವಿಪಕ್ಷಗಳ ಗದ್ದಲದ ಮಧ್ಯೆಯೇ ವಿಧೇಯಕವನ್ನು ಮಂಡಿಸಲಾಯಿತು. ಏಕಾಏಕಿ ವಿಧೇಯಕ ಮಂಡನೆ ಮಾಡಿದ್ದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ

ವಿಪಕ್ಷಗಳ ವಿರೋಧದ ನಡುವೆಯೂ ವಿವಾದಿತ ಮತಾಂತರ ನಿಷೇಧ ಕಾಯ್ದೆ ಮಂಡನೆ| ಚರ್ಚೆಗೆ ಅವಕಾಶ‌ ನೀಡಲು ಸ್ಪೀಕರ್ ಸಹಮತ| Read More »

ಹೊಸ ವರ್ಷಾಚರಣೆ, ಕ್ರಿಸ್ಮಸ್ ಹಬ್ಬ ಆಚರಣೆಗೆ ಹೊಸ ಮಾರ್ಗಸೂಚಿ| ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ನಲ್ಲಿ ಎನೇನಿದೆ ಗೊತ್ತಾ?

ಬೆಂಗಳೂರು: ಕರೊನಾ, ಒಮಿಕ್ರಾನ್‌ ಭೀತಿಯ ನಡುವೆ ಮತ್ತೊಂದು ಹೊಸ ವರ್ಷ ಕಾಲಿಡುತ್ತಿದೆ. ಕಳೆದ ವರ್ಷದಂತೆಯೇ ನೂತನ ವರ್ಷದ ಆಚರಣೆಗೆ ಈ ಬಾರಿಯೂ ಬ್ರೇಕ್‌ ಹಾಕಲಾಗಿದೆ. ಕ್ಷಣಕ್ಷಣಕ್ಕೂ ಕರೊನಾ ಜತೆ ಒಮಿಕ್ರಾನ್‌ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಆಚರಣೆಗೆ ಕೆಲವೊಂದು ಕಟ್ಟುನಿಟ್ಟಿನ ನಿಯಮ ಮಾಡಲಾಗಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಲವೊಂದು ಮಾಹಿತಿ ನೀಡಿದ್ದಾರೆ. ತಜ್ಞರ ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ನಂತರ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆಗೆ ಕೆಲವೊಂದು ಷರತ್ತುಗಳನ್ನು

ಹೊಸ ವರ್ಷಾಚರಣೆ, ಕ್ರಿಸ್ಮಸ್ ಹಬ್ಬ ಆಚರಣೆಗೆ ಹೊಸ ಮಾರ್ಗಸೂಚಿ| ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ನಲ್ಲಿ ಎನೇನಿದೆ ಗೊತ್ತಾ? Read More »

ಕಾರಿಂಜೇಶ್ವರ ತಪ್ಪಲಿನಲ್ಲಿ ಅಕ್ರಮ ಗಣಿಗಾರಿಕೆ| ಸೂಕ್ತ ಕ್ರಮಕ್ಕೆ ಸಚಿವ ಅಂಗಾರ ಸೂಚನೆ|

ಬಂಟ್ವಾಳ. ತಾಲೂಕಿನ ಕಾವಳಮುಡೂರು ಗ್ರಾಮದ ಕಾರಿಂಜೇಶ್ವರ ದೇವಸ್ಥಾನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಈಗಾಗಲೇ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಸುತ್ತಲಿನ ಜಾಗದಲ್ಲಿ ಎರಡು ಕ್ರಶರ್ ಹಾಗೂ ಎರಡು ಕಲ್ಲು ಕ್ವಾರಿಗಳ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಲ್ಲದೇ ಗುತ್ತಿಗೆ ಪ್ರದೇಶದ ಹೊರಭಾಗದಲ್ಲಿ ಅಕ್ರಮ ಕಲ್ಲು ಸಾಗಾಣಿಕೆ ಮಾಡಿರುವುದರಿಂದ

ಕಾರಿಂಜೇಶ್ವರ ತಪ್ಪಲಿನಲ್ಲಿ ಅಕ್ರಮ ಗಣಿಗಾರಿಕೆ| ಸೂಕ್ತ ಕ್ರಮಕ್ಕೆ ಸಚಿವ ಅಂಗಾರ ಸೂಚನೆ| Read More »

ಮತ್ತೆ ಉಲ್ಬಣಿಸುತ್ತಿರುವ ಕೊರೊನಾ| ಸಿಎಂ ನೇತ್ರತ್ವದಲ್ಲಿ ತುರ್ತು ಸಭೆ| ಕರ್ನಾಟಕದಲ್ಲಿ ಮುಂದಿನ ವಾರದಿಂದ ನೈಟ್ ಕರ್ಪ್ಯೂ?

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತುರ್ತು ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 2.45ಕ್ಕೆ ಸುವರ್ಣಸೌಧದಲ್ಲಿ ಸಭೆ ನಡೆಸಲಿರುವ ಸಿಎಂ, ಒಮಿಕ್ರಾನ್​ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಕೋವಿಡ್ ವ್ಯಾಕ್ಸಿನೇಷನ್‌ ಡ್ರೈವ್ ಮತ್ತಷ್ಟು ವೇಗ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ರಾಜ್ಯದಲ್ಲಿ 90.06% ಜನರು ಮೊದಲ ಡೋಸ್​ ಲಸಿಕೆ ಪಡೆದಿದ್ದಾರೆ. ಎರಡನೇ ಡೋಸ್ ಹಾಕಿಸದವರಿಗೆ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಸೂಚನೆ ನೀಡಲಿರುವ ರಾಜ್ಯ ಸರ್ಕಾರ, ಕ್ರಿಸ್‌ಮಸ್

ಮತ್ತೆ ಉಲ್ಬಣಿಸುತ್ತಿರುವ ಕೊರೊನಾ| ಸಿಎಂ ನೇತ್ರತ್ವದಲ್ಲಿ ತುರ್ತು ಸಭೆ| ಕರ್ನಾಟಕದಲ್ಲಿ ಮುಂದಿನ ವಾರದಿಂದ ನೈಟ್ ಕರ್ಪ್ಯೂ? Read More »

ಪೊಲೀಸ್ ನೇಮಕಾತಿ| ಮಂಗಳಮುಖಿಯರಿಗೂ ಅವಕಾಶ ನೀಡಿದ ಇಲಾಖೆ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ತೃತೀಯ ಲಿಂಗಿಗಳೂ ಕೆಲಸ ಮಾಡಬಹುದು! ಇಲಾಖೆಯ ಪ್ರತಿ ವಿಭಾಗದಲ್ಲಿಯೂ ಮಂಗಳಮುಖಿಯರಿಗೆ ಶೇ.1 ಮೀಸಲಾತಿ ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ತೃತೀಯ ಲಿಂಗಿಗಳ ಬಹುದಿನದ ಕನಸು ನನಸಾಗುತ್ತಿದ್ದು, ಕರ್ನಾಟಕದಲ್ಲಿ ಇವರಿಗೀಗ ಸುವರ್ಣ ಅವಕಾಶ ಸಿಕ್ಕಿದೆ. ಇದೇ ಮೊದಲ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರಿಗೆ ಪೊಲೀಸ್​ ಕೆಲಸಕ್ಕೆ ಅರ್ಜಿ ಸಲ್ಲಿಸುವಂತೆ ಕರ್ನಾಟಕ ಪೊಲೀಸ್ ಇಲಾಖೆ ಆಹ್ವಾನಿಸಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಡಿ.20ರಿಂದ 2022ರ ಜನವರಿ 18ರವರೆಗೆ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ನೀಡಲಾಗಿದೆ. ಮಾಹಿತಿಕೆ ಇಲಾಖಾ

ಪೊಲೀಸ್ ನೇಮಕಾತಿ| ಮಂಗಳಮುಖಿಯರಿಗೂ ಅವಕಾಶ ನೀಡಿದ ಇಲಾಖೆ Read More »

ಬೆಳಗಾವಿ: ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಅರೆಸ್ಟ್

ಬೆಳಗಾವಿ: ತಾಲೂಕಿನ ಹಲಸಿ ಗ್ರಾಮದಲ್ಲಿ ಸೋಮವಾರ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂಜು ಗುರವ, ಸಚಿನ್ ಗುರವ ಹಾಗೂ ಗಣೇಶ ಪೆಡ್ನೇಕರ ಬಂಧಿತ ಆರೋಪಿಗಳು. ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಸೋಮವಾರ ಕಿಡಿಗೇಡಿಗಳು ಕನ್ನಡ ಬಾವುಟ ಸುಟ್ಟಿದ್ದರಲ್ಲದೆ, ಜಗಜ್ಯೋತಿ ಬಸವೇಶ್ವರರ ಚಿತ್ರಕ್ಕೆ ಸೆಗಣಿ ಎರಚಿದ್ದರು.

ಬೆಳಗಾವಿ: ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಅರೆಸ್ಟ್ Read More »

ಬಾನಂಗಳದ ಕೌತುಕಕ್ಕೆ ನಿಬ್ಬೆರಗಾದ ಜನ| ಊಹಾಪೋಹಗಳಿಗೆ ತೆರೆ ಎಳೆದ ವಿಜ್ಞಾನಿಗಳು| ಏನದು ಚದುರಂಗದಾಟ?

ಬೆಂಗಳೂರು: ಸೋಮವಾರ ಬಾನಂಗಳದಲ್ಲಿ ವಿಸ್ಮಯವೊಂದು ನಡೆದಿದೆ. ಕಿಲೋಮೀಟರ್‌ಗಟ್ಟಲೆ ಉದ್ದವಿದ್ದ ನಕ್ಷತ್ರಗಳ ಸಾಲಿನಂತೆ ಗೋಚರಿಸಿದ ಬೆಳಕು ಸಂಚರಿಸಿದ್ದನ್ನು ನೋಡಿ ಜನರು ಹೌಹಾರಿ ಹೋಗಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಇದು ಕಾಣಿಸಿಕೊಂಡಿದೆ. ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಜನರು ರಾತ್ರಿ ಸುಮಾರು 7 ಗಂಟೆಯಿಂದ 9 ಗಂಟೆಯ ಅವಧಿಯಲ್ಲಿ ಒಂದೊಂದು ಕಡೆ ಒಂದೊಂದು ಅವಧಿಯಲ್ಲಿ ಕೆಲಕಾಲ‌ ಕಂಡು ಈ ಬೆಳಕಿನ ಸಾಲು ಮಾಯವಾಗಿದೆ. ಈ ವಿಸ್ಮಯವನ್ನು ಕಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ನಕ್ಷತ್ರಗಳ ಸಾಲನ್ನು ತಾವು

ಬಾನಂಗಳದ ಕೌತುಕಕ್ಕೆ ನಿಬ್ಬೆರಗಾದ ಜನ| ಊಹಾಪೋಹಗಳಿಗೆ ತೆರೆ ಎಳೆದ ವಿಜ್ಞಾನಿಗಳು| ಏನದು ಚದುರಂಗದಾಟ? Read More »

ಸುಳ್ಯ: ಅಮಲಿಗಾಗಿ ಫೆವಿಕಾಲ್ ವಾಸನೆಯ ಸೇವನೆ| ಅಪ್ರಾಪ್ತರ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು|

ಸುಳ್ಯ: ಇಲ್ಲಿನ ಜಯನಗರ ಮನೆಯೊಂದರಲ್ಲಿ ಸುಮಾರು 9, 10, ವರ್ಷದ ಮೂವರು ಬಾಲಕರು ಫೆವಿಕಲ್ ಗಮ್ ವಾಸನೆ ಸೇವನೆ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳಿಯರು ಬಾಲಕರನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ ಘಟನೆ ನಿನ್ನೆ ವರದಿಯಾಗಿದೆ. ಅಮಲಿಗಾಗಿ ಅಪ್ರಾಪ್ತ‌ ಬಾಲಕರು ಮಾದಕ ನಶೆಯ ಮೊರೆ ಹೋಗಿದ್ದಾರೆಂದು ಹೇಳಲಾಗುತ್ತಿದ್ದು, ಬಾಲಕರನ್ನು ವಿಚಾರಣೆ ಮಾಡಿದ ಪೊಲೀಸರು ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿ ತಿಳಿಹೇಳಿ ಕಳಿಸಿರುವುದಾಗಿ ತಿಳಿದುಬಂದಿದೆ. ಸುಳ್ಯ ನಗರದ ಹಲವೆಡೆ ಗೌಪ್ಯವಾಗಿ ಮಾದಕ ನಶೆಯ ನಂಟು ಹೆಚ್ಚಾಗುತ್ತಿದ್ದು, ಅಪ್ರಾಪ್ತ ಮಕ್ಕಳು ಈ

ಸುಳ್ಯ: ಅಮಲಿಗಾಗಿ ಫೆವಿಕಾಲ್ ವಾಸನೆಯ ಸೇವನೆ| ಅಪ್ರಾಪ್ತರ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು| Read More »