ಸುಳ್ಯ: ಶಿಸ್ತು ಉಲ್ಲಂಘನೆ ನೆಪದಲ್ಲಿ ವಿದ್ಯಾರ್ಥಿಗೆ ಹಲ್ಲೆ| ಮನಬಂದಂತೆ ಥಳಿಸಿದ ಆಡಳಿತ ಮಂಡಳಿಯ ಸದಸ್ಯ|

Ad Widget ... ..

ಸುಳ್ಯ: ಇಲ್ಲಿನ ಗೂನಡ್ಕದ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಆಡಳಿತ ಮಂಡಳಿಯ ಸದಸ್ಯನೋರ್ವ ಶಿಸ್ತು ಉಲ್ಲಂಘನೆ ನೆಪದಲ್ಲಿ ವಿದ್ಯಾರ್ಥಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

Ad Widget

ಮೂರನೆಯ ತರಗತಿಯ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದು, ಘಟನೆಯಿಂದ ಬಾಲಕನ ಬೆನ್ನು ಮತ್ತು ಕಾಲಿನ ಭಾಗಗಳಿಗೆ ಏಟಾಗಿದ್ದು, ಗಾಯಗಳು ಕಂಡುಬರುತ್ತಿದೆ.

ವಿದ್ಯಾರ್ಥಿ ಶಾಲೆ ಬಿಟ್ಟು ಮನೆಗೆ ತೆರಳಿ ಬಟ್ಟೆ ಬದಲಿಸುವ ವೇಳೆ ಈ ಗಾಯದ ಗುರುತು ಕಾಣಿಸಿದ್ದು ವಿದ್ಯಾರ್ಥಿಯ ತಾಯಿ ಕೇಳಿದಾಗ ಮೊದಲು ಸತ್ಯವನ್ನು ಹೇಳಲು ಹಿಂಜರಿದಿದ್ದು, ಒತ್ತಾಯಿಸಿದಾಗ ಘಟನೆಯ ವಿವರವನ್ನು ತಿಳಿಸಿದ್ದಾನೆ ಎನ್ನಲಾಗಿದೆ.

‘ಪೆಟ್ಟು ಕೊಟ್ಟ ವಿಷಯವನ್ನು ಮನೆಯಲ್ಲಿ ತಿಳಿಸಿದರೆ ನಾಳೆ ಮತ್ತೊಮ್ಮೆ ಹೊಡೆಯುತ್ತೇನೆ’ ಎಂಬ ಬೆದರಿಕೆಯನ್ನೂ ಆ ವ್ಯಕ್ತಿ ಹಾಕಿದ್ದಾನೆ ಎಂದು ಬಾಲಕ ಪೋಷಕರ ಜೊತೆಗೆ ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆಯು ಸ್ಥಳೀಯವಾಗಿ ಪ್ರಚಾರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ನಡೆಸಿದ ಸದಸ್ಯನ ಮೇಲೆ ಆಕ್ರೋಶ ಕೇಳಿಬಂದಿದೆ.

Leave a Comment

Your email address will not be published. Required fields are marked *