Ad Widget .

ದೇಗುಲಗಳಿನ್ನು ಸರ್ಕಾರಿ ಕಾನೂನುಗಳಿಂದ ಮುಕ್ತ| ಹೊಸ ಧಾರ್ಮಿಕ ‌ಕಾನೂನು ಜಾರಿಗೆ ಚಿಂತನೆ|

Ad Widget . Ad Widget .

ಹುಬ್ಬಳ್ಳಿ : ವಿವಾದಾಸ್ಪದ ಮತಾಂತರ ವಿರೋಧಿ ಮಸೂದೆಯ ನಂತರ ರಾಜ್ಯ ಸರ್ಕಾರ ಈಗ ಧಾರ್ಮಿಕ ಸ್ಪರ್ಶ ಹೊಂದಿರುವ ಮತ್ತೊಂದು ಕಾನೂನನ್ನ ತರಲು ಯೋಜಿಸುತ್ತಿದೆ. ಈ ಬಾರಿ ಹಿಂದೂ ದೇವಾಲಯಗಳನ್ನು ಸರ್ಕಾರಿ ಕಾನೂನುಗಳಿಂದ ಮುಕ್ತಗೊಳಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

Ad Widget . Ad Widget .

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಮ್ಮ ಸರ್ಕಾರವು ಹಿಂದೂ ದೇವಾಲಯಗಳನ್ನು ಕಾನೂನುಗಳು ಮತ್ತು ನಿಯಮಗಳಿಂದ ಮುಕ್ತಗೊಳಿಸಲಿದ್ದು, ದೇವಾಲಯದ ಆಡಳಿತ ಮಂಡಳಿಗಳು ತಮ್ಮ ಆದಾಯವನ್ನ ಅಭಿವೃದ್ಧಿಗೆ ಬಳಸಿಕೊಳ್ಳಲು ಅನುಮತಿ ಪಡೆಯುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಿಎಂ ಬೊಮಾಯಿ ಈ ಘೋಷಣೆ ಮಾಡಿದ್ದು, ‘ಹಿಂದೂ ದೇಗುಲಗಳನ್ನು ಕಾನೂನಿನಿಂದ ಮುಕ್ತ ಮಾಡುತ್ತೇವೆ. ಇವುಗಳಿಗೆ ಸರ್ಕಾರದ ನಿಯಂತ್ರಣ ಬಿಟ್ಟರೆ ಏನು ಇರಲ್ಲ. ಬೇರೆ ಸಮುದಾಯದ ಪ್ರಾರ್ಥನಾ ಸ್ಥಳಕ್ಕೆ ಸ್ವತಂತ್ರವಿರುವ ರೀತಿ ಹಿಂದೂ ದೇವಾಲಯಗಳನ್ನೂ ಸ್ವತಂತ್ರ ಮಾಡುತ್ತೇವೆ. ಬಜೆಟ್‌ ಅಧಿವೇಶನದೊಳಗೆ ಇದಕ್ಕೆ ಕಾನೂನು ಸ್ವರೂಪ ನೀಡುತ್ತೇವೆ’ ಎಂದರು.

ಇನ್ನು ‘ದೇವಸ್ಥಾನದ ಹಣ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಬೇಕು. ನಮ್ಮ ಅಜೆಂಡಾ ಸ್ಪಷ್ಟವಾಗಿದೆ ಅದನ್ನು ಜಾರಿಗೆ ತರುತ್ತೇವೆ’ ಎಂದರು. ಇದರಿಂದಾಗಿ ಹಿಂದೂ ಧಾರ್ಮಿಕ ಮತ್ತು ‌ದತ್ತಿ ಇಲಾಖೆಯ ಅಧೀನದಲ್ಲಿರುವ ಶ್ರದ್ಧಾ‌ಕೇಂದ್ರಗಳು‌ ಸರ್ಕಾರಿ ಕಾನೂನುಗಳಿಂದ ಮುಕ್ತವಾಗುವ ಸೂಚನೆ ಕಂಡುಬಂದಿದೆ.

Leave a Comment

Your email address will not be published. Required fields are marked *