Ad Widget .

ಸರಸಕ್ಕೆ ಬಾರದ ಪತ್ನಿಯ ಬರ್ಬರವಾಗಿ ಹತ್ಯೆಗೈದ 80 ರ ವೃದ್ಧ!

Ad Widget . Ad Widget .

Ad Widget . Ad Widget .

ಡಿಜಿಟಲ್ ಡೆಸ್ಕ್: ವಯಾಗ್ರ ಮಾತ್ರೆ ಸೇವಿಸಿದ್ದ ವೇಳೆ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡದ 61 ವರ್ಷದ ಪತ್ನಿಯನ್ನೇ 80 ವರ್ಷದ ವೃದ್ಧನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಇಟಲಿಯಲ್ಲಿ ನಡೆದಿದೆ.

ನತಾಲಿಯಾ ಕೈರೋ ಚೊಕ್​ (61) ಕೊಲೆಯಾದ ದುರ್ದೈವಿ. ಲೈಂಗಿಕ ಕ್ರಿಯೆಗೆ ಒಪ್ಪಲಿಲ್ಲ ಅಂತಾ ಪತಿ ವಿಟೋ ಕಂಗಿನಿ (80) ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಇಬ್ಬರು ಇತ್ತೀಚೆಗಷ್ಟೇ ಕ್ರಿಸ್​ಮಸ್​ ಆಚರಣೆ ಮಾಡಿದ್ದರು. ಇದೇ ಸಂದರ್ಭದಲ್ಲಿ ವಿಟೋ, ಪತ್ನಿ ನತಾಲಿಯಾ ಜತೆ ಲೈಂಗಿಕ ಕ್ರಿಯೆ ನಡೆಸಲು ಬಯಸಿದ್ದ. ತನ್ನ ಬಯಕೆಯನ್ನು ಪತ್ನಿಯ ಬಳಿಯು ಹೇಳಿಕೊಂಡಿದ್ದ. ಆಕೆಯು ಕೂಡ ಸಮ್ಮತಿ ನೀಡಿದ್ದಳು. 80ನೇ ವಯಸ್ಸಿನಲ್ಲಿ ಲೈಂಗಿಕ ಶಕ್ತಿ ಕುಂದಿರುವ ಹಿನ್ನೆಲೆಯಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ವಿಟೋ ವಯಾಗ್ರ ಮಾತ್ರೆ ತೆಗೆದುಕೊಂಡು ಪತ್ನಿಗಾಗಿ ಕಾಯುತ್ತಿದ್ದ.

ಪತ್ನಿ ಬಂದೊಡನೆ ಆಕೆಯನ್ನು ತಬ್ಬಿಕೊಂಡು ಬೆಡ್​ರೂಮ್​ಗೆ ತೆರಳಿದ. ಆದರೆ, ಪತ್ನಿ ನತಾಲಿಯಾ ಗಂಡನನ್ನು ಪಕ್ಕಕ್ಕೆ ತಳ್ಳಿ, ಈಗ ಬೇಡ ಆಮೇಲೆ ಎಂದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಪತ್ನಿಯು ಕೂಡ ಗಂಡನ ಮೇಲೆ ಕೂಗಾಡಿದ್ದಾಳೆ. ಇತ್ತ ಗಂಡನು ಕೂಡ ಪತ್ನಿಯ ಮೇಲೆ ಕೋಪಗೊಂಡು, ತಾಳ್ಮೆ ಕಳೆದುಕೊಂಡು ಪಕ್ಕದಲ್ಲೇ ಇದ್ದ ಚಾಕುವಿನಿಂದ ಚುಚ್ಚಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಘಟನೆ ನಡೆದ ಎರಡು ದಿನಗಳವರೆಗೆ ಏನೂ ಆಗಿಲ್ಲ ಎಂಬಂತೆ ವಿಟೋ ಆಚೆ ಓಡಾಡಿಕೊಂಡಿದ್ದ. ಆಮೇಲೆ ತನ್ನ ಪಕ್ಕದಲ್ಲಿದ್ದವರಿಗೆ ತಾನು ಪತ್ನಿಯನ್ನು ಕೊಂದಿರುವುದಾಗಿಯು ಮತ್ತು ಪೊಲೀಸರಿಗೆ ಮಾಹಿತಿ ನೀಡುವಂತೆಯೂ ಹೇಳಿದ್ದ. ಇದನ್ನು ಕೇಳಿ ಜತೆಗಿದ್ದವರು ಬೆದರಿ ಹೋಗಿದ್ದರು. ಬಳಿಕ ಈ ಮಾಹಿತಿ ಪೊಲೀಸರಿಗೆ ತಿಳಿಯಿತು. ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ನತಾಲಿಯಾ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ತಕ್ಷಣ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ದೇಹಕ್ಕೆ ಅನೇಕ ಬಾರಿ ಚುಚ್ಚಿರುವುದಲ್ಲದೇ, ಹೃದಯಭಾಗಕ್ಕೆ ನೇರವಾಗಿ ಚಾಕು ಚುಚ್ಚಿದ್ದಾರೆ. ಸ್ಥಳದಲ್ಲಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿ ವಿಟೋನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Comment

Your email address will not be published. Required fields are marked *