Ad Widget .

ದೈವಸನ್ನಿಧಿಗೆ ಕಾಂಡೋಮ್, ಅವಹೇಳನಕಾರಿ ಬರಹ ಹಾಕಿ ಅಪಚಾರ ಮಾಡುತ್ತಿದ್ದ ವ್ಯಕ್ತಿಯ ಬಂಧನ| ಈತನ ವಿಕೃತ ಕೃತ್ಯ ಬಯಲಿಗೆಳೆದ ಮಂಗಳೂರು ಪೊಲೀಸರು|

Ad Widget . Ad Widget .

ಮಂಗಳೂರು: ನಗರದ ಹಲವು ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಕಾಂಡೋಮ್, ಫ್ಯಾನ್ಸಿ ಕರೆನ್ಸಿ ನೋಟು ಹಾಗೂ ಅದರ ಮೇಲೆ ಅವಹೇಳನಕಾರಿ ಬರಹಗಳು ಹಾಗೂ ಬಿಳಿ ಚೀಟಿಯಲ್ಲಿ ಅವಹೇಳನಕಾರಿ ಬರಹಗಳನ್ನು ಹಾಕಿ ವಿಕೃತಿ ಮೆರೆಯುತ್ತಿದ್ದ ವ್ಯಕ್ತಿಯನ್ನು ಮಂಗಳೂರು‌ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ ಹಲವು ಪೋಲಿಸ್ ಠಾಣೆಗಳಲ್ಲಿ ಈ ಬಗ್ಗೆ ಪ್ರಕರಣಗಳು ದಾಖಲಾಗಿತ್ತು. ಇದೀಗ ಈ ಎಲ್ಲಾ ಕೃತ್ಯಗಳು ಒಬ್ಬನೇ ಮಾಡಿರುವುದು ಪೋಲಿಸರ ತನಿಖೆಯಲ್ಲಿ ಬಯಲಾಗಿದ್ದು, ಆರೋಪಿ ದೇವದಾಸ್ ದೇಸಾಯಿ (62 ವರ್ಷ) ಎಂಬಾತ ಬಂಧನಕ್ಕೆ ಒಳಗಾಗಿದ್ದಾನೆ.

ಮಂಗಳೂರು ನಗರ ಪೋಲಿಸ್ ಕಮೀಷನರೇಟ್ ವ್ಯಾಪ್ತಿಯ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅ.ಕ್ರ . 02/2021, ಮಂಗಳೂರು ಪೂರ್ವ ಪೊಲೀಸ್ ಠಾಣೆ ಅ.ಕ್ರ . 03/2021, ಉಳ್ಳಾಲ ಪೊಲೀಸ್ ಠಾಣಾ ಅ.ಕ್ರ . 08/2021, ಉರ್ವಾ ಪೊಲೀಸ್ ಠಾಣಾ ಅ.ಕ್ರ . 14/2021, ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅ.ಕ್ರ . 177/2021 ರಂತೆ ಹಲವು ಪ್ರಕರಣಗಳು ದಾಖಲಾಗಿದ್ದವು.
ದೈವಸ್ಥಾನ, ಕೊರಗಜ್ಜ ಕಟ್ಟೆ, ಮಸೀದಿ, ಸಿಖ್ ಗುರುದ್ವಾರ( ಕೂಳೂರು) ಮುಂತಾದ ಕಡೆಗಳಲ್ಲಿನ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರ, ಏಸುವಿನ ಕುರಿತ ಲೇಖನ ಹಾಕಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಮೂಲತಃ ಹುಬ್ಬಳಿಯವನಾದ ಈತನ ಕುಟುಂಬ ಕಲಹದಿಂದ ಸದ್ಯ ಮಂಗಳೂರು ನಗರ ಹೊರವಲಯದ ಕೋಟೆಕಾರುವಿನ ಕೊಂಡಾಣ ಎಂಬಲ್ಲಿ ಏಕಾಂಗಿಯಾಗಿ ವಾಸವಾಗಿದ್ದಾನೆ.

ಮೂಲತಃ ಹುಬ್ಬಳ್ಳಿಯ ಮೂಲದವನಾದ ದೇವದಾಸ್ ದೇಸಾಯಿ, ಕುಟುಂಬ ಕಲಹದಿಂದ ಕಳೆದ 22 ವರ್ಷಗಳಿಂದ ಮಂಗಳೂರಿನಲ್ಲಿ ಏಕಾಂಗಿಯಾಗಿ ವಾಸವಾಗಿದ್ದಾನೆ. ಹಲವು ವರ್ಷಗಳ ಕಾಲ ಆಟೋ ರಿಕ್ಷಾ, ಲಾರಿ, ಕಾರು ಚಾಲಕನಾಗಿ ಕೆಲಸ ಮಾಡಿದ್ದ ದೇವದಾಸ್ ದೇಸಾಯಿ, ಸದ್ಯ ಗುಜರಿ ಪೇಪರ್ ಬಾಕ್ಸ್‌ಗಳನ್ನು ಮಾರಿಕೊಂಡು ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದಾನೆ.

ಕಳೆದ ಹಲವು ತಿಂಗಳುಗಳಿಂದ ಮಂಗಳೂರಿನ ವಿವಿಧ ದೇವಸ್ಥಾನ, ದೈವಸ್ಥಾನಗಳ ಕಾಣಿಕೆ ಹುಂಡಿಗಳಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಪೊಲೀಸರು ತನಿಖೆ ನಡೆಸಿದರೂ ಕಾಂಡೋಮ್ ಹಾಕಿದ ವ್ಯಕ್ತಿ ಯಾರೆಂಬುವುದು ತಿಳಿದುಬಂದಿರಲಿಲ್ಲ.

ಆದರೆ ಕಳೆದರೆಡು ದಿನಗಳ ಹಿಂದೆ ಮಂಗಳೂರಿನ ಮಾರ್ನೆಮಿ ಕಟ್ಟೆಯಲ್ಲಿರುವ ಕೊರಗಜ್ಜ ದೈವದ ಕಾಣಿಕೆ ಹುಂಡಿಯಲ್ಲೂ ಕಾಂಡೋಮ್ ಪತ್ತೆಯಾಗಿದ್ದು, ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ, ತಡರಾತ್ರಿ ದೇವದಾಸ್ ದೇಸಾಯಿ ಕಾಣಿಕೆ ಹುಂಡಿಗೆ ಹಾಕಿರುವುದು ಬೆಳಕಿಗೆ ಬಂದಿದೆ.

ಆರೋಪಿ ದೇವದಾಸ್ ದೇಸಾಯಿಯನ್ನು ವಿಚಾರಣೆಗೊಳಪಡಿಸಿದಾಗ ಸುಮಾರು 18 ಕಡೆಗಳಲ್ಲಿ ಕಾಂಡೋಮ್, ಭಿತ್ತಿಪತ್ರ, ಏಸುವಿನ ಕುರಿತ ಲೇಖನ ಹಾಕಿರುವುದು ಗೊತ್ತಾಗಿದೆ.

ಮಂಗಳೂರಿನ ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ, ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ, ಕೊಂಡಾಣ ದೈವಸ್ಥಾನ, ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್‌ನ ಬಳಿ ಕಾಣಿಕೆ ಡಬ್ಬಿ, ಕಲ್ಲುರ್ಟಿ ದೈವಸ್ಥಾನ, ಒಮೆಗಾ ಆಸ್ಪತ್ರೆ ಬಳಿ, ಪಂಪ್ ವೆಲ್ ಬಳಿ, ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ, ಕಲ್ಲಾಫು ನಾಗನಕಟ್ಟೆಯಲ್ಲಿ ಅಪಚಾರ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ.

Leave a Comment

Your email address will not be published. Required fields are marked *