Ad Widget .

ಪ್ರಧಾನಿ ಮೋದಿಗಾಗಿ 12ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರು ಖರೀದಿ

Ad Widget . Ad Widget .

ನವದೆಹಲಿ:- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 12 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಐಶಾರಾಮಿ ಕಾರನ್ನು ಬಳಕೆ ಮಾಡಲಾರಂಭಿಸಿದ್ದಾರೆ. ಮರ್ಸಿಡೇಸ್ ಬೆಂಜ್ ಕಂಪೆನಿಯ ಮೇ ಬ್ಯಾಕ್ ಎಸ್650 ಸರಣಿಯ ಶಸ್ತ್ರಸ್ತ್ರ ಸಜ್ಜಿತ ಕಾರನ್ನು ಪ್ರಧಾನಿ ಅವರಿಗಾಗಿ ಮತ್ತಷ್ಟು ಮಾರ್ಪಡಿಸಲಾಗಿದೆ.

Ad Widget . Ad Widget .

ಈಗಾಗಲೇ ರೆಂಜ್‍ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರುಗಳು ಪ್ರಧಾನಿ ಅವರ ಕಚೇರಿಯಲ್ಲಿವೆ. ಅವುಗಳ ಜೊತೆ ಈಗ ಮರ್ಸಿಡೆಸ್ ಬೆಂಜ್ ಸೇರ್ಪಡೆಯಾಗಿದೆ. ಇತ್ತೀಚೆಗೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟೀನ್ ಭಾರತಕ್ಕೆ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಮೇಬ್ಯಾಕ್ ಕಾರನ್ನು ಬಳಸಿದ್ದರು. ಹೈದರಾಬಾದ್ ಹೌಸ್‍ನಲ್ಲಿ ಹೊಸ ಕಾರಿನೊಂದಿಗೆ ಮೋದಿ ಕಾಣಿಸಿಕೊಂಡಿದ್ದರು. ಅದೇ ಕಾರು ಇತ್ತೀಚೆಗೆ ಪ್ರಧಾನಿ ಅವರ ಕ್ಯಾನ್‍ವೇನಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.

ಮೇಬ್ಯಾಕ್ ಅತ್ಯುನ್ನತ ರಕ್ಷಣಾ ಸೌಲಭ್ಯವನ್ನು ಹೊಂದಿದೆ. ಕಾರು ಎಕೆ 47 ರೈಫಲ್‍ನ ನಿರಂತರ ದಾಳಿಯನ್ನು ಹಾಗೂ ಸೆಲ್ ಆಕ್ರಮಣವನ್ನು ತಡೆದುಕೊಳ್ಳಬಲ್ಲದಾಗಿದೆ. ನವೀಕರಿಸಿದ ಕಿಟಕಿಗಳು ಪಾಲಿಕಾರ್ಬೋನೇಟ್‍ನಿಂದ ಲೇಪಿತವಾಗಿದ್ದು, ಗಟ್ಟಿಯಾದ ಸ್ಟೀಲ್ ಕೋರ್ ಬುಲೆಟ್‍ಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ.

Leave a Comment

Your email address will not be published. Required fields are marked *