Ad Widget .

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ವೇಳೆ ಕಳಚಿ‌ ಬಿದ್ದ ಧ್ವಜ|

Ad Widget . Ad Widget .

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ನಡೆದ ಧ್ವಜಾರೋಹಣದ ವೇಳೆ ಕಾಂಗ್ರೆಸ್ ಬಾವುಟ ಕೆಳಗೆ ಬಿದ್ದಿದ್ದು, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಡಿದಿದ್ದಾರೆ.

Ad Widget . Ad Widget .

ಮಂಗಳವಾರ ದೆಹಲಿಯ ಕಾಂಗ್ರೆಸ್ ಕಚೇರಿ ಮುಂದೆ 137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಈ ಎಡವಟ್ಟು ಸಂಭವಿಸಿದ್ದು, ನೆಲಕ್ಕೆ ಬೀಳದಂತೆ ಸೋನಿಯಾ ಗಾಂಧಿ ಬಾವುಟವನ್ನು ಹಿಡಿದಿದ್ದಾರೆ.

ಘಟನೆ ಬೆನ್ನಲ್ಲೇ ಎಚ್ಚೆತ್ತ ಕಾರ್ಯಕರ್ತರು ಬಾವುಟವನ್ನು ಸರಿಪಡಿಸಿ ಮತ್ತೊಮ್ಮೆ ಧ್ವಜಾರೋಹಣಕ್ಕೆ ವ್ಯವಸ್ಥೆ ಮಾಡಿದರು. ಭಾರತದ ತ್ರಿವರ್ಣ ಧ್ವಜವನ್ನು ಹೋಲುವ ರೀತಿ ಇರುವ ಕಾಂಗ್ರೆಸ್ ಧ್ವಜಕ್ಕೆ ಯಾವುದೇ ಹಾನಿ ಆಗಿಲ್ಲವೆಂದು ಕಾಂಗ್ರೆಸ್ ಮುಖಂಡರು ಖಚಿತಪಡಿಸಿಕೊಂಡರು.

ಘಟನೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಖಜಾಂಚಿ ಪವನ್ ಬನ್ಸಾಲ್ ಮುಂತಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *