Ad Widget .

ಮಂಗಳೂರು: ಸಿನಿಮಾ ಪ್ರದರ್ಶನಕ್ಕೆ ತೆರೆ ಎಳೆದ “ಜ್ಯೋತಿ”,|50 ವರ್ಷದ ಬಣ್ಣದ ಪಯಣ ಇನ್ನು ನೆನಪು ಮಾತ್ರ|

Ad Widget . Ad Widget .

ಮಂಗಳೂರು: ‘ತುಳು ಸಿನಿಮಾ’ ಎಂದ ತಕ್ಷಣ ನೆನಪಾಗುವುದು ಮಂಗಳೂರಿನ ಹೃದಯಭಾಗದಲ್ಲಿದ್ದ ‘ಜ್ಯೋತಿ’ ಚಿತ್ರಮಂದಿರ. ಎಲ್ಲರ ಅಚ್ಚುಮೆಚ್ಚಿನ ಈ ಥಿಯೇಟರ್‌ ಕೋವಿಡ್‌ ಲಾಕ್‌ಡೌನ್‌ ಬಳಿಕ ನೆನಪಿನಂಗಳಕ್ಕೆ ಜಾರಿದೆ. ಬಹುತೇಕ ತುಳು ಸಿನಿಮಾಗಳ ಸೋಲು- ಗೆಲುವಿನಲ್ಲಿ ಪಾಲು ಪಡೆದ ಈ ಒಂಟಿ ಪರದೆ ಮರೆಯಾಗಿರುವುದು ತುಳು ಚಿತ್ರರಂಗಕ್ಕೆ ದೊಡ್ಡ ಹೊಡೆತ.

Ad Widget . Ad Widget .

50 ವರ್ಷಗಳ ಕಾಲ ನಾನಾ ಭಾಷೆಯ ಸಿನಿಮಾಗಳನ್ನು ಪ್ರದರ್ಶಿಸಿದ್ದ ‘ಜ್ಯೋತಿ’, ನಗರದ ಪ್ರಮುಖ ವೃತ್ತವೊಂದರ ಹೆಸರಾಗಿದೆ. ಚಿತ್ರಮಂದಿರದ ಮುಂದಿನ ವೃತ್ತವನ್ನೇ ಜನರು ‘ಜ್ಯೋತಿ’ ವೃತ್ತ ಎನ್ನುತ್ತಿದ್ದರು. ಹೀಗೆ ಕೋಸ್ಟಲ್‌ವುಡ್‌ ಸಿನಿಮಾಗಳ ಹೆಬ್ಬಾಗಿಲಾಗಿದ್ದ ‘ಜ್ಯೋತಿ’ಯ ಬಾಗಿಲು ಈಗ ಮುಚ್ಚಿದೆ.

ಮಂಗಳೂರು ನಗರದಲ್ಲಿರುವ ರಮಾಕಾಂತಿ ಮತ್ತು ರೂಪವಾಣಿ ಟಾಕೀಸ್‌ಗಳು ತುಳು ಸಿನಿಮಾಗಳಿಗೆ ಸಿಗುತ್ತದೆಯಾದರೂ ಅಲ್ಲಿಗೆ ಬರಲು ಪ್ರೇಕ್ಷಕರು ಹಿಂದೇಟು ಹಾಕುತ್ತಾರೆ. ಆದರೆ, ತುಳು ಸಿನಿಮಾಗಳನ್ನು ಅಲ್ಲಿಯೇ ಬಿಡುಗಡೆ ಮಾಡದೆ ಅನ್ಯ ದಾರಿಯಿಲ್ಲ. ಹವಾನಿಯಂತ್ರಿತವಾಗಿ ನವೀಕರಣಗೊಂಡ ನಗರದ ಸುಚಿತ್ರ ಮತ್ತು ಪ್ರಭಾತ್‌ ಚಿತ್ರಮಂದಿರಗಳು ಹಲವು ತುಳು ಸಿನಿಮಾಗಳ ಬಿಡುಗಡೆಗೆ ಸಾಕ್ಷಿಯಾಗಿದ್ದವು. ಆದರೆ, ಈ ಚಿತ್ರಮಂದಿರಗಳು ಪ್ರಸ್ತುತ ತುಳು ಚಿತ್ರಗಳಿಂದ ಅಂತರ ಕಾಯ್ದುಕೊಂಡಿವೆ.

ಒಂಟಿ ಪರದೆಯಿರುವ ಸುರತ್ಕಲ್‌, ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಿ.ಸಿ.ರೋಡ್‌, ಮೂಡುಬಿದಿರೆ, ಕಾರ್ಕಳ, ಉಡುಪಿ, ಕಾಸರಗೋಡು ಟಾಕೀಸ್‌ಗಳಲ್ಲಿ ಮಾತ್ರ ತುಳು ಚಿತ್ರಗಳಿಗೆ ಅವಕಾಶವಿದೆ. ಬಹುಪರದೆಯನ್ನು ಹೊಂದಿರುವ ಮಂಗಳೂರಿನ ಬಿಗ್‌ ಸಿನಿಮಾಸ್‌, ಪಿವಿಆರ್‌, ಸಿನೆಪೊಲಿಸ್‌, ಮಣಿಪಾಲದ ಐನಾಕ್ಸ್‌, ಕುಂದಾಪುರ ಮತ್ತು ಮಣಿಪಾಲದ ಬಿಗ್ ಸಿನಿಮಾಸ್‌ನಲ್ಲಿ ತುಳು ಚಿತ್ರಕ್ಕೆ ಜಾಗವಿದೆ.

‘ಕರಾವಳಿಯಲ್ಲಿ ವರ್ಷದಿಂದ ವರ್ಷಕ್ಕೆ ಒಂಟಿ ಪರದೆಯ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿರುವುದು ತುಳುಚಿತ್ರರಂಗಕ್ಕೆ ದೊಡ್ಡ ಹೊಡೆತ. ತುಳು ಚಿತ್ರದ ಪ್ರೇಕ್ಷಕರು ಬಡವರು ಅಥವಾ ಮಧ್ಯಮ ವರ್ಗದವರು. ಮಲ್ಟಿಫ್ಲೆಕ್ಸ್‌ ಸಂಸ್ಕೃತಿಗೆ ಹೊಂದಿಕೊಳ್ಳಲು ಅವರಿಗೆ ಇನ್ನೂ ಕಾಲಾವಕಾಶ ಬೇಕು

Leave a Comment

Your email address will not be published. Required fields are marked *