Ad Widget .

ಗರ್ಲ್ ಫ್ರೆಂಡ್ ನ ಮದುವೆಯಾದಾತನ ಗುಪ್ತಾಂಗ ಕತ್ತರಿಸಿದ ಪ್ರಿಯಕರ

ನವದೆಹಲಿ : ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾದ ಎಂಬ ಒಂದೇ ಕಾರಣಕ್ಕೆ ಯುವಕನನ್ನು ಥಳಿಸಿ, ಆತನ ಗುಪ್ತಾಂಗವನ್ನು ಕಟ್ ಮಾಡಲಾಗಿದೆ.

Ad Widget . Ad Widget .

ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಯುವತಿಯನ್ನು ಮದುವೆಯಾಗಿ, ಓಡಿಹೋದ ಯುವಕನನ್ನು ಅಪಹರಿಸಿದ ಯುವತಿಯ ಕುಟುಂಬಸ್ಥರು ಥಳಿಸಿ, ಆತನ ಗುಪ್ತಾಂಗವನ್ನು ಕತ್ತರಿಸಿದ್ದಾರೆ.

Ad Widget . Ad Widget .

ಡಿಸೆಂಬರ್ 22ರಂದು ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊಲೆ ಯತ್ನ ಮತ್ತು ಅಪಹರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಪ್ರಶಾಂತ್ ಗೌತಮ್ ತಿಳಿಸಿದ್ದಾರೆ. ಹಲ್ಲೆಗೊಳಗಾದ 22 ವರ್ಷದ ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದ್ದು, ಆತನನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆ ಯುವಕ ಮತ್ತು ಯುವತಿ ಬಹಳ ದಿನಗಳಿಂದ ಪ್ರೀತಿ ಮಾಡುತ್ತಿದ್ದರು. ಮನೆಯವರು ಅವರ ಪ್ರೀತಿಗೆ ಒಪ್ಪದ ಕಾರಣದಿಂದ ದೆಹಲಿಯ ಹೊರಗೆ ಹೋಗಿ ಗುಟ್ಟಾಗಿ ಮದುವೆಯಾಗಿದ್ದರು. ಇದು ಯುವತಿಯ ಮನೆಯವರನ್ನು ಕೆರಳಿಸಿತ್ತು. ಅವರಿಬ್ಬರೂ ಮದುವೆಯಾದ ನಂತರ ಡಿಸೆಂಬರ್ 22ರಂದು ದೆಹಲಿಗೆ ಮರಳಿದ್ದರು. ಅವರ ಕುಟುಂಬಗಳಿಂದ ಅಪಾಯವಿರುವುದರಿಂದ ರಕ್ಷಣೆ ಬೇಕೆಂದು ಪೊಲೀಸರನ್ನು ಕೋರಿದ್ದರು.

Leave a Comment

Your email address will not be published. Required fields are marked *