Ad Widget .

ಶಿವಮೊಗ್ಗ:19ರ ಯುವಕನೊಂದಿಗೆ 32 ರ ಆಂಟಿ ಲವ್ವಿಡವ್ವಿ| ತಮಿಳುನಾಡಿನಲ್ಲಿ ನಡೆಯಿತು ಇವರಿಬ್ಬರ ಮದುವೆ!

Ad Widget . Ad Widget .

ಶಿವಮೊಗ್ಗ: ಪ್ರೀತಿ ಅಂದ್ರೇನೇ ಹಾಗೆ. ಯಾವ ಸಮಯದಲ್ಲಿ, ಯಾರ ಮೇಲೆ ಲವ್ ಆಗುತ್ತೆ ಅಂತ ಹೇಳಲಾಗದು. ಒಮ್ಮೆ ಪ್ರೀತಿಗೆ ಬಿದ್ದರೆ ಪ್ರಪಂಚವೇ ತಲೆಕೆಳಗಾದ್ರೂ ಪ್ರೇಮಿಗಳು ಮಾತ್ರ ಬೇರೆ ಆಗೋದಿಲ್ಲ‌ ಅನ್ನೋದಕ್ಕೆ ಈ ಕಥೆನೇ ಸಾಕ್ಷಿ. ಅಂದಹಾಗೆ‌ ಈ ಘಟನೆ ನಡೆದದ್ದು ಶಿವಮೊಗ್ಗದಲ್ಲಿ.

Ad Widget . Ad Widget .

ತಾಲೂಕಿನ ಮಲ್ಲಿಗೆನಹಳ್ಳಿ ನಿವಾಸಿ ಮಧು(19) ಆಟೋ ಓಡಿಸಿಕೊಂಡು ತಂದೆ ತಾಯಿ ಜೊತೆಯಲ್ಲೇ ಇದ್ದ. ಡಿಸೆಂಬರ್ 10ರಂದು ಮನೆಯಿಂದ ಹೋದವನ್ನು ವಾಪಸ್ ಬರಲಿಲ್ಲ.. ಪೋಷಕರು ಎಲ್ಲೋ ಪಿಕ್ನಿಕ್ ಹೋಗಿರಬೇಕು, ಬರ್ತಾನೆ ಅಂತಾ ಸುಮ್ಮನಾಗಿದ್ದಾರೆ. ಮೂರ್ನಾಲ್ಕು ದಿನ ಆಗ್ತಿದ್ದಂತೆ ಊರಲ್ಲೆಲ್ಲಾ ಗುಸು ಗುಸು ಶುರುವಾಗಿದೆ. ಮಧುಗೆ ವಿಧವೆ ಆಂಟಿಯೊಬ್ಬಳ ಜೊತೆ ಇದ್ದ ಲವ್ ಸ್ಟೋರಿ ಊರಿಗೆಲ್ಲಾ ಹಬ್ಬಿದೆ.

ಮಲ್ಲಿಗೆನಹಳ್ಳಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಆರ್ಚನಾ ಆಂಟಿಯೊಂದಿಗೆ ಮಧು ಪರಿಚಯವಾಗಿದೆ. ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿದೆ. ಅಂದಹಾಗೆ ಮಧು ನಾಪತ್ತೆಯಾದ ದಿನದಿಂದಲೂ ಆಂಟಿ ದಿನಸಿ ಅಂಗಡಿಯೂ ಕ್ಲೋಸ್ ಆಗಿದೆ. ಮೊದಲೇ ಅನುಮಾನಿಸುತ್ತಿದ್ದ ಗ್ರಾಮಸ್ಥರು ಯಾವಾಗ ಇಬ್ಬರು ಒಂದೇ ದಿನ ಕಾಣೆಯಾಗಿದ್ದಾರೋ, ಗ್ರಾಮಸ್ಥರ ಅನುಮಾನ ನಿಜವಾಗಿದೆ. ಇಬ್ಬರು ಓಡಿಹೋಗಿರುವ ಸುದ್ದಿ ಗ್ರಾಮಕ್ಕೆಲ್ಲಾ ಹಬ್ಬಿದೆ. ಇದೀಗ ಮಧು ತಾಯಿ ಅರ್ಚನಾ ನನ್ನ ಮಗನ ದಾರಿ ತಪ್ಪಿಸಿ ಕರೆದುಕೊಂಡು ಹೋಗಿದ್ದಾಳೆ ಅಂತಾ ಕಿಡ್ಯ್ನಾಪ್ ಪ್ರಕರಣ ದಾಖಲಿಸಿದ್ದಾರೆ.

ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮಧು ಹಾಗೂ ಆರ್ಚನಾ ಆಂಟಿ ತಮಿಳನಾಡಿಗೆ ಹೋಗಿ ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಇಬ್ಬರು ಮದುವೆಯಾಗಿರೋ ಫೋಟೋಗಳು ಖಾಕಿ ಕೈ ತಲುಪಿದ್ದು ತನಿಖೆ ಮುಂದುವರಿಸಿದ್ದಾರೆ.

ಇತ್ತ ಹೆತ್ತವರು ಮಾತ್ರ ಮಗ ಬರ್ತಾನೆ. ಮೊದಲಿನಂತೆ ನಮ್ಮ ಜೊತೆ ಬಂದು ಇರ್ತಾನೆ ಅನ್ನೋ ಆಸೆ ಇಟ್ಟುಕೊಂಡ್ದಿದ್ದಾರೆ. ಆದರೆ ಮಗ ಮಧು ಮಾತ್ರ ವಿಧವೆ ಆಂಟಿಯೊಂದಿಗೆ ಗಪ್‌ ಚುಪ್‌ ಆಗಿ ಮದುವೆಯಾಗಿ ತಮಿಳುನಾಡಲ್ಲೇ ಸೆಟ್ಲ್ ಆಗಿದ್ದಾನೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *