ಚೆನ್ನೈ: ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಕೆ.ಎಸ್.ಸೇತುಮಾಧವನ್ ಇಂದು ವಿಧಿವಶರಾಗಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಮಲಯಾಳಂನ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕೆ.ಎಸ್.ಸೇತುಮಾಧವನ್(90 ವರ್ಷ) ಇಂದು ನಿಧನರಾಗಿದ್ದಾರೆ.
1931ರಲ್ಲಿ ಕೇರಳದ ಉತ್ತರ ಪಾಲಕ್ಕಾಡ್ ಜಿಲ್ಲೆಯಲ್ಲಿ ಜನಿಸಿದ ಅವರು ಕೆ. ರಾಮನಾಥ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು. 1960ರಲ್ಲಿ ಸಿಂಹಳೀಸ್ ಚಲನಚಿತ್ರ ‘ವೀರವಿಜಯ’ ಮೂಲಕ ಸ್ವತಂತ್ರ ಚಲನಚಿತ್ರ ನಿರ್ಮಾಪಕರಾಗಿ ತಮ್ಮನ್ನು ಪ್ರಾರಂಭಿಸಿದ ನಂತರ, ಅವರು ತಮ್ಮ ಮೊದಲ ಮಲಯಾಳಂ ಚಿತ್ರ ‘ಜ್ಞಾನ ಸುಂದರಿ’ಯನ್ನು ನಿರ್ದೇಶಿಸಿದರು.
10 ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಹಲವಾರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಕೆ.ಎಸ್. ಸೇತುಮಾಧವನ್ ಅವರು 2009 ರಲ್ಲಿ ಕೇರಳ ಸರ್ಕಾರ ಸ್ಥಾಪಿಸಿದ ಚಲನಚಿತ್ರ ಕ್ಷೇತ್ರದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ಜೆ.ಸಿ. ಡೇನಿಯಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇಂತಹ ಕೆ ಎಸ್ ಸೇತುಮಾಧವನ್ ಇನ್ನಿಲ್ಲವಾಗಿದ್ದಾರೆ..