Ad Widget .

ಸುಳ್ಯ: ಸಿನಿಮೀಯ ಶೈಲಿಯಲ್ಲಿ ರಿಕ್ಷಾ ದರೋಡೆಗೆ ಯತ್ನ| ಆರೋಪಗಳನ್ನು ಬಂಧಿಸಿದ ಕೇರಳ ಪೊಲೀಸರು|

Ad Widget . Ad Widget .

ಸುಳ್ಯ: ಬಾಡಿಗೆಗೆಂದು ಕೊಂಡೊಯ್ದು ರಿಕ್ಷಾವನ್ನು ನಂತರ ಚಾಲಕನಿಗೆ ಥಳಿಸಿ ರಿಕ್ಷಾ ಕೊಂಡೊಯ್ಯುತ್ತಿದ್ದಾಗ ಆರೋಪಿಗಳು ಕೇರಳ ಪೊಲೀಸರಿಗೆ ಸೆರೆ ಸಿಕ್ಕ ಘಟನೆ ಸುಳ್ಯದಲ್ಲಿ ನಡೆದಿದೆ.

Ad Widget . Ad Widget .

ಅಜ್ಜಾವರದಿಂದ ಆಟೋರಿಕ್ಷಾವನ್ನು ಮಂಡೆಕೋಲಿಗೆ ಬಾಡಿಗೆಗೆಂದು ಇಬ್ಬರು ಕರೆದೊಯ್ದಿದ್ದರು. ಆಟೋ ಅಡ್ಪಂಗಾಯದ ಬಳಿ ತಲುಪುತ್ತಿದ್ದಾಗ ಆಟೋದಲ್ಲಿದ್ದ ವ್ಯಕ್ತಿ ಏಕಾಏಕಿ ಆಟೋ ಚಾಲಕ ಹುಸೈನ್ ಮೇಲೆ ಹಲ್ಲೆ ಮಾಡಿದ್ದಾರೆ.

ಆ ಬಳಿಕ ಆಟೋಚಾಲಕನ ಬಳಿಯಲ್ಲಿದ್ದ ಮೊಬೈಲ್ ಹಾಗೂ ಹಣವನ್ನು ಕಿತ್ತು ಕೇರಳದ ಕಡೆಗೆ ಆಟೋ ಸಮೇತ ಪರಾರಿಯಾಗಿದ್ದಾನೆ. ಘಟನೆ ತಿಳಿದ ಸ್ಥಳೀಯರು ಆದೂರು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ ಹಿನ್ನೆಲೆ ಆದೂರು ಪೊಲೀಸರು ದೇವರಡ್ಕ ಪುದಿಯಂಬಲಂ ಎಂಬಲ್ಲಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment

Your email address will not be published. Required fields are marked *