ಬೆಳ್ತಂಗಡಿ : ಯುವಕನೊರ್ವ ಇದ್ದಕ್ಕಿದ್ದಂತೆ ತನ್ನ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳ್ತಂಗಡಿಯ ಜಾರಿಗೆ ಬೈಲ್ ನಲ್ಲಿ ನಡೆದಿದೆ. ಮೃತಪಟ್ಟ ಯುವಕ ಶಾಕಿರ್(24) ಎಂದು ತಿಳಿದು ಬಂದಿದೆ.
ಎಂದಿನಂತೆ ಬೆಳಿಗ್ಗೆ ನಮಾಝ್ ಮಾಡಲು ಜಾರಿಗೆ ಬೈಲ್ ಮಸೀದಿಗೆ ತೆರಳಿದ್ದರು. ಮಸೀದಿಯಿಂದ ಬಂದ ಯುವಕ ತಾಯಿ ಬಳಿ ಸ್ವಲ್ಪ ಎದೆನೋವು ಇದೆ ಎಂದು ಹೇಳಿಕೊಂಡಿದ್ದರು. ತಾಯಿಯಲ್ಲಿ ನೋವಿನ ಬಗ್ಗೆ ತಿಳಿಸಿ ಒಂದಷ್ಟು ನಿಮಿಷಗಳ ಬಳಿಕ ದಿಢೀರ್ ಆಗಿ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.